Sunday, September 8, 2024

Latest Posts

ಯಾವ ಮಹಿಳೆಗೆ ಈ 3 ಅಭ್ಯಾಸವಿರುತ್ತದೆಯೋ, ಅಂಥ ಮನೆಯಲ್ಲಿ ನೆಮ್ಮದಿಯೇ ಇರುವುದಿಲ್ಲ..

- Advertisement -

Spiritual: ಚಾಣಕ್ಯರು ಜೀವನ ನಡೆಸುವ ಕ್ರಮ, ಹಣ ಉಳಿಸುವ ಕ್ರಮ, ಜೀವನ ಸಂಗಾತಿಯನ್ನು ಆರಿಸುವ ಕ್ರಮ. ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಮಹಿಳೆಯಲ್ಲಿ ಎಂಥ ಗುಣಗಳಿದ್ದರೆ ಉತ್ತಮ. ಎಂಥ ಗುಣಗಳು ಮಹಿಳೆಯರಿಗೆ ಇರಬಾರದು ಅಂತಾ ಚಾಣಕ್ಯರು ಹೇಳಿದ್ದಾರೆ. ಇಂದು ನಾವು ಮಹಿಳೆಗೆ ಯಾವ 3 ಗುಣವಿರಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಮೊದಲನೇಯ ಗುಣ ಸ್ವಾರ್ಥ. ಯಾವ ಹೆಣ್ಣಿನ ಸ್ವಾರ್ಥವಿರುತ್ತದೆಯೋ, ಅಂಥವರನ್ನು ಕಟ್ಟಿಕೊಂಡವರ ಏಳಿಗೆ ಎಂದಿಗೂ ಆಗುವುದಿಲ್ಲ. ಅಂಥ ಮನೆಯ ಜನ ಎಂದಿಗೂ ಉದ್ಧಾರವಾಗುವುದಿಲ್ಲ. ಏಕೆಂದರೆ, ಅವರ ಏಳಿಗೆಗೆ, ಆ ಹೆಣ್ಣಿನ ಸ್ವಾರ್ಥ ಗುಣವೇ ಅಡ್ಡಿ ಬರುತ್ತದೆ. ಅಂಥ ಮನೆಯ ಹೆಣ್ಣು ದಾನ ಮಾಡುವಾಗ, ಖರ್ಚು ಮಾಡುವಾಗ ಎಲ್ಲ ಸಮಯದಲ್ಲೂ ಅಡ್ಡಬಂದು ಸ್ವಾರ್ಥ ತೋರಿಸುತ್ತಾಳೆ. ಹಾಗಾಗಿ ಅಂಥವರು ಉದ್ಧಾರವಾಗಲು ಸಾಧ್ಯವೇ ಇಲ್ಲ.

ಎರಡನೇಯ ಗುಣ ಸುಳ್ಳು ಹೇಳುವ ಗುಣ. ಯಾವ ಮನೆಯಲ್ಲಿ ಹೆಣ್ಣು ಮಕ್ಕಳು ಮಾತೆತ್ತಿದರೆ, ಸುಳ್ಳು ಹೇಳುತ್ತಾರೋ, ಅಂಥ ಮನೆಯಲ್ಲಿ ಎಂದಿಗೂ ನೆಮ್ಮದಿ ಇರುವುದಿಲ್ಲ. ಸಕಾರಾತ್ಮಕತೆ ಇರುವುದಿಲ್ಲ. ಸುಳ್ಳು ಹೇಳುವ ಚಾಳಿ ಇರುವವರು, ಇಬ್ಬರ ನಡುವೆ ಜಗಳ ಹಚ್ಚಲು ಮುಂದಿರುತ್ತಾರೆ. ಇಂಥವರ ಜೊತೆ ಇರುವುದು ತುಂಬಾ ಕಷ್ಟದ ಕೆಲಸವಾಗಿದೆ.

ಮೂರನೇಯ ಗುಣ ಸಿಡುಕುವ ಗುಣ. ಯಾವ ಹೆಣ್ಣಿನ ಮಾತಿನಲ್ಲಿ ಸಿಹಿ ಇರುವುದಿಲ್ಲವೋ, ಯಾವ ಹೆಣ್ಣು ಬರೀ ಸಿಡುಕಿಕೊಂಡೇ ಮಾತನಾಡುತ್ತಾಳೋ, ಅಂಥ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಹೆಣ್ಣು ಸಿಡುಕಿಕೊಂಡೇ ಮಾತನಾಡಿದಾಗ, ಕೊಂಕು ಮಾತನಾಡಿದಾಗ, ಪತಿ- ಮಕ್ಕಳಿಗೆ, ಹಿರಿಯರಿಗೆ ಕೋಪ ಬರುತ್ತದೆ. ಆಗ ಅವರೂ ಎದುರು ಮಾತನಾಡುತ್ತಾರೆ. ಅಲ್ಲಿ ಜಗಳವಾಗುತ್ತದೆ. ಹೀಗೆ ಬರೀ ಸುಡುಕುವ ಹೆಂಗಸರು ಇರುವ ಮನೆಯಲ್ಲಿ ಎಂದಿಗೂ ನೆಮ್ಮದಿ ಇರಲು ಸಾಧ್ಯವಿಲ್ಲ. ಇನ್ನು ಇಲ್ಲಿ ಹೇಳಿರುವ ಎಲ್ಲ ಗುಣಗಳು ಪುರುಷನಲ್ಲಿದ್ದರೂ ಕೂಡ, ಅಂಥ ಮನೆಯಲ್ಲಿ ಎಂದಿಗೂ ಸಕಾರಾತ್ಮಕತೆ ಇರುವುದಿಲ್ಲ.

ಶ್ರೀಮಂತರಾಗಬೇಕು ಅಂದ್ರೆ ಚಾಣಕ್ಯರು ಹೇಳಿದ ಈ ಮಾತನ್ನು ಕೇಳಿ..

ಗಂಡನ ಅನುಮತಿ ಇಲ್ಲದೇ, ಪತ್ನಿ ಇಂಥ ಸ್ಥಳಗಳಿಗೆ ಹೋಗಲೇಬಾರದು..

ಮನೆಯಲ್ಲಿ ಇಂಥ ವಸ್ತುಗಳಿದ್ದರೆ, ನೀವು ಎಂದಿಗೂ ಉದ್ಧಾರವಾಗುವುದಿಲ್ಲ..

- Advertisement -

Latest Posts

Don't Miss