ಚೈಲ್ಡ್ ಹುಡ್ ಅಸ್ತಮಾ ಬಗ್ಗೆ ಗಾಬರಿ ಇದೆಯಾ..? ಈ ಬಗ್ಗೆ ವೈದ್ಯರೇ ಸಲಹೆ ಕೊಟ್ಟಿದ್ದಾರೆ ನೋಡಿ..

Health Tips: ಅಸ್ತಮಾದ ಲಕ್ಷಣಗಳೇನು..? ಇದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಅನ್ನುವ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ಕೂಡ ವೈದ್ಯರಾದ ಬೀಮ್‌ಸೇನ್ ರಾವ್ ಅವರು, ಚೈಲ್ಡ್‌ಹುಡ್ ಅಸ್ತಮಾ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಗಾಳಿಯಲ್ಲಿರುವ ಧೂಳಿನಿಂದ ಬರುವ ರೋಗವೇ ಅಸ್ತಮಾ. ಕೆಲವರಿಗೆ ಆಹಾರ ಸೇವನೆಯಿಂದ ಬರಬಹುದು. ಆದರೆ ಅದು ಬಹಳ ಅಪರೂಪ. ಕೆಲವರಿಗೆ ಪುಟ್ಟ ಮಕ್ಕಳಿರುವಾಗಿಂದಲೇ ಅಸ್ತಮಾ ಇರುತ್ತದೆ. ಹಾಗಾಗಿ ಹಲವು ಪೋಷಕರಿಗೆ ಈ ಬಗ್ಗೆ ಗೊಂದಲ ಇರುತ್ತದೆ. ಹುಟ್ಟಿದಾಗ ಶುರುವಾದ ಈ ಖಾಯಿಲೆ, ಕೊನೆಯವರೆಗೂ ಇರುತ್ತಾ..? ಇದಕ್ಕೆ ಔಷಧಿ ಕೊಡುತ್ತಲೇ ಇರಬೇಕಾ ಎಂದು. ಆದರೆ ವೈದ್ಯರು ಹೇಳುವ ಪ್ರಕಾರ, ಪೋಷಕರು ಸರಿಯಾಗಿ ಔಷಧೋಪಚಾರ ಮಾಡಿದರೆ, ಕೆಲ ವರ್ಷಗಳಲ್ಲೇ ಮಕ್ಕಳ ಅಸ್ತಮಾ ಖಾಯಿಲೆಯನ್ನು ಗುಣಪಡಿಸಬಹುದು.

ಮೊದಲೆಲ್ಲಾ ಅಸ್ತಮಾ ಅನ್ನೋದು ಧೂಮಪಾನ ಮಾಡುವವರಿಗೆ ಮಾತ್ರ ಬರುತ್ತಿತ್ತು. ಆದರೆ ಈಗ ಸಿಟಿಗಳಲ್ಲಿ ಧೂಳಿನಿಂದಾಗಿ, ಅಸ್ತಮಾ ಖಾಯಿಲೆಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಾಹನಗಳಿಂದ ಬರುವ ಧೂಳುಗಳಿಂದಾಗಿ, ಅಸ್ತಮಾ ಹೆಚ್ಚಾಗುತ್ತಿದೆ. ಇನ್ನೂ ಮುಖ್ಯವಾದ ವಿಷಯ ಅಂದ್ರೆ, ಯಾವ ಹೆಣ್ಣು ತಾನು ಗರ್ಭಿಣಿಯಾಗಿದ್ದಾಗ, ಹೆಚ್ಚು ಧೂಳಿನಲ್ಲಿ ಓಡಾಡುತ್ತಾಳೋ, ಅಥವಾ ಅವಳ ದೇಹದಲ್ಲಿ ಹೆಚ್ಚು ಧೂಳು ಸೇರಿದ್ದಲ್ಲಿ, ಅವಳಿಗೆ ಹುಟ್ಟುವ ಮಗುವಿಗೂ ಅಸ್ತಮಾ ಬರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಮನೆ ರುಚಿ ಕೊಡುವ ಐಸ್ಕ್ರೀಮ್ ಟೇಸ್ಟ್ ಮಾಡಬೇಕು ಅಂದ್ರೆ ನೀವು ಇಲ್ಲಿ ಬರ್ಲೇಬೇಕು..

ಗಂಟಲ ಕಿರಿಕಿರಿಯಾದರೆ ಮನೆಮದ್ದು ಮಾಡುವುದು ಹೇಗೆ..? ಇಲ್ಲಿದೆ ನೋಡಿ ವೈದ್ಯರ ಸಲಹೆ

About The Author