Recipe: ರವಾ, ಅಕ್ಕಿ, ಗೋಧಿ ಸೇರಿ ಹಲವು ಬಗೆಯ ದೋಸೆ ಮಾಡಿ ನೀವು ತಿಂದಿರಬಹುದು. ಆದರೆ ನಾವಿಂದು ಅವಲಕ್ಕಿ ದೋಸೆ ಮಾಡುವುದು ಹೇಗೆ ಅಂತಾ ತಿಳಿಯೋಣ ಬನ್ನಿ..
1 ಕಪ್ ಅಕ್ಕಿ, ಅರ್ಧ ಕಪ್ ತೆಳ್ಳಗಿನ ಅವಲಕ್ಕಿ ಇವೆರಡನ್ನೂ ಸಪರೇಟ್ ಆಗಿ ಬಿಸಿ ನೀರಿನಲ್ಲಿ 1 ಗಂಟೆ ನೆನೆಸಿಡಿ. ಆದರೆ ಅದಕ್ಕೂ ಮುನ್ನ ಇವೆರಡನ್ನೂ ಚೆನ್ನಾಗಿ ತೊಳೆಯಿರಿ. 1 ಗಂಟೆ ಬಳಿಕ ಇವೆರಡನ್ನೂ ಗ್ರೈಂಡ್ ಮಾಡಿ, ದೋಸೆ ಹಿಟ್ಟು ತಯಾರಿಸಿಕೊಳ್ಳಿ. ಬಳಿಕ ಉಪ್ಪು ಬೆರೆಸಿ, ಪ್ಯಾನ್ ಬಿಸಿ ಮಾಡಿ, ಎಣ್ಣೆ ಹಾಕಿ, ದೋಸೆ ರೆಡಿ ಮಾಡಿ. ಸಾಫ್ಟ್ ಆಗಿರುವ ಈ ದೋಸೆ ಕಾಯಿ ಚಟ್ನಿಯೊಂದಿಗೆ ಸವಿಯಲು ಚೆನ್ನಾಗಿರುತ್ತೆ.
ಈ 5 ಆಹಾರಗಳ ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ..
ಗ್ಯಾಸ್ ಕಂಟ್ರೋಲ್ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಗೊತ್ತಾ..?




