Friday, April 18, 2025

Latest Posts

ಅವಲಕ್ಕಿ ಶೀರಾ ರೆಸಿಪಿ

- Advertisement -

Recipe: ಸಾಮಾನ್ಯವಾಗಿ ರವಾದಿಂದ ಮತ್ತು ಅನ್ನದಿಂದ ಶಿರಾ ತಯಾರಿಸಲಾಗುತ್ತದೆ. ಆದರೆ ನೀವೆಂದಾದರೂ ಅವಲಕ್ಕಿ ಬಳಸಿ ಶೀರಾ ತಯಾರಿಸಿದ್ದೀರಾ..? ಇಲ್ಲವಾದಲ್ಲಿ ನಾವಿಂದು ಅವಲಕ್ಕಿಯಿಂದ ಶೀರಾ ತಯಾರಿಸುವುದು ಹೇಗೆ ಅಂತಾ ಹೇಳಲಿದ್ದೇವೆ.

ಗ್ಯಾಸ್ ಆನ್ ಮಾಡಿ ಪ್ಯಾನ್ ಬಿಸಿ ಮಾಡಿ, ಒಂದು ಕಪ್ ದಪ್ಪ ಅವಲಕ್ಕಿಯನ್ನು ಹುರಿದುಕೊಳ್ಳಿ. ಅವಲಕ್ಕಿ ಕ್ರಿಸ್ಪಿಯಾದ ಬಳಿಕ ಅದನ್ನು ತಣಿಯಲು ಬಿಡಿ. ಬಳಿಕ ಮಿಕ್ಸಿ ಜಾರ್‌ಗೆ ಹುರಿದ ಅವಲಕ್ಕಿಯನ್ನು ಹಾಕಿ ಪುಡಿ ಮಾಡಿಕೊಳ್ಳಿ. ಈಗ 2 ಕಪ್ ನೀರನ್ನು ಕುದಿಯಲು ಇರಿಸಿ. ಮತ್ತೊಂದೆಡೆ ಪ್ಯಾನ್ ಬಿಸಿ ಮಾಡಿ, ಒಂದು ಸ್ಪೂನ್ ತುಪ್ಪ ಹಾಕಿ, ಸಣ್ಣಗೆ ಹೆಚ್ಚಿದ ಬಾದಾಮ್ ಮತ್ತು ಪಿಸ್ತಾವನ್ನು ಹುರಿಯಿರಿ.

ಹುರಿದ ಪಿಸ್ತಾ ಮತ್ತು ಬಾದಾಮನ್ನು ಬೇರೆ ಬೌಲ್‌ನಲ್ಲಿರಿಸಿ. ಈಗ ಅದೇ ಪ್ಯಾನ್‌ಗೆ ಮೂರು ಸ್ಪೂನ್ ತುಪ್ಪ ಹಾಕಿ, ಆಗಲೇ ಹುರಿದು ಪುಡಿ ಮಾಡಿದ ಅವಲಕ್ಕಿಯನ್ನು ಮತ್ತೊಮ್ಮೆ ಹುರಿಯಿರಿ. ಬಳಿಕ ಇದಕ್ಕೆ ಕಾಲು ಕಪ್ ತುರಿದ ಒಣಕೊಬ್ಬರಿ ಸೇರಿಸಿ, ಒಟ್ಟಿಗೆ ಹುರಿಯಿರಿ. ಘಮ ಬಂದ ಬಳಿಕ ಕುದಿಸಿಟ್ಟ ನೀರನ್ನು ಸೇರಿಸಿ. ನೀವು ಒಂದು ಕಪ್ ಹಾಲು ಮತ್ತು ಒಂದು ಕಪ್ ನೀರನ್ನು ಬಳಸಬಹುದು.

ಈಗ ಮಿಶ್ರಣವನ್ನು ಗಂಟು ಬಾರದಂತೆ ಮಿಕ್ಸ್ ಮಾಡಬೇಕು. ಬಳಿಕ ಒಂದು ಕಪ್ ಸಕ್ಕರೆ, ಚಿಟಿಕೆ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಹುರಿದಿಟ್ಟುಕೊಂಡ ಪಿಸ್ತಾ, ಬಾದಾಮನ್ನು ಸೇರಿಸಿದ್ರೆ ಅವಲಕ್ಕಿ ಶೀರಾ ರೆಡಿ. ನೀವು ಇದಕ್ಕೆ ಹಳದಿ ಅಥವಾ ಕೇಸರಿ ಬಣ್ಣವನ್ನು ಬಳಸಬಹುದು.

ಕೂದಲು ಅಂದವಾಗಿರಬೇಕು, ದಟ್ಟವಾಗಿರಬೇಕು ಎಂದಲ್ಲಿ ಈ ಆಹಾರಗಳನ್ನು ಸೇವಿಸಿ..

ಮುಟ್ಟು ಮುಂದೂಡಲು ಪದೇ ಪದೇ ಮಾತ್ರೆ ತೆಗೆದುಕೊಂಡರೆ ಏನಾಗುತ್ತದೆ ಗೊತ್ತಾ..?

ಇಲ್ಲಿದೆ ಸ್ವಾದಿಷ್ಟಕರ ಮನೆ ಊಟ: Good morning Hotel ಸ್ಪೆಶಾಲಿಟಿ ಏನು..?

- Advertisement -

Latest Posts

Don't Miss