Friday, September 20, 2024

Latest Posts

ಬೇಬಿಕಾರ್ನ್ ಬಳಸಿ ಈ ಖಾದ್ಯ ತಯಾರಿಸಿ ನೋಡಿ..

- Advertisement -

ಹೊಟೇಲ್‌ನಲ್ಲಿ ಸಿಗುವ ಕೆಲ ಸ್ಪೆಶಲ್ ತಿಂಡಿಗಳಲ್ಲಿ ಬೇಬಿಕಾರ್ನ್ ಪೆಪ್ಪರ್ ಫ್ರೈ ಕೂಡ ಒಂದು. ಈ ತಿಂಡಿಯನ್ನ ನಾವು ಇನ್ನೂ ಸ್ವಾದಿಷ್ಟವಾಗಿ, ಮನೆಯಲ್ಲೇ ತಯಾರಿಸಬಹುದು. ಹಾಗಾದ್ರೆ ಈ ತಿಂಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ತಯಾರಿಸೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಾರ್ನ್ ಫ್ಲೋರ್ ಹಾಕದೇ, ಟೇಸ್ಟಿ ಟೊಮೆಟೋ ಸೂಪ್ ತಯಾರಿಸೋದು ಹೀಗೆ..

ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಬೌಲ್ ಸ್ವಚ್ಛವಾಗಿ ತೊಳೆದ ಬೇಬಿ ಕಾರ್ನ್, 1 ಸಣ್ಣಗೆ ಹೆಚ್ಚಿದ ಈರುಳ್ಳಿ, ಒಂದು ಚಿಕ್ಕ ಕಪ್ ಮೈದಾ, ಅರ್ಧ ಕಪ್ ಕಾರ್ನ್ ಫ್ಲೋರ್, ಒಂದುವರೆ ಸ್ಪೂನ್ ಪೆಪ್ಪರ್, ಒಂದು ಸ್ಪೂನ್ ಸೋಂಪು, ಒಂದು ಸ್ಪೂನ್ ಜೀರಿಗೆ, 1 ಒಣ ಮೆಣಸು, ಒಂದು ಚಕ್ಕೆ, 3 ಲವಂಗ, ಚಿಟಿಕೆ ಅರಿಶಿನ, ಒಂದು ಸ್ಪೂನ್ ಖಾರದ ಪುಡಿ, ಕಾಲು ಕೊಂಚ ಸಣ್ಣಗೆ ಹೆಚ್ಚಿದ ಕೊತ್ತೊಂಬರಿ ಸೊಪ್ಪು, ಸ್ಪೂನ್ ಪೆಪ್ಪರ್ ಪುಡಿ, ಎರಡು ಸ್ಪೂನ್ ಟೊಮೆಟೋ ಸಾಸ್, 10 ಎಸಳು ಬೆಳ್ಳುಳ್ಳಿ, 10 ಎಸಳು ಕರಿಬೇವು, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಮೈದಾ, ಕಾರ್ನ್ ಫ್ಲೋರ್, ಚಿಟಿಕೆ ಅರಿಶಿನ, ಕಾರದ ಪುಡಿ, ಪೆಪ್ಪರ್ ಪುಡಿ, ನೀರು ಹಾಕಿ ಮಿಕ್ಸ್ ಮಾಡಿ, ಬಜ್ಜಿ ಬ್ಯಾಟರ್ ರೆಡಿ ಮಾಡಿಕೊಳ್ಳಿ. ಇದರಲ್ಲಿ ಬೇಬಿಕಾರ್ನ್ ಅದ್ದಿ ಪಕೋಡಾ ರೆಡಿ ಮಾಡಿಕೊಳ್ಳಿ.

ಹೊಟೇಲ್ ಶೈಲಿಯ ಗೋಬಿ ಪೆಪ್ಪರ್ ಫ್ರೈ ತಯಾರಿಸುವುದು ಹೀಗೆ..

ಈಗ ಪ್ಯಾನ್ ಇಟ್ಟು ಪೆಪ್ಪರ್, ಸೋಂಪು, ಜೀರಿಗೆ, ಒಣ ಮೆಣಸು, ಚಕ್ಕೆ, ಲವಂಗ ಹಾಕಿ, ಚೆನ್ನಾಗಿ ಹುರಿದು ಪುಡಿ ಮಾಡಿ. ಇದಾದ ಬಳಿಕ ಅದೇ ಪ್ಯಾನ್‌ಗೆ ಎರಡು ಸ್ಪೂನ್ ಎಣ್ಣೆ ಮತ್ತು ಸಣ್ಣಗೆ ಕತ್ತರಿಸಿಕೊಂಡ ಬೆಳ್ಳುಳ್ಳಿ ಹಾಕಿ, ಹುರಿಯಿರಿ. ಇದಾದ ಬಳಿಕ ಕರಿಬೇವು ಮತ್ತು ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಅಗತ್ಯವಿದ್ದಲ್ಲಿ ಕ್ಯಾಪ್ಸಿಕಂ ಬಳಸಬಹುದು.

ಇದಾದ ಬಳಿಕ ಟೊಮೆಟೋ ಸಾಸ್, ಮೊದಲೇ ತಯಾರಿಸಿಕೊಂಡ ಬೇಬಿ ಕಾರ್ನ್ ಪಕೋಡಾ, ಮತ್ತು ಮಸಾಲೆ ಪುಡಿ, ಕೊತ್ತೊಂಬರಿ ಸೊಪ್ಪು ಸೇರಿಸಿ,ಮಿಕ್ಸ್ ಮಾಡಿದ್ರೆ ಪನೀರ್ ಪೆಪ್ಪರ್ ಫ್ರೈ ರೆಡಿ.

ಈಗ ರೆಸ್ಟೋರೆಂಟ್ ಸ್ಟೈಲ್ ಫ್ರೈಡ್ ರೈಸ್ ಮನೆಯಲ್ಲೇ ತಯಾರಿಸಬಹುದು…

- Advertisement -

Latest Posts

Don't Miss