ಇದೇ ಆಗಸ್ಟ್ 11ಕ್ಕೆ ರಕ್ಷಾಬಂಧನ ಬಂದಿದೆ. ಸಹೋದರಿಯರು ಸಹೋದರರಿಗೆ ರಾಖಿ ಕಟ್ಟೋಕ್ಕೆ ರೆಡಿಯಾಗಿದ್ದಾರೆ. ಪ್ರತೀ ವರ್ಷ ಮಾರುಕಟ್ಟೆಗೆ ವೆರೈಟಿ ವೆರೈಟಿ ರಾಖಿ ಬಂದ ಹಾಗೆ, ಈ ಬಾರಿಯೂ ಡಿಫ್ರೆಂಟ್ ಆಗಿರುವ ರಾಖಿ, ಮಾರ್ಕೆಟ್‌ಗೆ ಲಗ್ಗೆ ಇಟ್ಟಿದೆ. ಪುನೀತ್ ಫೋಟೋ ಇರುವ ರಾಖಿ, ಈ ಬಾರಿ ಸದ್ದು ಮಾಡುತ್ತಿದೆ.
ಕೆಂಪು ಕಲರ್ ದಾರಕ್ಕೆ ಸ್ಟೋನ್ಸ್ ಪೋಣಿಸಲಾಗಿದ್ದು, ಮಧ್ಯದಲ್ಲಿ ಅಪ್ಪು ಫೋಟೋ ಹಾಕಿ, ಅದರ ಸುತ್ತಲೂ ಕ್ರೀಮ್ ಕಲರ್ ಮುತ್ತು ಮತ್ತು ಮರೂನ್ ಕಲರ್ ಕುಂದನ್ ಡಿಸೈನ್ ಮಾಡಲಾಗಿದೆ. ಈ ರಾಖಿ ನೋಡಲು ಅದ್ಭುತವಾಗಿದ್ದು, ನೋಡುಗರ ಗಮನ ಸೆಳೆದಿದೆ. ಅಪ್ಪು ಇಹಲೋಕ ತ್ಯಜಿಸಿ, ವರ್ಷ ಸಮೀಪಿಸುತ್ತಿದೆ. ಆದ್ರೆ ಅವರು ಈಗಲೂ ಅವರ ಅಭಿಮಾನಿಗಳ ಪಾಲಿಗೆ, ಸದಾ ಜೀವಂತವಾಗಿದ್ದಾರೆ.
ಅಪ್ಪು ಇಲ್ಲದಿದ್ದರೂ ಅಪ್ಪು ಫ್ಯಾನ್ಸ್ ಮಾತ್ರ, ತಮ್ಮ ನೆಚ್ಚಿನ ಹೀರೋ ಕ್ರೇಜ್ ಎಲ್ಲಿಯೂ ಕಡಿಮೆಯಾಗದಂತೆ ನೋಡಿಕೊಂಡಿದ್ದಾರೆ. ಸದ್ಯ ಅಪ್ಪು ರಾಖಿ ಟ್ರೆಂಡ್‌ನಲ್ಲಿದ್ರೆ, ನೆಕ್ಸ್ಟ್ ಗಣೇಶ ಚತುರ್ಥಿಗೆ ಅಪ್ಪು ಗಣಪ ಮಾರುಕಟ್ಟೆಗೆ ಲಗ್ಗೆ ಇಡಲು ರೆಡಿಯಾಗಿದ್ದಾನೆ. ನಟನೆ, ನೃತ್ಯ, ಸಂಗೀತವಷ್ಟೇ ಅಲ್ಲದೇ, ಸಮಾಜ ಮುಖಿ ಕಾರ್ಯಗಳಿಂದ ಎಲ್ಲರ ಮನಸ್ಸಿನಲ್ಲಿ ಮನೆ ಮಾಡಿರುವ ಅಪ್ಪುವನ್ನು ದ್ವೇಷಿಸುವವರೂ ಯಾರೂ ಇಲ್ಲ ಅನ್ನೋದೇ ಗ್ರೇಟ್ ಸಂಗತಿ.