Wednesday, February 5, 2025

Latest Posts

ವಿಶೇಷ ಚೇತನ ಮಕ್ಕಳ ಜೊತೆ ಬಿಜೆಪಿಯಿಂದ ಬಿ.ವೈ. ವಿಜಯೇಂದ್ರ ಜನ್ಮದಿನ ಆಚರಣೆ..

- Advertisement -

ಹಾಸನ: ನಗರದ ವಿದ್ಯಾನಗರದ ಬಳಿ ಇರುವ ಸಾಧ್ಯ ವಿಶೇಷ ಚೇತನ ಶಾಲೆಯ ಮಕ್ಕಳ ಜೊತೆ ಬಿಜೆಪಿ ಪಕ್ಷದವತಿಯಿಂದ ಕೇಕ್ ಕತ್ತರಿಸುವುದರ ಮೂಲಕ ಬಿಜೆಪಿ ಮುಖಂಡರಾದ ಬಿ.ವೈ. ವಿಜಯೇಂದ್ರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

​ ​ ​ ​ ​ ​ ಮಾನಸಿಕ ವಿಶೇಷ ಚೇತನ ಮಕ್ಕಳ ಜೊತೆಯಲ್ಲಿ ಕೇಕ್ ಮತ್ತು ಹಣ್ಣು ಹಂಪಲು ನೀಡುವ ಮೂಲಕ ಬಿ.ಎಸ್. ಯಡಿಯೂರಪ್ಪರವರ ಸುಪುತ್ರ ಮತ್ತು ಬಿಜೆಪಿ ಮುಖಂಡರಾದ ವಿಜಯೇಂದ್ರ ಅವರ ಜನ್ಮದಿನವನ್ನು ಆಚರಿಸಲಾಗುತ್ತಿದೆ. ವಿಜಯೇಂದ್ರ ಅವರು ಜನಪ್ರಿಯ ನಾಯಕರಾಗಿ ರಾಜ್ಯಾಧ್ಯಂತ ಹೆಸರುವಾಸಿಯಾಗಿರುವ ಹುಟ್ಟುಹಬ್ಬವನ್ನು ನಾವು ವಿಶೇಷವಾಗಿ ಅಚರಣೆ ಮಾಡುತ್ತಿದ್ದೇವೆ ಎಂದರು.

ಅಬಕಾರಿ ಇಲಾಖೆಯಿಂದ ವಶಪಡಿಸಿಕೊಂಡ ಮದ್ಯವನ್ನು ನಾಶ…

ಅವರು ಭವಿಷ್ಯದಲ್ಲಿ ನಾಯಕರಾಗಿ, ರಾಜ್ಯದ ಉನ್ನತ ಸ್ಥಾನಕ್ಕೆ ಬರುವ ಶಕ್ತಿಯನ್ನು ಆದೇವರು ನೀಡಲು ಎಂದು ಮಕ್ಕಳ ಮುಂದೆ ಸಂಕಲ್ಪ ಮಾಡುತ್ತಿದ್ದೇವೆ. ರಾಜ್ಯದಲ್ಲಿಯೇ ವಿಜಯೇಂದ್ರ ಅವರು ಯಶಸ್ವಿ ನಾಯಕರಾಗಲಿ. ಮುಂದೆ ರಾಜ್ಯದ ನೇತರರಾಗಲಿ ಎಂದು ಹಾರೈಸುವುದಾಗಿ ಹೇಳಿದರು.

​ ​ ​ ​ ಇದೆ ವೇಳೆ ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ಪರಿಷತ್ತು ಸದಸ್ಯರಾದ ಹೆಚ್.ಎನ್. ನಾಗೇಶ್, ಜಿಲ್ಲಾ ಮಾಧ್ಯಮ ಪ್ರಮುಖರಾದ ಐನೆಟ್ ವಿಜಿಕುಮಾರ್, ನಾಗೇಶ್, ಸಾಧ್ಯ ಸಂಸ್ಥೆಯ ಮುಖ್ಯಸ್ಥರಾ ಆರತೀ, ಶಾಲೆಯ ಪ್ರಾಂಶುಪಾಲ ಉಮೇಶ್, ಬೂವನಹಳ್ಳಿ ಪಂಚಾಯಿತಿ ಅಧ್ಯಕ್ಷರಾದ ದಿನೇಶ್, ಬಿಜೆಪಿ ಆಲೂರು ತಾಲೂಕು ಪ್ರಧಾನ ಕಾರ್ಯದರ್ಶಿ ಸಂದೇಶ್ ಇತರರು ಉಪಸ್ಥಿತರಿದ್ದರು.

- Advertisement -

Latest Posts

Don't Miss