Health Tips: ಖ್ಯಾತ ಆಯುರ್ವೇದ ತಜ್ಞರಾದ ಡಾ.ರವಿರಾಜ್ ಸೋರಿಯಾಸಿಸ್ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ. ಅದರಂತೆ, ಇಂದು ಕೂಡ ಸೋರಿಯಾಸಿಸ್ ಲಕ್ಷಣಗಳೇನು..? ಅದು ಬಂದಾಗ, ನಮ್ಮ ದೇಹದ ಮೇಲೆ ಯಾವ ರೀತಿಯ ಗುಳ್ಳೆಗಳಾಗುತ್ತದೆ..? ಎಂಥ ತೊಂದರೆಯಾಗುತ್ತದೆ ಅಂತಾ ವಿವರಿಸಿದ್ದಾರೆ.
ಸೋರಿಯಾಸಿಸ್ ಅನ್ನೋದು ಚಿಕ್ಕ ಮೊಡವೆಯಂತೆ ಶುರುವಾಗುತ್ತದೆ. ಬಳಿಕ ತುರಿಕೆ ಶುರುವಾಗುತ್ತದೆ. ಅದೇ ತುರಿಕೆ ಹೆಚ್ಚಾಗಿ, ಚಿಕ್ಕ ಗುಳ್ಳೆ, ದೊಡ್ಡ ಗುಳ್ಳೆಗಳಾಗಿ ಮಾರ್ಪಾಡಾಗುತ್ತದೆ. ಬಳಿಕ ಚರ್ಮಕ್ಕೆ ಹರಡಲು ಶುರುವಾಗುತ್ತದೆ. ಚರ್ಮ ಸಿಪ್ಪೆಯಂತೆ ಪುಡಿ ಪುಡಿಯಾಗುತ್ತದೆ. ಮೊದಲು ಕುತ್ತಿಗೆಯ ಬಳಿ, ಅಥವಾ ತೊಡೆಯ ಸಂಧಿಯಲ್ಲಿ ಕಾಣಿಸಿಕೊಳ್ಳುವ ಸೋರಿಯಾಸಿಸ್, ದೇಹಕ್ಕೆ ಪಸರಿಸುವ ಸಾಧ್ಯತೆ ಇರುತ್ತದೆ.
ಎಷ್ಟೋ ಜನ, ಈ ರೋಗ ಬಂದು, ಜೀವನವೇ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಮತ್ತೆ ಕೆಲವರು, ಮನೆಯ ಹೊರಹೋಗಲಾಗದೇ, ಮೂಲೆ ಗುಂಪಾಗಿದ್ದಾರೆ. ಮಾನಸಿಕವಾಗಿ ಖಿನ್ನತೆಗೆ ಒಳಗಾದವರಿದ್ದಾರೆ. ಸರಿಯಾಗಿ ಚಿಕಿತ್ಸೆ ಪಡೆದು, ಖಾಯಿಲೆ ಗುಣಪಡಿಸಿಕೊಂಡವರೂ ಇದ್ದಾರೆ.
ಇನ್ನು ವೈದ್ಯರು ಹೇಳುವ ಪ್ರಕಾರ, ಎಲ್ಲ ಖಾಯಿಲೆಗಳು ಸೋರಿಯಾಸಿಸ್ ಅಲ್ಲ. ಸೋರಿಯಾಸಿಸ್ ರೀತಿ ಬೇರೆ ಬೇರೆ ಚರ್ಮದ ಖಾಯಿಲೆಗಳಿದೆ. ಆದರೆ ಸೋರಿಯಾಸಿಸ್ ಮಾತ್ರ, ಭಯಂಕರವಾದ ಚರ್ಮ ಖಾಯಿಲೆ. ಇದನ್ನು ವೈದ್ಯರು ಭಯಂಕರವಾದ ಖಾಯಿಲೆ ಎಂದು ಕರೆಯಲು ಕಾರಣವೇನೆಂದರೆ, ಇದರ ತುರಿಕೆಯ ಪ್ರಭಾವ ಕೆಟ್ಟದ್ದಾಗಿರುತ್ತದೆ. ಹಗಲು, ರಾತ್ರಿ ಎನ್ನದೇ, ಅತೀಯಾದ ತುರಿಕೆ ಇರುತ್ತದೆ. ಆ ರೀತಿ ತುರಿಕೆಯಾಗಿ, ಚರ್ಮವೇ ಹಾಳಾಗಿ ಹೋಗುತ್ತದೆ. ಚರ್ಮ ಕೆಂಪಾಗಿ, ಪುಡಿಗಳು ಬೀಳಲು ಶುರುವಾಗುತ್ತದೆ. ಹಾಗಾಗಿ ಸೋರಿಯಾಸಿಸ್ ಭಯಂಕರ ಚರ್ಮದ ಖಾಯಿಲೆ ಎಂದು ಹೇಳಲಾಗುತ್ತದೆ. ಸೋರಿಯಾಸಿಸ್ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆ ಅಂತಾ ತಿಳಿಯಲು ಈ ವೀಡಿಯೋ ನೋಡಿ..

