Monday, June 24, 2024

Latest Posts

Health Tips: ತಂಬಾಕು, ಹನ್ಸ್ ಇವುಗಳನ್ನು ಸೇವಿಸುವ ಮುನ್ನ ಎಚ್ಚರವಾಗಿರಿ..

- Advertisement -

Health Tips: ಹಲವರು ಹಲವು ರೀತಿಯ ಚಟಗಳನ್ನು ಹೊಂದಿರುತ್ತಾರೆ. ಈ ಚಟಗಳೇ ನಮ್ಮ ಚಟ್ಟ ಕಟ್ಟಲು ಕಾರಣವಾಗುತ್ತದೆ ಅನ್ನೋದನ್ನು ಮಾತ್ರ ಮರೆತಿರುತ್ತಾರೆ. ಮದ್ಯಪಾನ, ಧೂಮಪಾನ ಸೇರಿ ಹಲವುಚಟಗಳ ದಾಸರಾಗಿ, ಮನೆಮಠ ಕಳೆದುಕೊಂಡು ಬೀದಿಪಾಲಾಗುವುದಲ್ಲದೇ, ರೋಗವನ್ನು ಕೂಡ ಹತ್ತಿಸಿಕೊಂಡಿರುತ್ತಾರೆ. ತಂಬಾಕು ಸೇವನೆಯ ಚಟವಿರುವವ ಕಥೆ ಇದೇ ರೀತಿಯಾಗಿರುತ್ತದೆ. ಅದಕ್ಕಾಗಿ ವೈದ್ಯರೇ, ತಂಬಾಕು, ಹನ್ಸ್ ಸೇವನೆಯಿಂದ ಏನೇನು ಹಾನಿಯುಂಟಾಗುತ್ತದೆ ಅಂತಾ ಹೇಳಿದ್ದಾರೆ ನೋಡಿ..

ಕ್ಯಾನ್ಸರ್ ಬಗ್ಗೆ ವೈದ್ಯರು ಈಗಾಗಲೇ ನಿಮಗೆ ಹಲವು ಮಾಹಿತಿಗಳನ್ನು ನೀಡಿದ್ದಾರೆ. ಕ್ಯಾನ್ಸರ್ ಬರಲು ಕಾರಣವೇನು..? ಕ್ಯಾನ್ಸರ್ ಬಂದಾಗ ಕಂಡುಹಿಡಿಯುವುದು ಹೇಗೆ..? ಯಾವಾಗ ಕ್ಯಾನ್ಸರ್ ಟ್ರೀಟ್‌ಮೆಂಟ್ ತೆಗೆದುಕೊಳ್ಳಲು ಶುರು ಮಾಡಬೇಕು..? ಹೀಗೆ ಅನೇಕ ವಿಷಯಗಳನ್ನು ನಾವು ನಿಮಗೆ ಈಗಾಗಲೇ ತಿಳಿಸಿದ್ದೇವೆ. ತಂಬಾಕು, ಹನ್ಸ್‌ಗಳನ್ನು ಸೇವಿಸಬಾರದು ಅಂತಾ ವೈದ್ಯರು ಹೇಳಲು ಕಾರಣವೇನೆಂದರೆ ಇದೇ ಕ್ಯಾನ್ಸರ್.

ಹೌದು. ನಾವು ಯಾವ ರೀತಿ ಜೀವಿಸುತ್ತೇವೆ ಎಂಬುದು ಕೂಡ ನಮಗೆ ಬರುವ ರೋಗ ಹೇಳುತ್ತದೆ. ತಂಬಾಕು ಹನ್ಸ್ ಸೇವನೆ, ಕ್ಯಾನ್ಸರ್‌ಗೆ ಕಾರಣವಾಗಬಹುದು. ಧೂಮಪಾನ ಮದ್ಯಪಾನ ಕೂಡ ಕ್ಯಾನ್ಸರ್‌ಕಾರಕವಾಗಿದೆ. ಹೆಚ್ಚು ಬೀದಿಬದಿ ಆಹಾರ ಸೇವನೆ, ಪ್ಲ್ಯಾಸ್ಟಿಕ್ ಲೋಟ, ತಟ್ಟೆ, ವಸ್ತುಗಳ ಬಳಕೆಯಿಂದಲೇ ಅತೀ ಹೆಚ್ಚು ಕ್ಯಾನ್ಸರ್ ಬರುತ್ತಿದೆ.

ಆದರೆ ಕೆಲವೊಂದು ವಿಚಿತ್ರ ಕೇಸ್ ಇರುತ್ತೆ. ಜನ್ಮದಲ್ಲೇ ಬೀಡಿ, ಸಿಗರೇಟ್ ಮುಟ್ಟದವರಿಗೂ ಕ್ಯಾನ್ಸರ್ ಬರುತ್ತದೆ. ಹೆಚ್ಚು ಬೀಡಿ, ಸಿಗರೇಟ್ ಸೇದಿಕೊಂಡು, ಸಿಕ್ಕಿದ್ದನ್ನ ತಿಂದು ಬದುಕುವರು ಆರೋಗ್ಯವಾಗಿರುತ್ತಾರೆ. ಆದರೆ ಇಂಥವು ಅಪರೂಪದಲ್ಲೇ ಅಪರೂಪದ ಕೇಸ್ ಆಗಿರುತ್ತದೆ. ಹಾಗಾಗಿ ಕೆಟ್ಟ ಚಟಗಳ ದಾಸರಾಗಬೇಡಿ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss