Health Tips: ದಿನವಿಡೀ ಕಷ್ಟಪಟ್ಟು ಕೆಲಸ ಮಾಡಿದಾಗ, ದಣಿವಾಗುತ್ತದೆ. ಹಾಗೆ ದಣಿವಾದಾಗಲೇ ಗೊರಕೆ ಹೊಡೆಯವಷ್ಟು ಘಾಡವಾದ ನಿದ್ರೆ ಬರುತ್ತದೆ. ಭಾರತದಲ್ಲಿ ಗೊರಕೆ ಹೊಡೆಯುವುದು ಸಾಮಾನ್ಯ ವಿಷಯ. ಆದ್ರೆ ವಿದೇಶದಲ್ಲಿ ಎಷ್ಟೋ ವಿವಾಹಿತೆಯರು, ತಮ್ಮ ಪತಿ ರಾತ್ರಿಯಿಡೀ ಗೊರಕೆ ಹೊಡೆಯುತ್ತಾರೆ. ಹಾಗಾಗಿ ನಮ್ಮ ನಿದ್ರೆ ಹಾಳಾಗುತ್ತದೆ. ಈತನ ಜೊತೆ ಬಾಳಲಾಗುತ್ತಿಲ್ಲವೆಂದು ಹೇಳಿ, ಡಿವೋರ್ಸ್ ನೀಡಿದ್ದಾರೆ. ವೈದ್ಯರಾದ ಡಾ.ಆಂಜೀನಪ್ಪ ಅವರು ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ ನೋಡಿ.
ದೇಹದ ತೂಕ ಹೆಚ್ಚಾದಾಗ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ, ದಣಿವಾದಾಗ, ಹೀಗೆ ಹಲವು ಕಾರಣಗಳಿಂದಾಗಿ, ಗೊರಕೆ ಹೊಡೆಯುತ್ತಾರೆ. ಇನ್ನು ಕೆಲವರು ಗೊರಕೆ ಹೊಡೆಯುವುದೇ ಸಮಸ್ಯೆ ಎಂದು, ಚಿಕಿತ್ಸೆ ಪಡೆಯುವವರಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ಮದ್ಯಪಾನ, ಧೂಮಪಾನ ಹೆಚ್ಚು ಮಾಡಬಾರದು. ರಾತ್ರಿ ಹೊಟ್ಟೆ ತುಂಬ ತಿಂದು ಮಲಗಬಾರದು. ಹೀಗೆ ಮಾಡಿದಾಗಲೇ ಹೆಚ್ಚು ಗೊರಕೆ ಬರುತ್ತದೆ. ಅಲ್ಲದೇ ಊಟವಾದ ತಕ್ಷಣ ನಿದ್ರಿಸಬಾರದು. ಸ್ವಲ್ಪ ಹೊತ್ತು ವಾಕ್ ಮಾಡಿ, ಬಳಿಕ ನಿದ್ರಿಸಬೇಕು. ಇಲ್ಲವಾದಲ್ಲಿ, ಗೊರಕೆ ಬರುವುದರ ಜೊತೆಗೆ, ದೇಹದಲ್ಲಿ ಕೊಬ್ಬಿನಂಶ ಹೆಚ್ಚಾಗಿ, ತೂಕ ಕೂಡ ಹೆಚ್ಚಾಗುತ್ತದೆ. ಅಲ್ಲದೇ, ಆರೋಗ್ಯವೂ ಹಾಳು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.