Health Tips: ಮಳೆಗಾಲ ಬಂದ್ರೆ, ನಾವು ಆರೋಗ್ಯದ ಬಗ್ಗೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಉತ್ತಮ ಆಹಾರ, ಬಿಸಿ ಬಿಸಿ ನೀರು, ಬೆಚ್ಚಗಿನ ಬಟ್ಟೆ ಹೀಗೆ ಸಾಕಷ್ಟು ಕಾಳಜಿ ವಹಿಸಲೇಬೇಕಾಗುತ್ತದೆ. ಇಲ್ಲದಿದ್ದಲ್ಲಿ, ಜ್ವರ, ಕೆಮ್ಮು, ನೆಗಡಿ ಬಂದೇ ಬರುತ್ತದೆ. ಮಳೆಗಾಲವೆಂದರೆ ಜ್ವರ, ನೆಗಡಿ, ಕೆಮ್ಮು ಬರುವುದು ಸಹಜವೆಂದು ನಿಮಗನ್ನಿಸಬಹುದು. ಆದರೆ ಇದು ನಿಮ್ಮ ಜೀವಕ್ಕೂ ಧಕ್ಕೆ ತರಬಹುದು. ಈ ಬಗ್ಗೆ ವೈದ್ಯರಾದ ಡಾ.ಭೀಮ್‌ಸೇನ್ ರಾವ್ ಉತ್ತಮ ಮಾಹಿತಿ ಕೊಟ್ಟಿದ್ದಾರೆ ನೋಡಿ..
ಮಳೆಗಾಲ ಶುರುವಾಗುತ್ತಿದ್ದಂತೆ, ನಾವು ಜ್ವರ, ನೆಗಡಿ,ಕೆಮ್ಮಿನ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲೇಬೇಕು. ಏಕೆಂದರೆ, ಇದು ಅತೀ ಸುಲಭವಾಗಿ ಹರಡುತ್ತದೆ. ಹಾಗಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವನೆ ಮಾಡುವುದು. ಬಿಸಿ ಬಿಸಿ ನೀರಿನ ಸೇವನೆ ಮಾಡುವುದು. ಅರಶಿನ ಹಾಲಿನ ಸೇವನೆ. ಹೀಗೆ ಆರೋಗ್ಯಕರ ಜೀವನದ ಕಡೆ ನಾವು ಗಮನ ಕೊಡಬೇಕು. ಜಂಕ್ ಫುಡ್ ಸೇವನೆ, ಬೀದಿ ಬದಿ ತಿಂಡಿ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಿದರೂ ಉತ್ತಮ.
ಇನ್ನು ಹೀಗೆ ಬರುವ ಕೆಮ್ಮು, ನೆಗಡಿ, ಜ್ವರವನ್ನು ಎಂದಿಗೂ ಕಡೆಗಣಿಸಬಾರದು. ಯಾಕಂದ್ರೆ ಹೆಚ್ಚಿನವರು ಮಳೆಗಾಲದಲ್ಲಿ ಟ್ರಿಪ್, ಔಟಿಂಗ್ ಅಂತಾ ಸುತ್ತಾಡುತ್ತಿರುತ್ತಾರೆ. ಇದರಿಂದ ನಮ್ಮ ಜ್ವರ, ನೆಗಡಿ, ಕೆಮ್ಮು ಇನ್ನೂ ಹೆಚ್ಚಾಗಬಹುದು. ಹಾಗಾಗಿ ಇದರ ಬಗ್ಗೆ ಗಮನ ಕೊಡುವುದು ತುಂಬಾ ಮುಖ್ಯವಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಚೈಲ್ಡ್ ಹುಡ್ ಅಸ್ತಮಾ ಬಗ್ಗೆ ಗಾಬರಿ ಇದೆಯಾ..? ಈ ಬಗ್ಗೆ ವೈದ್ಯರೇ ಸಲಹೆ ಕೊಟ್ಟಿದ್ದಾರೆ ನೋಡಿ..
ಲಂಗ್ ಟ್ರಾನ್ಸಪ್ಲಾಂಟ್ ಅಂದ್ರೇನು..? ಈ ಆಪರೇಷನ್ ಆದವರು ಎಷ್ಟು ವರ್ಷ ಬದುಕುತ್ತಾರೆ..?