ನಟ, ನಿರೂಪಕ ನಿರಂಜನ್ ದೇಶ್‌ಪಾಂಡೆ ಸದ್ಯ ಕಲರ್ಸ್ ಕನ್ನಡದ ರಿಯಾಲಿಟಿ ಶೋನಲ್ಲಿ ಆ್ಯಂಕರ್ ಆಗಿ ಬ್ಯುಸಿ ಇದ್ದಾರೆ. ಈ ಬ್ಯುಸಿ ಶೆಡ್ಯೂಲ್ ಮಧ್ಯೆಯೂ ನಿರಂಜನ್ ಕರ್ನಾಟಕ ಟಿವಿಗೆ ಸಂದರ್ಶನ ಕೊಟ್ಟಿದ್ದು, ಅವರ ಲೈಫ್ ಸ್ಟೋರಿ ಹೇಳಿದ್ದಾರೆ. ಅವರು ಹುಟ್ಟಿ, ಬೆಳೆದಿದ್ದೆಲ್ಲಿ..? ಅವರೆಲ್ಲಿ ಓದಿದ್ದು..? ಎಲ್ಲದರ ಬಗ್ಗೆಯೂ ನಿರಂಜನ್ ಮಾತನಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರಿಂದ “ಗುರು ಶಿಷ್ಯರು” ವೀಕ್ಷಣೆ.
ನಿರಂಜನ್ ಅಪ್ಪ ಹುಬ್ಬಳ್ಳಿಯವರು. ಹಾಗಾಗಿ ನಿರಂಜನ್‌ಗೆ ತಾವು ಗಂಡು ಮೆಟ್ಟಿದ ನಾಡಿನ ಮಗ ಅಂತಾ ಹೇಳಿಕೊಳ್ಳೋಕ್ಕೇನೆ ಹೆಮ್ಮೆಯಂತೆ. ಬೆಂಗಳೂರ ದಕ್ಷಿಣ ಭಾಗದಲ್ಲಿ ನಿರಂಜನ್ ಮನೆ ಇದ್ದು, ಅವರಿಗೆ ಹಬ್ಬ ಹರಿದಿನ, ಸಾಂಸ್ಕೃತಿಕ ಕಾರ್ಯಕ್ರಮವೆಲ್ಲ ತುಂಬಾ ಇಷ್ಟ. ಅಂಥ ವಾತಾವರಣದಲ್ಲಿ ಬೆಳೆದ ಕಾರಣ ಅವರು ಮಾತಿನ ಮಲ್ಲರಾಗಿದ್ದಾರೆ ಅಂತಾನೇ ಹೇಳಬಹುದು. ನಮ್ಮ ನಾಡು ನುಡಿಯ ಬಗ್ಗೆ ನಿರಂಜನ್ ಮತ್ತಷ್ಟು ಮಾತನಾಡಿದ್ದಾರೆ.
‘ಕಾಂತಾರ’ ಮೆಚ್ಚಿದ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್
ನಿರಂಜನ್ 2ನೇ ಕ್ಲಾಸಿನಲ್ಲಿರಬೇಕಾದ್ರೆ, ಅವರ ಅಪ್ಪ ಅಮ್ಮ ಬೇರೆಯಾಗಿದ್ರಂತೆ. ಹಾಗಾಗಿ ಅಷ್ಟು ಚಿಕ್ಕ ವಯಸ್ಸಿಗೆ ಅಕ್ಕ ಮತ್ತು ತಾಯಿ ಜೊತೆ ಇದ್ದ ನಿರಂಜನ್‌ಗೆ ಜವಾಬ್ದಾರಿ ಹೆಗಲೇರಿತ್ತು. ಬೇರೆ ಮಕ್ಕಳು ಖುಷಿಯಾಗಿ ಟೆನ್ಶನ್ ಫ್ರೀಯಾಗಿ ಆಟ ಆಡಿಕೊಂಡಿದ್ರೆ, ನಾನು ಮಾತ್ರ ಹೀಗೆ ಜವಾಬ್ದಾರಿ ಹೊತ್ತು ತಿರ್ಗತಿದಿನಲಾ ಅಂತಾ ನಿರಂಜನ್‌ಗೆ ಬೇಸರವಾಗ್ತಿತ್ತಂತೆ. ಅವಳಿ ಜವಳಿಯಾಗಿದ್ದ ನಳಿನಿ ಮತ್ತು ನಿರಂಜನ್ ಎಲ್ಲಿ ಹೋದ್ರೂ ಒಟ್ಟಿಗೆ ಇರ್ಬೇಕಿತ್ತಂತೆ. ಅದಕ್ಕೆ ನಿರಂಜನ್‌ಗೆ ಬೇಸರವಾಗ್ತಿತ್ತು. ಸ್ವತಂತ್ರವಾಗಿ ತಿರುಗಾಡಲೂ ಕೂಡ ನನಗೆ ಸಾಧ್ಯವಿಲ್ಲ ಅನ್ನೋ ಬೇಸರವಿತ್ತಂತೆ.
ದರ್ಶನ್, ಧನ್ವೀರ್ ಗೌಡ ಬಾಂಧವ್ಯಕೆ ಎಲ್ಲೆಎಲ್ಲಿದೆ…?!
ಆದ್ರೆ ಮುಂದೆ ದಿನಗಳೆದಂತೆ, ನಳಿನಿ ಮತ್ತು ನಿರಂಜನ್ ಬೆಸ್ಟ್ ಫ್ರೆಂಡ್ಸ್ ಥರಾ ಇದ್ರಂತೆ. ಒಮ್ಮೆ ಶಾಲೆಯಿಂದ ಮನೆಗೆ ಬರುವಾಗ, ಅಕ್ಕನಿಗೆ ಸುಸ್ತಾಗಿತ್ತಂತೆ. ಇದಕ್ಕೊಂದು ಐಡಿಯಾ ಮಾಡಿದ ನಿರಂಜನ್, ಅಕ್ಕನನ್ನು ಆಟೋ ಹತ್ತಿಸಿ, ಮನೆತನಕ ಕರೆದುಕೊಂಡು ಬಂದ್ರಂತೆ. ನಂತರ ಆಟೋ ಡ್ರೈವರ್ ಹಣ ಕೇಳಿದ್ರೆ, ನಿರಂಜನ್ ಬಸ್ ಪಾಸ್ ತೋರ್ಸಿ. ನಮ್ಮ ಹತ್ರ ಇದೇ ಇರೋದು, ನಮ್ಮಮ್ಮ ದುಡ್ಡು ಕೊಟ್ಟಿಲ್ಲ. ಯಾರಾದ್ರೂ ಕೇಳಿದ್ರೆ ಈ ಪಾಸ್ ತೋರ್ಸು ಅಂತಾ ಹೇಳಿದ್ದಾರೆ ಅಂದ್ರಂತೆ. ಅದಕ್ಕೆ ನಕ್ಕ ಆಟೋ ಡ್ರೈವರ್, ಈ ಮಕ್ಕಳು ಎಷ್ಟು ಇನೋಸೆಂಟ್ ಅಂತಾ ದುಡ್ಡು ತೆಗೆದುಕೊಳ್ಳದೇ ಹಾಗೇ ಹೋದ್ರಂತೆ. ಈ ಬಗ್ಗೆ ಮಾತನಾಡಿದ ನಿರಂಜನ್, ಆ ಆಟೋ ಡ್ರೈವರ್‌ಗೆ ಥ್ಯಾಂಕ್ಸ್ ಹೇಳಿದ್ದಾರೆ. ಹೀಗೆ ಬಾಲ್ಯದಲ್ಲಿ ಮಾಡಿದ ತರ್ಲೆ ತುಂಟಾಟದ ಬಗ್ಗೆ ನಿರಂಜನ್ ಮಾತನಾಡಿದ್ದಾರೆ.