Sunday, September 8, 2024

Latest Posts

ಪ್ಯಾಡ್‌ಗಳು ಒಳ್ಳೆಯದೋ Menstrual ಕಪ್‌ಗಳು ಒಳ್ಳೆಯದೋ..?

- Advertisement -

Health Tips: ಮೊದಲೆಲ್ಲ ಮುಟ್ಟಿನ ದಿನಗಳಲ್ಲಿ ಬಟ್ಟೆ ಬಳಸುತ್ತಿದ್ದರು. ಅದಾದ ಬಳಿಕ, ಬಟ್ಟೆ ಬದಲು ಪ್ಯಾಡ್ ಬಳಸಲು ಶುರು ಮಾಡಿದರೂ. ಏಕೆಂದರೆ ಬಟ್ಟೆ ಬಳಸುವುದರಿಂದ, ಇನ್‌ಫೆಕ್ಷನ್ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಪ್ಯಾಡ್ ಬಳಸಲು ಶುರ ಮಾಡಿದರು. ಈಗ ಹೆಚ್ಚಿನವರು ಮೆನ್ಸ್ಟ್ರುವಲ್ ಕಪ್ ಬಳಸುತ್ತಾರೆ. ಹಾಾಗಾದ್ರೆ ಪ್ಯಾಡ್, ಮತ್ತು ಮೆನ್‌ಸ್ಟ್ರುವಲ್ ಕಪ್‌ನಲ್ಲಿ ಯಾವುದು ಉತ್ತಮ ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ.

ವೈದ್ಯೆಯಾದ ಡಾ.ಚಂದ್ರಿಕಾ ಆನಂದ್ ಅವರು, ಈ ಬಗ್ಗೆ ವಿವರಿಸಿದ್ದು, ಪ್ರತಿ ದಿನಕ್ಕೆ 80 ಕೋಟಿ ಹೆಣ್ಣು ಮಕ್ಕಳು ಮುಟ್ಟಾಗುತ್ತಾರೆ ಎಂದು ಹೇಳಿದ್ದಾರೆ. ಅಲ್ಲದೇ, ಪ್ಯಾಡ್‌ಗಿಂತಲೂ, ಮೆನ್‌ಸ್ಟ್ರುವಲ್ ಕಪ್ ಬಳಸೋದು ಉತ್ತಮ ಅಂತಾರೆ ವೈದ್ಯರು. ಏಕೆಂದರು ಇದು ಆರೋಗ್ಯಕ್ಕೂ, ಪರಿಸರಕ್ಕೂ ಎರಡಕ್ಕೂ ಉತ್ತಮವಾಗಿದೆ.

ಇನ್ನು ಪ್ಯಾಡ್ ಯಾಕೆ ಅಷ್ಟು ಉತ್ತಮವಲ್ಲ ಎಂದರೆ, ಪ್ಲಾಸ್ಟಿಕ್ ಕಂಟೆಂಟ್ ಹೊಂದಿದ್ದು, ಅದರಲ್ಲೇ ಸ್ವಲ್ಪ ಕಾಟನ್ ಬಳಸಿರುತ್ತಾರೆ. ಅಲ್ಲದೇ, ಪ್ಯಾಕ್ಟರಿಯಲ್ಲೇ ಪ್ಯಾಡ್ ತಯಾರಾಗುವಾಗ, ಅಲ್ಲೇ ಅದರಲ್ಲಿ ಧೂಳಿನ ಕಣ ಸೇರಿ, ಹಲವು ಕೆಮಿಕಲ್ ಸೇರಿಕೊಳ್ಳುತ್ತದೆ. ಇದನ್ನು ಬಳಸುವುದರಿಂದ ಆರೋಗ್ಯವೂ ಹಾಳಾಗುತ್ತಿದೆ. ಅಲ್ಲದೇ, ವಾತಾವರಣದಲ್ಲೂ ಕಲ್ಮಶ ಹೆಚ್ಚಾಗುತ್ತಿದೆ. ಹಾಗಾಗಿ ಮೆನ್‌ಸ್ಟ್ರುವಲ್‌ ಕಪ್ ಬಳಸೋದು ಉತ್ತಮ ಅಂತಾರೆ ವೈದ್ಯರು.

ಅಲ್ಲದೇ, ಪ್ಯಾಡ್ ಆದರೆ, ಒಮ್ಮೆ ಮುಟ್ಟಾದರೆ, ದಿನಕ್ಕೆ 3ರಿಂದ 4 ಪ್ಯಾಡ್ ಬಳಸಬೇಕು. ಅಂದರೆ, ಒಮ್ಮೆ ಮುಟ್ಟಾದರೆ, ಒಂದು ಪ್ಯಾಕ್ ಪ್ಯಾಡ್ ಖಾಲಿಯಾಗುತ್ತದೆ. ಆದರೆ ನೀವು ಮೆನ್‌ಸ್ಟ್ರುವಲ್ ಕಪ್ ಒಮ್ಮೆ ಖರೀದಿಸದರೆ, ಹಲವು ವರ್ಷಗಳ ಕಾಲ ಅದನ್ನು ನೀವು ಬಳಸಬಹುದು. ಹಾಗಾಗಿ ಪ್ಯಾಡ್, ಬಟ್ಟೆಗಿಂತ, ಮೆನ್‌ಸ್ಟ್ರುವಲ್ ಕಪ್ಸ್ ಉತ್ತಮ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss