Saturday, June 21, 2025

Latest Posts

ಮಗು ಹುಟ್ಟಿದ 30 ದಿನಗಳಲ್ಲಿ ಕಣ್ಣಿನ ಟೆಸ್ಟ್ ಮಾಡಿಸಬೇಕು.

- Advertisement -

Health Tips: ಕಣ್ಣಿನ ಆರೋಗ್ಯ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಕಣ್ಣು ಸರಿಯಾಗಿ ಕಾಣಿಸದಿದ್ದರೆ, ಜೀವನ ಮಾಡುವುದೇ ಕಷ್ಟವಾಗುತ್ತದೆ. ಅದರಲ್ಲೂ ಮಕ್ಕಳಿಗೆ ಕಣ್ಣಿನ ಸಮಸ್ಯೆ ಬಂದರೆ, ಅವರ ಓದು ಬರಹಕ್ಕೆ ತೊಂದರೆಯಾಗುತ್ತದೆ. ಈ ಬಗ್ಗೆ ವೈದ್ಯೆಯಾದ ಮೈತ್ರಿಯವರು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..

ಮಕ್ಕಳು ಆರೋಗ್ಯವಾಗಿದ್ದರೂ ಕೂಡ ಒಂದು ವರ್ಷ, ಮೂರು ವರ್ಷ ಮತ್ತು 5 ವರ್ಷದ ಗ್ಯಾಪ್‌ನಲ್ಲಿ ದೃಷ್ಟಿಯ ತಪಾಸಣೆ ಮಾಡಿಸಬೇಕು ಅಂತಾರೆ ವೈದ್ಯರು. ಅದರಲ್ಲೂ ಶಾಲೆಗೆ ಸೇರಿಸುವ ಮುನ್ನವೇ ಕಣ್ಣಿನ ತಪಾಸಣೆ ಮಾಡಿಸುವುದು ಇನ್ನೂ ಉತ್ತಮ. ಇದರಿಂದ ಮಗುವಿನ ಕಣ್ಣಿನ ಆರೋಗ್ಯ ಹೇಗಿದೆ ಎಂದು ಗೊತ್ತಾಗುತ್ತದೆ.

ಇದನ್ನು ಬಿಟ್ಟು ಮಗು ಸಮಯಕ್ಕೂ ಮುನ್ನ ಜನಿಸಿದ್ದರೆ, ಅಥವಾ ಮಗುವಿನ ಬೆಳವಣಿಗೆ ಸರಿಯಾಗಿ ಇಲ್ಲವೆಂದಲ್ಲಿ, ಪೋಷಕರು ಮಗುವಿನ ಕಣ್ಣಿನ ತಪಾಸಣೆ ಮಾಡಲೇಬೇಕು. ಇನ್ನು ಮಕ್ಕಳು ನಿದ್ರೆ ಬರುವಾಗ ಮಾತ್ರ ಕಣ್ಣನ್ನು ಉಜ್ಜಿಕೊಳ್ಳುತ್ತಾರೆ. ಆದರೆ ಮಗು ಪದೇ ಪದೇ ಕಣ್ಣು ಉಜ್ಜಿಕೊಳ್ಳುತ್ತಿದ್ದರೆ, ಮಗುವಿನ ಕಣ್ಣಿನ ಆರೋಗ್ಯ ಹಾಳಾಗುತ್ತಿದೆ ಎಂಬ ಸೂಚನೆ ಸಿಕ್ಕಂತೆ.

ಇನ್ನು ಮಕ್ಕಳ ಮುಖ ನೋಡಿ ನೀವು ನಕ್ಕಾಗ, ಅದು ಸಹ ನಿಮ್ಮ ಮುಖ ನೋಡಿ ನಗಬೇಕು. ಆಗ ಮಗುವಿನ ದೃಷ್ಟಿ ಉತ್ತಮವಾಗಿದೆ ಎಂದರ್ಥ. ಆದರೆ ಮಗು ನೀವು ನಕ್ಕರೂ ಸಹ ನಗದಿದ್ದಾಗ, ಅದರ ದೃಷ್ಟಿಯಲ್ಲಿ ದೋಷವಿದೆ ಎಂದರ್ಥ. ಕೆಲ ಮಕ್ಕಳ ಕಣ್ಣುಗಳು ಅಡ್ಡತಿಡ್ಡವಾಗಿರುತ್ತದೆ. ಅಂಥ ಮಕ್ಕಳ ಕಣ್ಣಿನ ತಪಾಸಣೆ ಮಾಡಿಸುವುದು ಅತೀ ಮುಖ್ಯ ಎನ್ನುತ್ತಾರೆ ವೈದ್ಯರು. ವೈದ್ಯರು ಕಣ್ಣಿನ ಆರೋಗ್ಯದ ಬಗ್ಗೆ ಇನ್ನೂ ಏನೇನು ಹೇಳಿದ್ದಾರೆ ಅಂತಾ ತಿಳಿಯಲು ಈ ವೀಡಿಯೋ ನೋಡಿ..

ಸರ್ಪ ಸುತ್ತಿಗೆ ಯಾವ ಔಷಧಿ ಸೂಕ್ತ..? ನಾಟಿ ಔಷಧಿಯೋ..? ಇಂಗ್ಲೀಷ್ ಔಷಧಿಯೋ..?

ಒಂದೇ ಕಡೆಯಲ್ಲಿ ಕುಳಿತು ಕೆಲಸ ಮಾಡ್ತೀರಾ..? ಎಚ್ಚರ..!

ಚರ್ಮ ಕಸಿ ಹೇಗೆ ಮಾಡಲಾಗುತ್ತದೆ..?

- Advertisement -

Latest Posts

Don't Miss