Wednesday, June 18, 2025

Latest Posts

ಹೃದಯ ಸಂಬಂಧಿ ಖಾಯಿಲೆಗಳ ಬಗ್ಗೆ ನಿಮಗಿದು ತಿಳಿದಿರಲಿ

- Advertisement -

Health Tips: ಇಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಖಾಯಿಲೆ ಅಂದ್ರೆ ಅದು ಹೃದಯ ಸಂಬಂಧಿ ಖಾಯಿಲೆ. ಚಿಕ್ಕ ವಯಸ್ಸಿನವರು ಕೂಡ ಹಾರ್ಟ್ ಅಟ್ಯಾಕ್ ಆಗಿ ಸಾಯುತ್ತಿದ್ದಾರೆ. ಜಿಮ್ ಮಾಡುವಾಗ ಎಷ್ಟೋ ಜನ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಹಾಗಾಗಿ ವೈದ್ಯರು ಹೃದಯ ಸಂಬಂಧಿ ಖಾಯಿಲೆ ಬಗ್ಗೆ ವಿವರಿಸಿದ್ದಾರೆ.

ಕರೋನರಿ ರಕ್ತನಾಳದಲ್ಲಿ ಬ್ಲಾಕೇಜ್ ಆದಾಗ ನಮಗೆ ಹಾರ್ಟ್ ಅಟ್ಯಾಕ್ ಆಗುತ್ತದೆ. ಈ ಕರೋನರಿ ರಕ್ತನಾಳಗಳು ಹೃದಯದ ಮೇಲ್ಭಾಗದಲ್ಲಿ ಇರುತ್ತದೆ. ಅದೇ ಹೃದಯದ ವಾಲ್‌ನಲ್ಲಿ ಪ್ರಾಬ್ಲಮ್ ಆದಾಗ, ವಾಲ್ನರ್ ಹಾರ್ಟ್ ಡಿಸೀಸ್ ಎಂದು ಹೇಳಲಾಗುತ್ತದೆ. ಇದೇ ರೀತಿ ಹಾರ್ಟ್ ಫೆಲ್ಯೂರ್, ಹಾರ್ಟ್ ಅಟ್ಯಾಕ್, ಹಾರ್ಟ್ ಡಿಸೀಸ್ ಹೀಗೆ ಹೃದಯಕ್ಕೆ ಸಂಬಂಧಿಸಿದಂತೆ ನಾನಾ ರೀತಿಯ ಖಾಯಿಲೆಗಳಿದೆ.

ಇನ್ನು ಅನುವಂಶಿಕವಾಗಿ ಹೃದಯಾಘಾತವಾಗುವ ಸಾಧ್ಯತೆ ಇರುತ್ತದೆ. ಅಪ್ಪ, ಅಮ್ಮ, ಅಜ್ಜಿ, ತಾತ ಅಥವಾ ಯಾರಾದರೂ ಸಂಬಂಧಿಕರಿಗೆ ಹಾರ್ಟ್ ಅಟ್ಯಾಕ್ ಇದ್ರೆ, ಅದು ಮುಂದಿನ ಪೀಳಿಗೆಯವರಿಗೂ ಬರುವ ಸಾಧ್ಯತೆ ಇರುತ್ತದೆ ಅಂತಾರೆ ವೈದ್ಯರು. ಇದನ್ನು ಬಿಟ್ಟು ನಾವು ಅನಾರೋಗ್ಯಕರ ಜೀವನ ಶೈಲಿಯನ್ನು ಜೀವಿಸುತ್ತಿದ್ದರೆ, ಹಾರ್ಟ್ ಪ್ರಾಬ್ಲಮ್ಸ್ ಬರುವ ಸಾಧ್ಯತೆ ಹೆಚ್ಚ. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss