Dharwad News: ಬ್ಯೂಟಿಶಿಯನ್ನ್ನು ಮನೆಗೆ ಕರೆಸಿಕೊಂಡು, ಆಕೆಯ ಮನೆಯ ಕೀ ಕದ್ದು, ಕಳ್ಳತನ ಮಾಡಿದ್ದ ಮೂವರು ಖಧೀಮರನ್ನು ಬಂಧಿಸಲಾಗಿದೆ. ಕಿರಣ್, ಆನಂದ್, ನಾರಾಯಣ್ ಬಂಧಿತ ಆರೋಪಿಗಳಾಗಿದ್ದಾರೆ.
ನೇತ್ರಾ ಎಂಬ ಬ್ಯೂಟಿಶಿಯನ್ ಮೊಟ್ಟೆ ವ್ಯಾಪಾರ ಕೂಡ ಮಾಡುತ್ತಿದ್ದರು. ಹೀಗಾಗಿ ಇವರ ಮನೆಯಲ್ಲಿ ಸಾಕಷ್ಟು ಹಣ, ಒಡವೆ ಇದೆ ಎಂದು ಅಂದಾಜು ಮಾಡಿದ್ದ ಮೂವರು, ಇವರ ಮನೆಗಳ್ಳತನ ಮಾಡಿದ್ದಾರೆ. ಆರೋಪಿಗಳಲ್ಲಿ ಕಿರಣ್ಗೆ ನೇತ್ರಾ ಪರಿಚಯವಿತ್ತು. ಹಾಗಾಗಿ ಕೆಲಸವಿದೆ ಬಾ ಎಂದು ನೇತ್ರಾಳನ್ನು ಕಿರಣ್ ತನ್ನ ಮನೆಗೆ ಕರೆಸಿಕೊಂಡಿದ್ದ. ಬಳಿಕ ಆಕೆಯ ಬ್ಯಾಗಿನಿಂದ ನಾರಾಯಣ್ ಕೀ ಎಗರಿಸಿ, ನಕಲಿ ಬೀಗದ ಕೈ ಮಾಡಿಸಿದ್ದ.
ಬಳಿಕ ಆಕೆಯ ಮನೆಯಲ್ಲಿ ಈ ಮೂವರು ಕಳ್ಳತನ ಮಾಡಿದ್ದರು. ಹೀಗಾಗಿ ನೇತ್ರಾ ಕೆಂಪೇಗೌಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿದಾಗ, ಕಳ್ಳತನ ಮಾಡಿದ್ದು ಈ ಮೂವರು ಅಂತಾ ಗೊತ್ತಾಗಿದೆ. ಕೆಂಪೇಗೌಡ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದು, ಕಳ್ಳರನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳಿಂದ 7 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಸೀಜ್ ಮಾಡಲಾಗಿದೆ.
ಕಾಂಗ್ರೆಸ್ ನಾಯಕರಿಗೆ ನಾಚಿಕೆ, ಮಾನ, ಮರ್ಯಾದೆಯೇ ಇಲ್ಲ: ಕೇಂದ್ರ ಸಚಿವ ಜೋಶಿ
ದತ್ತು ಪುತ್ರನೊಂದಿಗೆ ಸಲ್ಲಾಪ: ರೆಡ್ಹ್ಯಾಂಡ್ ಆಗಿ ಗಂಡನ ಎದುರು ಸಿಕ್ಕಿಬಿದ್ದ ಮಹಿಳಾ ರಾಜಕಾರಣಿ




