Saturday, July 27, 2024

Karnataka Tv

ಬೆಂಗಳೂರಿನಲ್ಲಿ 2 ದಿನಗಳ ಕಾಲ ನಿಷೇಧಾಜ್ಞೆ…!

ಬೆಂಗಳೂರು: ಇನ್ನೇನು ಕೆಲವೇ ಹೊತ್ತಿನಲ್ಲಿ ವಿಶ್ವಾಸಮತ ಯಾಚನೆ ಪೂರ್ಣಗೊಳ್ಳಲಿದೆ ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬದಲಾಗೋ ಎಲ್ಲಾ ಲಕ್ಷಣಗಳೂ ಈಗಾಗಲೇ ಗೋಚರಿಸುತ್ತಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2 ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ರಾಜ್ಯ ಸಮ್ಮಿಶ್ರ ಸರ್ಕಾರದ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸಲು ಇನ್ನೇನು ಕೆಲ ಹೊತ್ತಲ್ಲೇ ನೆಡಯಲಿದೆ. ಹೀಗಾಗಿ ಈಗಾಗಲೇ...

‘ಸಂತೋಷದಿಂದ ಸಿಎಂ ಸ್ಥಾನ ತ್ಯಜಿಸಲು ಸಿದ್ಧ- ಪದೇ ಪದೇ ವಚನಭ್ರಷ್ಟ ಎನ್ನಬೇಡಿ’- ಸಿಎಂ ಕುಮಾರಸ್ವಾಮಿ

ಬೆಂಗಳೂರು: ವಿಶ್ವಾಸಮತ ಯಾಚನೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಸಿಎಂ ಎಚ್.ಡಿ ಕುಮಾರಸ್ವಾಮಿ ಸದನದಲ್ಲಿ ತಮ್ಮ ಕೊಡುಗೆ, ಯೋಜನೆಗಳ ಕುರಿತಾಗಿ ಮಾತನಾಡಿದ್ದಾರೆ. ಈ ಮಧ್ಯೆ ಕಳೆದ ಬಾರಿ 20-20 ಸರ್ಕಾರದ ಕುರಿತಾಗಿ ಮಾತನಾಡಿದ ಎಚ್ಡಿಕೆ, ಪದೇ ಪದೇ ನನ್ನನ್ನು ವಚನಭ್ರಷ್ಟ ಎನ್ನಬೇಡಿ ಅಂತ ಪ್ರತಿಪಕ್ಷ ಬಿಜೆಪಿಗೆ ಮನವಿ ಮಾಡಿದ್ದಾರೆ. ಸದನದಲ್ಲಿ ತಾವು ರಾಜ್ಯದ ಜನತೆಗೆ ನೀಡಿದ ಯೋಜನೆಗಳ...

ಪಕ್ಷೇತರ ಶಾಸಕರಿಗಾಗಿ ಕೈ-ಬಿಜೆಪಿ ಫೈಟ್..!

ಬೆಂಗಳೂರು: ಇನ್ನು ಕೆಲವೇ ನಿಮಿಷಗಳಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಆರಂಭವಾಗಲಿರುವ ಮಧ್ಯೆ ರಾಜ್ಯ ಮತ್ತೊಂದು ಹೈಡ್ರಾಮಾಗೆ ಸಾಕ್ಷಿಯಾಗಿದೆ. ಪಕ್ಷೇತರ ಶಾಸಕರನ್ನು ತಮ್ಮ ಪರ ಮತ ಚಲಾಯಿಸಲು ಬಿಜೆಪಿ ಮುಖಂಡರು ಮುಂಬೈನಿಂದ ಬೆಂಗಳೂರಿಗೆ ಕರೆದಂತಿರುವ ಹಿನ್ನೆಲೆಯಲ್ಲಿ ಪಕ್ಷೇತರರು ತಂಗಿರುವ ಅಪಾರ್ಟ್ ಮೆಂಟ್ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಜಮಾವಣೆಯಾಗಿ ಪರಸ್ಪರ ಮಾತಿನ ಚಕಮಕಿಯಲ್ಲಿ ತೊಡಗಿದ್ದಾರೆ....

‘ಹೋಲ್ ಸೇಲ್, ರೀಟೇಲ್ ವ್ಯಾಪಾರ ಮಾಡ್ತಿರೋದು ನಾಚಿಕೆಗೇಡು’- ಸಿದ್ದು ಕಿಡಿ

ಬೆಂಗಳೂರು: ಆಪರೇಷನ್ ಕಮಲದ ಕುರಿತು ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಭರ್ಜರಿ ಚರ್ಚೆಗಿಳಿದಿದ್ದಾರೆ. ಅಧಿಕಾರದ ಆಸೆಯಿಂದ ಶಾಸಕರನ್ನು ಕೊಂಡುಕೊಳ್ಳಲು ಹೋಲ್ ಸೇಲ್ ರೀಟೇಲ್ ವ್ಯಾಪಾರ ಮಾಡ್ತಿರೋದು ನಾಚಿಕೆಗೇಡಿನ ಸಂಗತಿ ಅಂತ ಆಕ್ರೋಶ ಹೊರಹಾಕಿದ್ರು. ತಮ್ಮ ಶಾಸಕರನ್ನು ಸೆಳೆದು ಮುಂಬೈನಲ್ಲಿಟ್ಟಿಕೊಂಡಿರುವ ಬಿಜೆಪಿ ಅಧಿಕಾರದ ಮೇಲೆ ಅತಿಯಾದ ವ್ಯಾಮೋಹ ಹೊಂದಿದೆ ಎಂದ ಸಿದ್ದರಾಮಯ್ಯ, ನೀವು ಇವರನ್ನೆಲ್ಲಾ ನಂಬಿಕೊಂಡು 1...

‘2018ರಲ್ಲಿ ಬಿಎಸ್ವೈ ಸರ್ಕಾರ ರಚಿಸುವುದಾಗಿ ಹಕ್ಕು ಮಂಡನೆ ಮಾಡಬಾರದಿತ್ತು’- ಸಿದ್ದರಾಮಯ್ಯ

ಬೆಂಗಳೂರು: ವಿಶ್ವಾಸಮತ ಯಚನೆಗೆ ಇನ್ನು ಕೆಲವೇ ಹೊತ್ತು ಬಾಕಿಯಿರುವಂತೆ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಸದನದಲ್ಲಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್ ಯಡಿಯೂರಪ್ಪ ಸರ್ಕಾರ ರಚನೆ ಮಾಡೋದಾಗಿ ಹಕ್ಕು ಮಂಡನೆ ಮಾಡಲೇಬಾರದಿತ್ತು ಅಂತ ಸಿದ್ದು ವಾಗ್ದಾಳಿ ನಡೆಸಿದ್ದಾರೆ. ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬಂದ ಕ್ಷಣದಿಂದಲೂ ಸರ್ಕಾರ ಪತನಗೊಳಿಸೋದಕ್ಕೆ ಬಿಜೆಪಿ ಇನ್ನಿಲ್ಲದ...

‘ನಾನು ಶಾಸಕನಾಗಬೇಕಿತ್ತು ಅದಕ್ಕೆ ಬಿಜೆಪಿ ಬಿಟ್ಟು ಬಂದೆ’- ಸಚಿವ ಸಾ.ರಾ ಮಹೇಶ್

ಬೆಂಗಳೂರು: ನಾನು ಬಿಜೆಪಿಗೆ ಯಾವುದೇ ಅನ್ಯಾಯ ಮಾಡಿಲ್ಲ, ಬಿಜೆಪಿ ಕೂಡ ನನಗೆ ಯಾವುದೇ ಅನ್ಯಾಯ ಮಾಡಿಲ್ಲ. ಆದ್ರೆ ನಾನು ಶಾಸಕನಾಗಬೇಕೆಂಬ ಉದ್ದೇಶದಿಂದ ಜೆಡಿಎಸ್ ಸೇರ್ಪಡೆಗೊಂಡೆ ಅಂತ ಸಚಿವ ಸಾ.ರಾ ಮಹೇಶ್ ಸದನದಲ್ಲಿ ಹೇಳಿದ್ದಾರೆ. ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಶಾಸಕರ ಕುರಿತು ಮಾತನಾಡಿದ ಸಚಿವ ಸಾ.ರಾ ಮಹೇಶ್, ನಮ್ಮ ಜೊತೆ ಇಲ್ಲದವರು ನಿಮ್ಮ ಜೊತೆಗೆ ಎಷ್ಟು...

‘ನಾನು ಮನಸ್ಸು ಮಾಡಿದ್ರೆ ಅತೃಪ್ತರನ್ನು ಕೂಡಿಹಾಕಬಹುದಿತ್ತು’- ಡಿಕೆಶಿ

ಬೆಂಗಳೂರು: ಅತೃಪ್ತ ಶಾಸಕರನ್ನು ಸಂಪರ್ಕಮಾಡಲು ವಿಫಲರಾಗಿ ಕೈಚೆಲ್ಲಿ ಕುಳಿತಿರುವ ಡಿಕೆಶಿ ಬಿಜೆಪಿ ಅವರನ್ನು ಕೂಡಿಹಾಕಿದೆ. ಮನಸ್ಸು ಮಾಡಿದ್ದರೆ ನಾನೇ ಅವರನ್ನು ಕೂಡಿಹಾಕಬಹುದಿತ್ತು ಆದರೆ ನಾನು ಆ ಕೆಲಸ ಮಾಡಲು ಹೋಗಲಿಲ್ಲ ಅಂತ ಡಿಕೆಶಿ ಹೇಳಿದ್ರು. ಸದನದಲ್ಲಿ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ಅತೃಪ್ತ ಶಾಸಕರನ್ನು ಯಾರ ಸಂಪರ್ಕಕ್ಕೂ ಸಿಗದಂತೆ ಬಿಜೆಪಿ ನೋಡಿಕೊಂಡಿದೆ. ಅವರು...

ಮುಂಬೈನಲ್ಲಿರುವವರು ಅತೃಪ್ತರಲ್ಲ, ಸಂತೃಪ್ತರು- ಡಿಕೆಶಿ ಲೇವಡಿ

ಬೆಂಗಳೂರು: ಸದನದಲ್ಲಿ ಇಂದೂ ಸಹ ಅತೃಪ್ತರ ಕುರಿತಾದ ಚರ್ಚೆ ಮುಂದುವರಿದಿದೆ. ಕಲಾಪದಲ್ಲಿ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್ ರಾಜೀನಾಮೆ ನೀಡಿ ಮುಂಬೈ ಸೇರಿರುವ ಶಾಸಕರು ಅತೃಪ್ತರಲ್ಲ, ಸಂತೃಪ್ತರು ಅಂತ ಕಿಡಿ ಕಾರಿದ್ರು. ಮಂಕು ತಿಮ್ಮನ ಕಗ್ಗದ ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ, ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ ಉದ್ದರಿಸುವೆನು ಜಗವನೆನ್ನುತಿಹ ಸಖ ನಿನ್ನುದ್ದಾರವೆಸ್ಟಾಯ್ತೋ ಎಂಬ ಸಾಲಿನಿಂದ...

ಸದನದಲ್ಲಿ ದೋಸ್ತಿ ಶಾಸಕರ ಚರ್ಚೆ ಕುರಿತು ಈಶ್ವರಪ್ಪ ಅಪಹಾಸ್ಯ..!

ಬೆಂಗಳೂರು: ಕಳೆದ ವಾರದಿಂದ ವಿಶ್ವಾಸಮತ ಯಾಚನೆ ಮಾಡ್ತೀವಿ ಅಂತಿರುವ ಸಿಎಂ ಸದನದಲ್ಲಿ ಸದಸ್ಯರು ಚರ್ಚೆ ಮಾಡಬೇಕು ಅನ್ನೋ ನೆಪದಲ್ಲಿ ಈವರೆಗೂ ಮುಂದೂಡಿಕೆ ಮಾಡಿಕೊಂಡು ಬರ್ತಾನೇ ಇದ್ದಾರೆ. ಬೆಳಗ್ಗೆ ಆರಂಭವಾಗುವ ಸದನದಲ್ಲಿ ಆಡಳಿತ ಪಕ್ಷದ ಶಾಸಕರು ಮಾತನಾಡುವ ಸಾಮಾನ್ಯ ಮಾತುಗಳನ್ನು ಕುರಿತು ಟ್ಪೀಟ್ ಮಾಡೋ ಮೂಲಕ ಈಶ್ವರಪ್ಪ ಟೀಕಿಸಿದ್ದಾರೆ. ಇಂದು ವಿಶ್ವಾಸಮತ ಯಾಚನೆಯಾಗುವುದು ಖಚಿತ ಅನ್ನೋ...

ಪಕ್ಷೇತರರ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಸುಪ್ರೀಂ..!

ನವದೆಹಲಿ: ವಿಶ್ವಾಸಮತ ಸಾಬೀತುಪಡಿಸಲು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ನಿರ್ದೇಶನ ನೀಡುವಂತೆ ಪಕ್ಷೇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಾಳೆಗೆ ಮುಂದೂಡಿಕೆ ಮಾಡಿದೆ. ಇಂದು ಪಕ್ಷೇತರರ ಅರ್ಜಿ ವಿಚಾರಣೆ ಕೈಗೊಂಡ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮೊದಲಿಗೆ ಅತೃಪ್ತರ ಪರ ವಕೀಲ ಮುಕುಲ್ ರೋಹ್ಟಗಿ ವಾದವನ್ನು ಆಲಿಸಿದ್ರು. 15ಮಂದಿ ಅತೃಪ್ತ ಶಾಸಕರಿಗೆ ಸ್ಪೀಕರ್ ಎದುರು ವಿಚಾರಣೆಗೆ ಹಾಜರಾಗದಂತೆ...

About Me

22759 POSTS
0 COMMENTS
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img