Hubballi News: ಹಿಂದೂಗಳ ಪಾಲಿನ ಪುಣ್ಯಭೂಮಿಗಳಾದ ಅಯೋಧ್ಯೆ ಮತ್ತು ಶಬರಿಮಲೆಗೆ ವಿಶೇಷ ರೈಲುಗಳನ್ನು ಆರಂಭವಾಗುವ ಕುರಿತು ಸಾಧ್ಯತೆ ವ್ಯಕ್ತವಾಗಿದೆ.
ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿಯಲ್ಲಿ ಮಾಹಿತಿ ನೀಡಿದ್ದು, ಕೂಚಿವೇಲುಗೆ ವಿಶೇಷ ರೈಲು ಬಿಡುವ ಮೂಲಕ ಶಬರಿಮಲೆಗೆ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇತ್ತ ಅಯೋಧ್ಯೆಗೆ ರೈಲು ಬಿಡುವ ಕುರಿತು ಎಲ್ಲೆಲ್ಲಿಂದ ಬೇಡಿಕೆ ವ್ಯಕ್ತವಾಗುತ್ತದೆಯೋ ಅಲ್ಲಿಂದ ವಿಶೇಷ ರೈಲು ಬಿಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಒಟ್ಟಾರೆ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಲೋಕಾರ್ಪಣೆಗೆ ಕರ್ನಾಟಕದ ಭಕ್ತರು ತೆರಳಲು ರೈಲ್ವೆ ಇಲಾಖೆ ಮಹತ್ವದ ಹೆಜ್ಜೆ ಇಡುವುದು ಖಾತ್ರಿಯಾಗಿದೆ.
ಅಲ್ಲದೇ, ಮಕರ ಸಂಕ್ರಮಣದಲ್ಲಿ ಶಬರಿಮಲೆಯಲ್ಲಿ ನೆಲೆಯಾದ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಸಹ ರೈಲ್ವೆ ಇಲಾಖೆ ಭಕ್ತರಿಗೆ ಅನುಕೂಲ ಮಾಡಿಕೊಡಲಿದೆ.
ಇತ್ತ ಬೆಂಗಳೂರು ಹಾಗೂ ಹುಬ್ಬಳ್ಳಿ ಪ್ರಯಾಣಿಕರಿಗೆ ಸಿಹಿ ಸುದ್ದಿ. ಕಳೆದ ವಾರದವಷ್ಟೇ ಸ್ಥಗಿತವಾಗಿದ್ದ ಶ್ರೀಸಿದ್ದಾರೂಢ ಸ್ವಾಮಿ ರೈಲು ನಿಲ್ದಾಣ-ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಬೆಂಗಳೂರು ಸೂಪರ್ ಫಾಸ್ಟ್ ರೈಲು (SSR-KSR Super Fast Express) ಮತ್ತೆ ಓಡಾಟ ಮುಂದುವರೆಸಲು ನೈಋತ್ಯ ರೈಲ್ವೆ ವಲಯವು (South Western Railway) ನಿರ್ಧರಿಸಿದೆ.
ನವೆಂಬರ್ 30 ರಿಂದಲೇ ಮತ್ತೆ ಓಡಾಟ ಎಂದಿನಂತೆ ಅದೇ ಸಮಯಕ್ಕೆ ನಡೆಸಲಿರುವುದಾಗಿ ನೈಋತ್ಯ ರೈಲ್ವೆ ವಲಯವು ತಿಳಿಸಿದೆ. ಇದು ಕೂಡಾ ತಾತ್ಕಾಲಿಕ ಆಧಾರದಲ್ಲಿಯೇ ಓಡಾಟ ನಡೆಸಲಿದೆ.
ಹಿರಿಯ ನಟಿ ಲೀಲಾವತಿ ನಿರ್ಮಾಣದ ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್