Monday, December 23, 2024

Latest Posts

ಇಂದಿನಿಂದ ಆಟೋರಿಕ್ಷಾ ಪ್ರಯಾಣದರ 18% ಏರಿಕೆ- ಟ್ರಾಫಿಕ್ ಜಾಮ್ ಗೂ ಎಕ್ಸ್ ಟ್ರಾ ದುಡ್ಡು..!!

- Advertisement -

ದೆಹಲಿ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ದೆಹಲಿಯಲ್ಲಿ ಆಟೋ ಪ್ರಯಾಣ ದುಬಾರಿಯಾಗಿದೆ. ಬರೋಬ್ಬರಿ 18% ಏರಿಕೆಯಾಗಿರೋ ಆಟೋ ಪ್ರಯಾಣ ದರಕ್ಕೆ ಇನ್ನುಮುಂದೆ ಟ್ರಾಫಿಕ್ ಜಾಮ್ ದರವೂ ಸೇರ್ಪಡೆಯಾಗಲಿದೆ.

ದೆಹಲಿಯಲ್ಲಿ ಇಂದಿನಿಂದ ಆಟೋರಿಕ್ಷಾ ಪ್ರಯಾಣ ದರ ಶೇ .18ರಷ್ಟು ಹೆಚ್ಚಳವಾಗಿದೆ. ಇದರಿಂದ ಸುಮಾರು 90ಸಾವಿರಕ್ಕೂ ಅಧಿಕ ಆಟೋ ಚಾಲಕರು ಹಾಗೂ ಮಾಲೀಕರಿಗೆ ಲಾಭ ಉಂಟಾಗಲಿದೆ. ಇಂದಿನಿಂದ ಪರಿಷ್ಕೃತ ಪ್ರಯಾಣದ ದರ ಜಾರಿಗೆ ಬಂದಿದ್ದು, ಮೊದಲ 1.5ಕಿ.ಮೀ ಗೆ 25ರೂಪಾಯಿ , ನಂತರ ಪ್ರತಿ ಕಿ.ಮೀ ಗೆ 9.5ರೂಪಾಯಿ ದರ ನಿಗದಿಯಾಗಿದೆ. ಇನ್ನು ಪ್ರಯಾಣಿಕರು ಲಗ್ಗೇಜ್ ಹೊಂದಿದ್ರೆ 7.5ರೂಪಾಯಿ ಹಾಗೂ ಪ್ರಯಾಣದ ವೇಳೆ ರಿಕ್ಷಾ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ರೆ ಪ್ರತಿ ನಿಮಿಷಕ್ಕೆ 75ಪೈಸೆ ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ.

ನೂತನ ಆಟೋ ಪ್ರಯಾಣ ದರ ಮಧ್ಯಮ ವರ್ಗದ ಜನರಿಗೆ ಹೊರೆಯಾಗಲಿದ್ದು ಆಟೋ ಏರಲು ಹಿಂದೂ ಮುಂದು ನೋಡುವ ಸ್ಥಿತಿ ಎದುರಾಗಿದೆ.

ಪ್ರಧಾನಿ ಮೋದಿಯವರಿಂದ ಪೊಲಿಟಿಕಲ್ ಸ್ಟ್ರೈಕ್..!!ಯಾರಿಗೆ ಕಾದಿದೆ ಕಂಟಕ? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=0ptPmJp6TUQ


- Advertisement -

Latest Posts

Don't Miss