Monday, November 9, 2026

Karnataka Tv

ಗೃಹ ಜ್ಯೋತಿ ಫಲಾನುಭವಿಗಳಿಗೆ ಶಾಕ್ – 16 ಲಕ್ಷ ಮಂದಿಗೆ ಫ್ರೀ ಕರೆಂಟ್ ಕಟ್?

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಗೃಹ ಜ್ಯೋತಿ' ಉಚಿತ ವಿದ್ಯುತ್ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಲಕ್ಷಾಂತರ ಗ್ರಾಹಕರಿಗೆ ಬೆಸ್ಕಾಂ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಹೌದು 'ಅರ್ಹ ಫಲಾನುಭವಿಗಳನ್ನು ಮರುಪರಿಶೀಲಿಸುವ ಕಟ್ಟುನಿಟ್ಟಿನ ಪ್ರಕ್ರಿಯೆ ಆರಂಭವಾಗಿದ್ದು, ಬೆಸ್ಕಾಂ ವ್ಯಾಪ್ತಿಯ ಸುಮಾರು 16 ಲಕ್ಷ ಫಲಾನುಭವಿಗಳು ಈ ಯೋಜನೆಯಿಂದ ಹೊರಬೀಳುವ ಗಂಭೀರ ಭೀತಿ ಎದುರಾಗಿದೆ. ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದ...

ಕಾಂಗ್ರೆಸ್ ನಡೆಗೆ ಭಾರಿ ಅಸಮಾಧಾನ – ಎಲ್ಲರ ಚಿತ್ತ ಸ್ಟಾಲಿನ್ ನಿರ್ಧಾರದತ್ತ!

ತಮಿಳುನಾಡು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಪ್ರಮುಖ ಬೆಳವಣಿಗೆಯೊಂದರಲ್ಲಿ, ಡಿಎಂಕೆ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದಲ್ಲಿ ಅಣ್ಣಾ ಅರಿವಾಲಯಂನಲ್ಲಿ ಅತ್ಯಂತ ನಿರ್ಣಾಯಕ ಉನ್ನತ ಮಟ್ಟದ ಸಭೆ ಜರುಗಿದೆ. ಚುನಾವಣಾ ಆಯೋಗದ ಎಸ್‌ಐಆರ್ ಪ್ರಕ್ರಿಯೆ ಹಾಗೂ ಸಿಜೆಪಿ ಹೋರಾಟದ ವಿಷಯಗಳ ಕುರಿತು ಈ ಸಭೆಯಲ್ಲಿ ಸುದೀರ್ಘ ಹಾಗೂ ಗಂಭೀರ...

ಸಿಜೆಪಿ ಕಾಂಗ್ರೆಸ್ ಪ್ರತಿಭಟನೆ ಬಿಸಿ – ವ್ಯಾಪಾರಕ್ಕೆ ₹3,000 ಕೋಟಿ ನಷ್ಟ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ನಿರಂತರ ಪ್ರತಿಭಟನೆಗಳು ಹಾಗೂ ನಿರ್ಬಂಧಗಳಿಂದಾಗಿ ವ್ಯಾಪಾರ ವಹಿವಾಟಿಗೆ ಭಾರಿ ಹೊಡೆತ ಬಿದ್ದಿದೆ. ಅಕ್ಟೋಬರ್‌ನಲ್ಲಿ ನಡೆದ ವಿವಿಧ ಪ್ರತಿಭಟನೆಗಳಿಂದಾಗಿ ಇದುವರೆಗೆ ಬರೋಬ್ಬರಿ 3,000 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ ವರದಿ ಅಂದಾಜಿಸಿದೆ. ಅಕ್ಟೋಬರ್ 10ರಂದು ನಡೆದ ಪ್ರತಿಭಟನೆಯೊಂದರಿಂದಲೇ ಬಲಾಬಲವಾಗಿ 2,000 ಕೋಟಿ ರೂ. ನಷ್ಟವಾಗಿದ್ದರೆ,...

ರಾಯರ ಭಕ್ತರಿಗೆ KSRTC ಸಿಹಿಸುದ್ದಿ – ಈ 5 ಜಿಲ್ಲೆಯವರಿಗೆ ಹೊಸ ಸೌಲಭ್ಯ!

ರಾಯರ ಮಂತ್ರಾಲಯದ ದರ್ಶನಕ್ಕೆ ತೆರಳುವ ಕರ್ನಾಟಕದ ಭಕ್ತರಿಗೆ KSRTC ಸಿಹಿಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಬೆಂಗಳೂರಿಗೆ ಬಾರದೇ ನೇರವಾಗಿ ತಮ್ಮದೇ ಜಿಲ್ಲೆಗಳಿಂದ ಮಂತ್ರಾಲಯಕ್ಕೆ ಪ್ರಯಾಣಿಸಲು ಅನುಕೂಲವಾಗುವಂತೆ, ಹಾಸನ ಮತ್ತು ಮಂತ್ರಾಲಯ ನಡುವೆ ನೂತನ 'ಪಲ್ಲಕ್ಕಿ' ನಾನ್-ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಈ ಹೊಸ ಸೌಲಭ್ಯದಿಂದಾಗಿ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳ...

​ವೋಟರ್ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದೆಯಾ? ಮೊಬೈಲ್‌ನಲ್ಲಿ ಹೀಗೆ ಚೆಕ್ ಮಾಡಿ

ದೇಶದಲ್ಲಿ ಎಸ್‌ಐಆರ್ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿರುವ ಹಾಗೂ ವಿವಿಧ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತದಾನದ ಹಕ್ಕಿಗೆ ಮತ್ತೊಮ್ಮೆ ಅತ್ಯುನ್ನತ ಮಹತ್ವ ಬಂದಿದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇನ್ನೂ ಜೀವಂತವಾಗಿದೆಯೇ ಅಥವಾ ಅಳಿಸಿಹಾಕಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಪ್ರತಿ ನಾಗರಿಕನ ಕರ್ತವ್ಯವಾಗಿದೆ. ಅದರಲ್ಲೂ ಯಾವುದೇ ಇಂಟರ್ನೆಟ್ ಅಥವಾ ಆ್ಯಪ್‌ಗಳ ಗೊಂದಲವಿಲ್ಲದೆ, ಕೇವಲ ನಿಮ್ಮ ಮೊಬೈಲ್‌ನಿಂದ ಒಂದೇ ಒಂದು...

ಯೋಗಿ ಮತ್ತೆ ಸಿಎಂ ಆಗ್ತಾರಾ? ಮೆಗಾ ಸಮೀಕ್ಷೆ ಹೇಳಿದ್ದೇನು?

ಮುಂದಿನ ವರ್ಷ ಅಂದರೆ 2027ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮತ್ತೊಮ್ಮೆ ಹ್ಯಾಟ್ರಿಕ್ ಗೆಲುವು ಸಾಧಿಸಲಿದ್ದಾರಾ ಎಂಬ ಕುತೂಹಲಕ್ಕೆ ಮೆಗಾ ಸಮೀಕ್ಷೆಯು ಸ್ಪಷ್ಟ ಉತ್ತರ ನೀಡಿದೆ. ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ಅವರ ಜನಪ್ರಿಯತೆ ಹಾಗೂ ಸರ್ಕಾರದ ಕಾರ್ಯಕ್ಷಮತೆಯು ಮುಂಚೂಣಿಯಲ್ಲಿದೆ ಎಂದು ಸಮೀಕ್ಷೆ ತಿಳಿಸಿದೆ. 'ಪ್ವಾಲ್ಯೂ ಅನಾಲಿಟಿಕ್ಸ್' ಸಹಯೋಗದೊಂದಿಗೆ ಉತ್ತರ...

ಕೈ ಪಾಳಯಕ್ಕೆ ಮತ್ತೊಂದು ಶಾಕ್ – ರಾಜೀನಾಮೆ ಕೊಟ್ಟ ಕಾಂಗ್ರೆಸ್ ಅಧ್ಯಕ್ಷೆ!

ಕರ್ನಾಟಕ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದ್ದು, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷರಿಗೆ ಬರೆದ ರಾಜೀನಾಮೆ ಪತ್ರದಲ್ಲಿ, ರಾಜ್ಯ ಸಂಪುಟದಲ್ಲಿ ಒಬ್ಬರೂ ಮಹಿಳಾ ಸಚಿವರು ಇಲ್ಲದಿರುವ ಬಗ್ಗೆ ಅವರು ತೀವ್ರ ಅಸಮಾಧಾನ ಹೊರಹಾಕಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಳೆದ ವರ್ಷ ಅಂದರೆ 2026ರ...

ಸ್ಟಿಂಗ್ ಯಾಕಿಷ್ಟು ಸದ್ದು ಮಾಡ್ತಿದೆ? ಜೋಶಿ ಕೊಟ್ಟ ಸ್ಪಷ್ಟನೆಯೇ ಬೇರೆ!

ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಕೆಪಿಎಸ್‌ಸಿ ಹಗರಣ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ‘ಸ್ಟಿಂಗ್ ಆಪರೇಷನ್’ ವಿವಾದದ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ 2014ರ ನಂತರ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಎಂಎಸ್‌ಪಿ ಅಂದರೆ ಬೆಂಬಲ ಬೆಲೆಗೆ ಭತ್ತ...

ಅಮೆರಿಕ–ಪಾಕಿಸ್ತಾನ ಯುದ್ಧ ನಡೆದರೆ ಪಾಕ್ ಪರ ಭಾರತ – ಬಿಜೆಪಿ ನಾಯಕನ ಹೇಳಿಕೆಗೆ ಆಕ್ರೋಶ!

ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ಭಾರತವು ಪಾಕಿಸ್ತಾನದೊಂದಿಗೆ ನಿಲ್ಲುತ್ತದೆ ಎಂದು ಹೇಳಿಕೆ ನೀಡಿರುವ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಮದನ್ ರಾಥೋಡ್ ರಾಷ್ಟ್ರೀಯ ರಾಜಕಾರಣದಲ್ಲಿ ತೀವ್ರ ವಿವಾದ ಸೃಷ್ಟಿಸಿದ್ದಾರೆ. ಹೌದು ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ...

2028ಕ್ಕೆ HDK ಸರ್ಕಾರ ಬರುತ್ತಾ? ಚರ್ಚೆ ಹೆಚ್ಚಿಸಿದ ಹೊಸ ಘೋಷಣೆ!

2028ರ ವಿಧಾನಸಭೆ ಚುನಾವಣೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಈಗಿನಿಂದಲೇ ಸಕಲ ಸಿದ್ಧತೆಗಳನ್ನು ಆರಂಭಿಸಿದ್ದಾರೆ. 'ಪರಿಶ್ರಮಕ್ಕೆ ತಕ್ಕ ಪ್ರತಿಫಲ – 2028ಕ್ಕೆ ಇದೇ ನನ್ನ ಪ್ರತಿಜ್ಞೆ' ಎಂಬ ಹೊಸ ಘೋಷವಾಕ್ಯದೊಂದಿಗೆ ಮುಂದಿನ ಚುನಾವಣೆಗೆ ಸಜ್ಜಾಗುತ್ತಿರುವ ಅವರು, 2028ರಲ್ಲಿ ಜನರು ತಮ್ಮ ಕೈ ಹಿಡಿಯಲಿದ್ದು ರಾಜ್ಯದಲ್ಲಿ ಜೆಡಿಎಸ್-ಮೈತ್ರಿ ಸರ್ಕಾರ ರಚನೆಯಾಗುವ ಭರವಸೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಯುವಕರೊಂದಿಗೆ...

About Me

32875 POSTS
0 COMMENTS
- Advertisement -spot_img

Latest News

Tumakuru News: ” ಕಲ್ಪೋತ್ಸವ ” ವಿವಾದಕ್ಕೆ ತೆರೆ ಎಳೆದ ಶಾಸಕ ಷಡಕ್ಷರಿ…

Tumakuru News: ತಿಪಟೂರು: ಕಳೆದ ಬಾರಿಗಿಂಥ ಇನ್ನೂ ಅದ್ಧೂರಿಯಾಗಿ ಈ ಬಾರಿ ಕಲ್ಪೋತ್ಸವ ಆಚರಿಸಲಾಗುತ್ತಿದ್ದು ಡಾ. ಶ್ರೀಧರ್ ನೇತೃತ್ವದ ಸಂಸ್ಥೆ ಮತ್ತು ತಂಡ ಹಾಗೂ ಅಧಿಕಾರಿಗಳ...
- Advertisement -spot_img