Saturday, April 5, 2025

Latest Posts

BBMP ಅನುಮತಿ : ಮಾರ್ಚ್ 8ರಂದು ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವ..!

- Advertisement -

ಬೆಂಗಳೂರಿನ (Bangalore) ಐತಿಹಾಸಿಕ ಕರಗ (KARAGA) ಉತ್ಸವಕ್ಕೆ ಬಿಬಿಎಂಪಿ ಅನುಮತಿ ಕೊಟ್ಟಿದೆ. ಕೊರೋನಾ (corona) ಕಾರಣದಿಂದ ಎರಡು ವರ್ಷಗಳಿಂದ  ಬೆಂಗಳೂರು ಕರಗ ಉತ್ಸವಕ್ಕೆ ಬ್ರೇಕ್ ಬಿದ್ದಿತ್ತು, ಕೇವಲ ಧಾರ್ಮಿಕ ಆಚರಣೆಗಳಿಗೆ ಮಾತ್ರ ಅನುಮತಿಯನ್ನು ನೀಡಲಾಗಿತ್ತು. ಆದರೆ ಈಗ ಕೊರೋನಾ ಕಡಿಮೆಯಾಗುತ್ತಾ ಬರುತ್ತಿರುವುದರಿಂದ ಬೆಂಗಳೂರು ಕರಗ ಉತ್ಸವಕ್ಕೆ  ಕೆಲವು ಷರತ್ತುಗಳನ್ನು ವಿಧಿಸಿ (BBMP) ಅನುಮತಿಯನ್ನು ನೀಡಲಾಗಿದೆ. ಇದೇ ಮಾರ್ಚ್ 8ರಂದು ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವ ನಡೆಯಲಿದೆ. ಕರಗ ಉತ್ಸವಕ್ಕೆ ಅನುಮತಿ ನೀಡುವಂತೆ ಸಮಿತಿಯ ಅಧ್ಯಕ್ಷ  ಪಿ ಆರ್ ರಮೇಶ್ (P R Ramesh) ಸರ್ಕಾರಕ್ಕೆ ಹಾಗೂ ಪಾಲಿಕೆಗೆ ಪತ್ರವನ್ನು ಬರೆದಿದ್ದರು, ಬೆಂಗಳೂರಿನಲ್ಲಿ ಆಚರಿಸುವಂತಹ ಅತಿ ದೊಡ್ಡ ಉಸ್ತವ ಇದಾಗಿದ್ದು, ವಹ್ನೀಕುಲ ಕ್ಷತ್ರೀಯರು ನಡೆಸಿಕೊಂಡು ಬರುತ್ತಿರುವ  ಧರ್ಮರಾಯ ದ್ರೌಪದಮ್ಮ ಕರಗ ಉತ್ಸವ ಸುಮಾರು 800 ವರ್ಷಗಳ ಇತಿಹಾಸವಿದೆ. ಈ ಬಾರಿಯ ಕರಗ ಉತ್ಸವಕ್ಕೆ  ಬಿಬಿಎಂಪಿ ಯಿಂದ 1.30 ಕೋಟಿ ಬಜೆಟ್ ನಲ್ಲಿ ಅನುದಾನ ನೀಡಲಾಗಿದೆ. ಎರಡು ವರ್ಷಗಳ ಬಳಿಕ ಬೆಂಗಳೂರು ಕರಗ ಉತ್ಸವಕ್ಕೆ ಅನುಮತಿ ಸಿಕ್ಕಿದ್ದು ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ವಿದೇಶದಿಂದಲು ಭಕ್ತರು ಉತ್ಸವಕ್ಕೆ ಬರುವ ಸಾಧ್ಯತೆ ಇದೆ. ಕರಗ ಜಾತ್ರೆಯಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಭಾಗಿ ಆಗುವ ಸಾಧ್ಯತೆ ಇದೆ.

- Advertisement -

Latest Posts

Don't Miss