ಇವರು ಮರದಿಂದ ಹಣ್ಣು ಕೀಳುವ ಟ್ರಿಕ್ ಎಷ್ಟು ಸೂಪರ್ ಆಗಿದೆ ನೋಡಿ..

ನಮ್ಮ ಭಾರತೀಯ ಕೃಷಿ ಪದ್ಧತಿಯಲ್ಲಿ ಹಲವರು, ಹಲವು ರೀತಿಯ ಟ್ರಿಕ್ ಬಳಸಿ, ತಮ್ಮ ಬೆಳೆ ಬೆಳೆಯುತ್ತಾರೆ. ಅದನ್ನ ತೆಗೆಯುವಾಗಲು ಸುಮಾರು ಟ್ರಿಕ್‌ಗಳಿದೆ. ಈಗಂತೂ ಅಷ್ಟುದ್ದ ಅಡಿಕೆ ಮಮರದ ಅಡಿಕೆ ಬೆಳೆಯನ್ನು ತೆಗೆಯುವುದಿದ್ದರೆ, ಯಾರದ್ದೂ ಸಹಾಯವಿಲ್ಲದೇ, ಅದಕ್ಕಾಗಿಯೇ ಸಿಗುವ ಯಂತ್ರ ಬಳಸಿ, ಅಡಿಕೆ ತೆಗಿಯಬಹುದು. ಅದೇ ರೀತಿ, ಹಣ್ಣು ಹಂಪಲು ತೆಗೆಯುವುದಿದ್ದರೂ, ಹಲವು ಉಪಾಯಗಳನ್ನು ಬಳಸಲಾಗುತ್ತದೆ.

ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಟ್ವೀಟರ್ ಖಾತೆಯಲ್ಲಿ ಪ್ರತಿಸಲ ಒಂದಲ್ಲ ಒಂದು ವೀಡಿಯೋ ಶೇರ್ ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಹಾಗೆ ಶೇರ್ ಮಾಡಿದ ವೀಡಿಯೋದಲ್ಲಿರುವವರಿಗೆ ಸಹಾಯ ಮಾಡುವ ಮನಸ್ಸು ಕೂಡ ಮಾಡ್ತಾರೆ. ಸಹಾಯವೂ ಮಾಡಿದ್ದಾರೆ. ಅದೇ ರೀತಿ ಇಂದೊಂದು ವೀಡಿಯೋ ಶೇರ್ ಮಾಡಿದ್ದು, ಆ ವೀಡಿಯೋದಲ್ಲಿ ಇಬ್ಬರು ತಮ್ಮ ಮನೆ ಗಿಡದಿಂದ ಹಣ್ಣನ್ನ ಹೇಗೆ ಕೀಳೋದು ಅನ್ನೋ ಬಗ್ಗೆ ತೋರಿಸಿಕೊಟ್ಟಿದ್ದಾರೆ.

ಒಂದು  ಬಾಟಲಿಯನ್ನು ತೆಗೆದುಕೊಂಡು ಅದರ ಒಂದು ಭಾಗ ನಾಲ್ಕು ಪಾರ್ಟ್ ಮಾಡಬೇಕು. ನಂತರ ಆ ಪಾರ್ಟ್‌ಗಳಿಗೆ ನೇರವಾಗಿ ಬಾಟಲಿಗೆ ಹೋಲ್ ಮಾಡಬೇಕು. ನಂತರ ಅದಕ್ಕೆ ಗಟ್ಟಿಯಾದ ದಾರ ಹಾಕಿ ನಾಲ್ಕು ಭಾಗಗಳಿಗೆ ಸೇರಿಸಬೇಕು. ಈಗ ಆ ಬಾಟಲಿಯನ್ನ ಪೈಪ್‌ಗೆ ಅಳವಡಿಸಿ, ಹಣ್ಣು ತೆಗೆಯಬೇಕು. ಈ ಟ್ರಿಕ್ ವೀಡಿಯೋ ಇಲ್ಲಿದ್ದು, ಇದನ್ನ ನೋಡಿದ್ರೆ, ಎಷ್ಟು ಸೂಪರ್ ಐಡಿಯಾ ಇದು ಅಂತಾ ನಿಮಗೆ ತಿಳಿಯುತ್ತೆ. ಈ ವೀಡಿಯೋ ನೋಡಿ, ಉದ್ಯಮಿ ಆನಂದ್ ಮಹೀಂದ್ರಾ, ಶ್ಲಾಘಿಸಿದ್ದಾರೆ.

 

About The Author