Saturday, May 10, 2025

Latest Posts

Baby Death: ಮನೆಯಲ್ಲಿ ಒಬ್ಬಂಟಿಯಾಗಿ ಮಗುವನ್ನು ಬಿಟ್ಟು ಹೋದ ಪೋಷಕರು: ಮಗು ಸಾವು

- Advertisement -

Bengaluru News: ಬೆಂಗಳೂರಿನಲ್ಲಿ 5 ವರ್ಷದ ಬಾಲಕ ಸಂಪಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಅಪ್ಪ ಅಮ್ಮ ಮನೆಯಲ್ಲಿ ಮಗುವೊಂದನ್ನೇ ಬಿಟ್ಟು, ಕೆಲಸಕ್ಕೆ ಹೋಗಿದ್ದು, ಮಗು ಆಟವಾಡುತ್ತ, ಸಂಪಿಗೆ ಬಿದ್ದಿದೆ. 5 ವರ್ಷದ ಸುಬೀನ್ ಸಾವನ್ನಪ್ಪಿದ ಬಾಲಕನಾಗಿದ್ದಾನೆ.

ಬೆಂಗಳೂರಿನ ಅಯ್ಯಪ್ಪನಗರದ ವಿಶಾಲ್ ಮಾರ್ಟ್ ಎದುರಿನಲ್ಲಿ ಇರುವ ಮನೆಯಲ್ಲಿ ಈ ಘಟನೆ ನಡೆದಿದ್ದು, ನೇಪಾಳ ಮೂಲದ ದಂಪತಿ ಈ ಮನೆಯಲ್ಲಿ ವಾಸವಿದ್ದರು. ಇಬ್ಬರೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಮಗುವನ್ನು ಮನೆಯಲ್ಲೇ ಬಿಟ್ಟು ಹೋಗುತ್ತಿದ್ದರು.

ಆದರೆ ದುರಾದೃಷ್ಟವಶಾತ್, ಮಗು ಆಟವಾಡುತ್ತ ನೀರಿನ ಸಂಪಿಗೆ ಬಿದ್ದಿದೆ. ಕೆಲಸ ಮುಗಿಸಿ, ಮನೆಗೆ ಬಂದ ದಂಪತಿ ಮಗುವನ್ನು ಹುಡುಕಿದ್ದು, ಸಂಪ್‌ನಲ್ಲಿ ನೋಡಿದ್ದಾರೆ. ಮಗುವನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಆದರೂ ಮಗು ಅದಾಗಲೇ ಕೊನೆಯುಸಿರೆಳೆದಿತ್ತು. ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Anjali Case: ಅಂಜಲಿ ಪ್ರಕರಣದಲ್ಲಿ ಮತ್ತೋರ್ವ ಪೊಲೀಸ್ ಅಧಿಕಾರಿ ಅಮಾನತು

G.Parameshwar Press Meet: ಹೆಚ್ಡಿಕೆ ಫೋನ್ ಟ್ರ್ಯಾಪ್ ಆರೋಪಕ್ಕೆ ತಿರುಗೇಟು ನೀಡಿದ ಗೃಹಸಚಿವರು

ಹುಬ್ಬಳ್ಳಿಯ ಕೊ* ಕೇಸ್: ನೇಹಾ ಮತ್ತು ಅಂಜಲಿ ಮನೆಗೆ ಭೇಟಿ ನೀಡಿದ ಗೃಹಸಚಿವ ಜಿ.ಪರಮೇಶ್ವರ್

- Advertisement -

Latest Posts

Don't Miss