Health Tips: ಈಗಗಾಲೇ ನಾವು ಸ್ತನದ ಭಾಗದಲ್ಲಿ ಎಂಥ ಗಂಟುಗಳು ಕಂಡುಬರಬಹುದು. ಹಾಗೆ ಗಂಟು ಕಂಡುಬಂದಾಗ ಏನು ಮಾಡಬೇಕು..? ಯಾವ ಗಂಟು ಅಪಾಯಕಾರಿ, ಯಾವ ಗಂಟು ಅಪಾಯಕಾರಿ ಅಲ್ಲ ಅನ್ನೋ ಬಗ್ಗೆ ಹೇಳಿದ್ದೆವು. ಅದೇ ವಿಷಯದ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದು, 45 ವರ್ಷದ ಬಳಿಕ ಸ್ತನದಲ್ಲಿ ಗಂಟು ಕಂಡುಬಂದರೆ ಏನರ್ಥ ಎಂದು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ವೈದ್ಯರಾದ ಡಾ.ಅರ್ಜುನ್ ಅವರು ಈ ಬಗ್ಗೆ ವಿವರಿಸಿದ್ದು, ಮುಟ್ಟಿನ ಸಮಯದಲ್ಲಷ್ಟೇ ನಿಮ್ಮ ಸ್ತನದಲ್ಲಿ ಗಂಟಾಗುತ್ತಿದ್ದರೆ, ಬಳಿಕ ಅದು ಹೋದರೆ, ಅದು ಆಪರೇಷನ್ ಮಾಡುವಂಥ ಗಡ್ಡೆಗಳಲ್ಲ. ಬದಲಾಗಿ ಅದಕ್ಕಾಗಿ ಔಷಧಿ ಕೊಟ್ಟು, ಆ ಸಮಸ್ಯೆಯನ್ನು ಸರಿ ಮಾಡಬಹುದು.
ಆದರೆ 45 ವರ್ಷ ದಾಟಿದ ಬಳಿಕ, ಮುಟ್ಟು ನಿಲ್ಲುವ ಸಮಯದಲ್ಲಿ ಸ್ತನದಲ್ಲಿ ಗಂಟಾದರೆ, ಖಂಡಿತವಾಗಿಯೂ ಇದನ್ನು ನಿರ್ಲಕ್ಷಿಸದೇ, ವೈದ್ಯರ ಬಳಿ ತೋರಿಸಿ, ಪರೀಕ್ಷಿಸಿಕೊಳ್ಳಬೇಕು. ಏಕೆಂದರೆ, ಈ ಸಮಯದಲ್ಲಿ ಕ್ಯಾನ್ಸರ್ ಗಡ್ಡೆ ಬೆಳೆಯುವ ಸಾಧ್ಯತೆ ಇರುತ್ತದೆ. ಹಾಗಂತ 45 ವರ್ಷದ ಬಳಿಕ ಸ್ತನದಲ್ಲಾಗುವ ಎಲ್ಲ ಗಡ್ಡೆಗಳು ಕ್ಯಾನ್ಸರ್ ಗಡ್ಡೆಗಳೇ ಎಂದಲ್ಲ. ಆದರೆ ಅದನ್ನು ನಿರ್ಲಕ್ಷಿಸದೇ ಪರೀಕ್ಷಿಸಿಕೊಳ್ಳುವುದು ಉತ್ತಮ ಅಂತಾರೆ ವೈದ್ಯರು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..




