Thursday, January 23, 2025

Latest Posts

Bajrang Dal ಹಾಗೂ  ವಿಶ್ವಹಿಂದುಪರಿಷತ್ ಕಾರ್ಯಕರ್ತರು

- Advertisement -

ಚಿಕ್ಕಮಗಳೂ : ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕರಗುಂದ ಗ್ರಾಮದ ಸರ್ಕಾರಿ ಅರಣ್ಯ  ಜಾಗದಲ್ಲಿ  ಅನಧಿಕೃತವಾಗಿ ಶಿಲುಬೆ ಸ್ಥಾಪಿಸಿದ್ದು ಇದನ್ನೂ ವಿರೋಧಿಸಿ  ಭಜರಂಗದಳ ಹಾಗೂ  ವಿಶ್ವಹಿಂದುಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು .

ತಾಲೂಕಿನ ದೀಪ್ತಿ ಸರ್ಕಲ್ ನಿಂದ ಕರಗುಂದದವರೆಗೆ  ಬೈಕಿನ ಮೂಲಕ ಮೆರವಣಿಗೆ ಮಾಡಲು ಹೊರಟಿದ್ದು , ತಾಲೂಕಿನ ಉಮಾಮಹೇಶ್ವರ ದೇವಸ್ಥಾನದ ಸಮೀಪ ಪ್ರತಿಭಟನೆಯ ಮೆರವಣಿಗೆ ಬರುತ್ತಿದಂತೆ , ಪೊಲೀಸರು ಬೈಕ್ ಮೆರವಣಿಗೆ ಮಾಡುತ್ತಿದ್ದ ಭಜರಂಗದಳದ ಕಾರ್ಯಕರ್ತರನ್ನು ರಸ್ತೆಮದ್ಯೆದಲ್ಲೆ ಮುಂದಕ್ಕೆ ಹೋಗದಂತೆ  ತೆಡೆಯಲಾಯಿತು.

ಪ್ರತಿಭಟನಗಾರರು ಬ್ಯಾರಿಕೆಟ್ ತಳ್ಳಿ ಮುಂದಕ್ಕೆ ಹೋಗಲು ಯತ್ನಿಸಿದರು ನಂತರ ಪೊಲೀಸ್ ಅಧಿಕಾರಿಗಳು ಹಾಗೂ  ಭಜರಂಗದಳದ ಕಾರ್ಯಕರ್ತರ ನಡುವೆ  ಮಾತಿನ ಚಕಮಕಿ ನಡೆಯಿತು ಪ್ರತಿಭಟನಾಕಾರರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿಲಾಯಿತು.

ಪ್ರತಿಭಟನಾ ಸ್ಥಳಕ್ಕೆ ತಾಲ್ಲೂಕಿನ ತಹಶಿಲ್ದಾರ್ ಗೀತಾ ಹಾಗೂ ವಲಯ ಅರಣ್ಯಾಧಿಕಾರಿ  ರಂಗನಾಥ್ ಇವರು ಬೇಟಿ ನೀಡಿದರು . ತಾಲೂಕು ವಿಶ್ವಹಿಂದುಪರಿಷತ್ ಅಧ್ಯಕ್ಷ ಕೆ.ಪಿ ಸುರೇಶ್  ಮಾತನಾಡಿ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಇರುವ ಶಿಲುಬೆಯನ್ನು ಸ್ಥಳೀಯ ಅಧಿಕಾರಿಗಳು ತೆರವುಗೊಳಿಸದಿದ್ದಲ್ಲಿ ಸಂಘಟನೆ ತೆರವು ಮಾಡುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು ನಂತರ ಮಾತನಾಡಿದ  ತಹಶಿಲ್ದಾರ್ ಗೀತ ಮುಂದಿನ ಒಂದು ವಾರದೊಳಗೆ  ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು .

ನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು. ಅನಧಿಕೃತವಾಗಿ ಸ್ಥಾಪಿಸಿದ ಶಿಲುಬೆಯನ್ನು ತೆರವುಗೊಳಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮುಂದುವರೆಯುತ್ತದೆ ಅಂತ ಭಜರಂಗದಳದ ಮುಖಂಡ ಮಹೇಂದ್ರ ಎಚ್ಚರಿಕೆ ನೀಡಿದರು .ಬಂದಿಸಿದ ಪ್ರತಿಭಟನಗಾರರನ್ನ ನಂತರ  ಬಿಡುಗಡೆಮಾಡಲಾಯಿತು.

- Advertisement -

Latest Posts

Don't Miss