Health Tips: ಹೆಣ್ಣು ತಾಯಿಯಾದಾಗಿನಿಂದ, ಮಗು ಹುಟ್ಟುವವರೆಗೂ ಅದರ ಬಗ್ಗೆ ಸಾಕಷ್ಟು ಕಾಳಜಿ ವಹಿಸಿರುತ್ತಾಳೆ. ಆದರೂ ಕೆಲವು ಮಕ್ಕಳ ಬೆಳವಣಿಗೆ ಅಷ್ಟು ಉತ್ತಮವಾಗಿರುವುದಿಲ್ಲ. ಮಕ್ಕಳು ದಷ್ಟಪುಷ್ಟವಾಗಿರುವುದಿಲ್ಲ, ಸಣ್ಣಗಿರುತ್ತಾರೆಂಬ ಚಿಂತೆ ತಾಯಂದಿರಿಗಿರುತ್ತದೆ. ಆದರೆ, ಈ ಬಗ್ಗೆ ವೈದ್ಯರು ಮಗುವಿನ ಬೆಳವಣಿಗೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ ಅಂತಲೇ ಹೇಳುತ್ತಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ವೈದ್ಯರು ಹೇಳುವ ಪ್ರಕಾರ, ಮಗು ಸಣ್ಣ ಇದೆ ಅಂದಮಾತ್ರೆಕ್ಕೆ ಅದು ಆರೋಗ್ಯವಾಗಿರಲ್ಲ ಅಂತ ಅರ್ಥವಲ್ಲ. ಮಗುವಿನ ವಯಸ್ಸಿಗೆ ತಕ್ಕಂತೆ ಅದರ ಹೈಟ್, ಮತ್ತು ತೂಕ ಇರಬೇಕು ಅಂತಾ ಹೇಳುತ್ತಾರೆ. ಆದರೆ, ಅದಕ್ಕಿಂತ ಒಂದೆರಡು ಅಂಕೆಯಲ್ಲಿ ತೂಕ, ಎತ್ತರ ಕಡಿಮೆ ಇದ್ದರೆ, ಏನೂ ತೊಂದರೆ ಇಲ್ಲ ಅಂತಾರೆ ವೈದ್ಯರು.
ಆದರೆ ಇಂಥ ಮಕ್ಕಳಿಗೆ ನೀವು ಆರೋಗ್ಯಕರ ಆಹಾರಗಳನ್ನು ನೀಡಬೇಕು. ರೆಡಿ ಟೂ ಈಟ್ ಆಹಾರಗಳನ್ನು ಮಕ್ಕಳಿಗೆ ನೀಡಬಾರದು. ಇಂಥ ಆಹಾರಗಳ ಸೇವನೆಯಿಂದ ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಹಾಗಾಗಿ ಮಕ್ಕಳಿಗೆ ಆರೋಗ್ಯಕರ ಆಹಾರಗಳನ್ನು ನೀಡಿ. ಒಮ್ಮೊಮ್ಮೆ ಮಕ್ಕಳು ಹೆಚ್ಚು ಆ್ಯಕ್ಟೀವ್ ಇದ್ದಾಗಲೂ, ಮಕ್ಕಳ ಬೆಳವಣಿಗೆಯಲ್ಲಿ ವ್ಯತ್ಯಾಸವಾಗುತ್ತದೆ.
ರೆಡಿ ಟೂ ಈಟ್ ಫುಡ್‌ಗಳಲ್ಲಿ ಪ್ರಿಸರ್ವೇಟೀವ್ಸ್ ಬಳಸಿರುತ್ತಾರೆ. ಮಗುವಿನ ಆರೋಗ್ಯ ಹಾಳು ಮಾಡಲು ಇದೊಂದೇ ಸಾಕು. ಹಾಗಾಗಿ ಸಿರಿಧಾನ್ಯ, ಹಾಲು, ಹಣ್ಣಿನ ರಸ, ಬೇಳೆಕಾಳುಗಳನ್ನ ಬೇಯಿಸಿ ಕೊಡುವುದು. ಇಂಥ ಆಹಾರಗಳು ಮಗುವಿನ ಉತ್ತಮ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ. ಇನ್ನು ಎದೆ ಹಾಲು ಕುಡಿಯುವ ಮಕ್ಕಳಿಗೆ, ಹೆಚ್ಚು ಎದೆ ಹಾಲು ಕೊಟ್ಟಷ್ಟು ಅವರು ಹೆಚ್ಚು ಸ್ಟ್ರಾಂಗ್ ಆಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನಮ ಮಾಹಿತಿಗಾಗಿ ವೀಡಿಯೋ ನೋಡಿ..