ಇತ್ತೀಚೆಗೆ ಯಾರೂ ಹೆಚ್ಚಾಗಿ ಬನಾನಾ ಹೇರ್ ಮಾಸ್ಕ್ ಬಳಸೋದಿಲ್ಲಾ. ಆದ್ರೆ ಬನಾನಾ ಹೇರ್ ಮಾಸ್ಕ್‌ನ್ನು ಸರಿಯಾದ ರೀತಿಯಲ್ಲಿ ಬಳಸಿದ್ರೆ, ಅದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ನಾವಿಂದು ಬನಾನಾ ಹೇರ್ ಮಾಸ್ಕ್ ತಯಾರಿಸೋದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
2 ಬಾಳೆ ಹಣ್ಣು, 2 ಸ್ಪೂನ್ ಆ್ಯಲೋವೆರಾ, 2 ಸ್ಪೂನ್ ತೆಂಗಿನ ಎಣ್ಣೆ, 2 ಸ್ಪೂನ್ ಬಾದಾಮಿ ಎಣ್ಣೆ ಇವಿಷ್ಟು ಮಾಸ್ಕ್ ತಯಾರಿಸಲು ಬೇಕಾಗುವ ಸಾಮಗ್ರಿ. ಮೊದಲು ಬಾಳೆಹಣ್ಣನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿಕೊಳ್ಳಿ. ಇದಕ್ಕೆ ಆ್ಯಲೋವೆರಾ, ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಾಸ್ಕನ್ನು ತಿಂಗಳಿಗೆ 2 ಬಾರಿ ಹಾಕಿದ್ರೆ ಸಾಕು.
ಯಾರ ಶಾಪದಿಂದಾಗಿ ಕೃಷ್ಣನ ಗೆಳೆಯ ಸುಧಾಮ ಬಡವನಾದ ಗೊತ್ತಾ..?
ನೀವು ಇದನ್ನು ಬಳಸಿ 15 ನಿಮಿಷದ ಬಳಿಕ ತಲೆ ಸ್ನಾನ ಮಾಡಬೇಕು. ಕೆಮಿಕಲ್ ಇಲ್ಲದ ಶ್ಯಾಂಪೂ ಬಳಸಿ. ಇಲ್ಲವಾದಲ್ಲಿ, ಶೀಗೇಕಾಯಿ ಪುಡಿಯಿಂದ ಸ್ನಾನ ಮಾಡಿ. ಇನ್ನು ನೀವು ಈ ಮಾಸ್ಕ್ ಬಳಸುವ ಮುನ್ನ ತಲೆಗೆ ಎಣ್ಣೆ ಹಚ್ಚದಿದ್ದರೆ, ಒಳಿತು. ಆವಾಗಲೇ ಮಾಸ್ಕ್ ಸರಿಯಾಗಿ ಕೆಲಸ ಮಾಡೋದು. ಇನ್ನು ಕೊನೆಯದಾಗಿ ನಿಮಗೆ ಈ ಮೂರು ವಸ್ತುವಿನಲ್ಲಿ ಯಾವುದಾದರೂ ವಸ್ತು ಬಳಸಿದ್ರೆ, ಅಲರ್ಜಿ ಎಂದಾದಲ್ಲಿ, ವೈದ್ಯರ ಬಳಿ ವಿಚಾರಿಸಿ, ನಂತರ ಬಳಸುವುದು ಉತ್ತಮ.
ಈ 3 ವಸ್ತುವಿನಿಂದ ತಯಾರಿಸಿದ ಹೇರ್ ಮಾಸ್ಕ್ ಬಳಸಿದ್ರೆ, ಕೂದಲಿನ ಎಲ್ಲ ಸಮಸ್ಯೆಗೂ ಸಿಗತ್ತೆ ಪರಿಹಾರ..
ಇನ್ನು ಈ ಮಾಸ್ಕ್ ಹಾಕುವುದರಿಂದ ಏನು ಪ್ರಯೋಜನ ಅಂದ್ರೆ, ಇದರಿಂದ ನಿಮ್ಮ ಕೂದಲು ಸಿಲ್ಕಿಯಾಗಿ, ಸ್ಮೂತ್ ಆಗಿ, ಶೈನಿಯಾಗಿರುತ್ತದೆ. ಆ್ಯಲೋವೆರಾ, ತೆಂಗಿನ ಎಣ್ಣೆ ಬಳಸಿರೋದ್ರಿಂದ, ನಿಮ್ಮ ಕೂದಲ ಬುಡ ಕೂಡ ಗಟ್ಟಿಗೊಳ್ಳುತ್ತದೆ.