Movie News: ನಟಿ ಸನ್ನಿಲಿಯೋನ್ ನೀಲಿತಾರೆಯಾಗಿದ್ದರೂ, ಆಕೆ ಮಾಡುವ ಸಮಾಜ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಹಾಗಾಗಿಯೇ ಅವರು ನೀಲಿ ತಾರೆಯಾದರೂ ಜನ ಆಕೆಗೆ ಗೌರವ ಕೊಡುತ್ತಾರೆ. ಅನಾಥ ಮಕ್ಕಳನ್ನು ನೋಡಿಕೊಳ್ಳುವುದು, ಬಡವರಿಗೆ ಸಹಾಯ ಮಾಡುವುದು ಹೀಗೆ ಹಲವು ಸಮಾಜ ಸೇವೆಗಳನ್ನು ಮಾಡಿರುವ ಸನ್ನಿ, ತನ್ನ ಮನೆಕೆಲಸದಾಕೆಯ ಮಗಳು ಕಳೆದು ಹೋದಾಗ, ಅವಳನ್ನು ಹುಡುಕಿ ಕೊಟ್ಟವರಿಗೆ ತಾನು 50 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಳು.
ಸನ್ನಿ ಮನೆಕೆಲಸದಾಕೆಯ ಮಗಳಾದ 9 ವರ್ಷದ ಅನುಷ್ಕಾ, ಮುಂಬೈನ ಜೋಗೇಶ್ವರದಿಂದ ನಾಾಪತ್ತೆಯಾಗಿದ್ದಳು. ಗುರುವಾರ ಸಂಜೆಯಿಂದ ಕಾಣೆಯಾಗಿರುವ ಈ ಮಗುವನ್ನು ಹುಡುಕಿ ಕೊಟ್ಟವರಿಗೆ, ತಾನು 50 ಸಾವಿರ ರೂಪಾಯಿ ನೀಡುತ್ತೇನೆ ಎಂದು ಹೇಳಿ, ಇನ್‌ಸ್ಟಾಗ್ರಾಮ್ ನಲ್ಲಿ ಫೋಟೋ ಮತ್ತು ಫೋನ್ ನಂಬರ್ ಸಹ ಹಂಚಿಕೊಂಡಿದ್ದರು.
ಇದೀಗ 24 ಗಂಟೆಯೊಳಗೆ ಮಗು ಸಿಕ್ಕಿದ್ದು, ಮಗು ಆರೋಗ್ಯವಾಗಿದೆ. ಈ ಬಗ್ಗೆಯೂ ಸನ್ನಿ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಬರೆದುಕೊಂಡಿದ್ದು, ದೇವರ ದಯೆಯಿಂದ, ನಮ್ಮೆಲ್ಲರ ಪ್ರಾರ್ಥನೆಯಿಂದ, ನಿಮ್ಮ ಆಶೀರ್ವಾದದಿಂದ ಅನುಷ್ಕಾ ನಮಗೆ ಸಿಕ್ಕಿದ್ದಾಳೆ. ನಾನು ಹಾಕಿದ ನ್ಯೂಸನ್ನು ನೀವೇಲ್ಲರೂ ಶೇರ್ ಮಾಡಿ, ನನಗೆ ಸಹಾಯ ಮಾಡಿದ್ದೀರಿ. ನಿಮದೆ ಹೃತ್ಪೂರ್ವಕ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಆದರೆ ಆ ಮಗು ಎಲ್ಲಿ ಹೋಗಿತ್ತು..? ಹೇಗೆ ಕಾಣೆಯಾಯ್ತು..? ಆಕೆಯನ್ನು ಹುಡುಕಿದ್ದು ಯಾರು ಅನ್ನೋದು ಮಾತ್ರ ಈವರೆಗೂ ಸನ್ನಿ ಎಲ್ಲಿಯೂ ಹೇಳಲಿಲ್ಲ.
Prajwal deveraj; ಮತ್ತೊಂದು ಸವಾಲಿನ ಪಾತ್ರಕ್ಕೆ ಡೈನಾಮಿಕ್ ಪ್ರಿನ್ಸ್ ಸಿದ್ದ..!