Tuesday, July 1, 2025

Latest Posts

ಮುಖದ ಅಂದವನ್ನು ಹೆಚ್ಚಿಸಲು ಈ ವಸ್ತು ಬಳಸಿ, ನಟಿಯರ ಸೌಂದರ್ಯದ ಗುಟ್ಟಿದು..

- Advertisement -

ಮುಖದ ಸೌಂದರ್ಯವನ್ನ ಹೆಚ್ಚಿಸಲು ಹೆಚ್ಚಿನವರು ಹೋಗೋದು ಬ್ಯೂಟಿಪಾರ್ಲರ್‌ಗೆ. ಆದ್ರೆ ಮನೆಯಲ್ಲಿರುವ ಸಾಮಗ್ರಿಯಿಂದಲೇ ನೀವು ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅದರಲ್ಲೂ ಐಸ್‌ಕ್ಯೂಬ್ಸ್‌ನಿಂದ ಉತ್ತಮ ರಿಸಲ್ಟ್ ನೀವು ಪಡೆಯಬಹುದು. ಹೆಚ್ಚಿನ ನಟ ನಟಿಯರ ಬ್ಯೂಟಿ ಸಿಕ್ರೇಟ್ ಇದೇ. ಹಾಗಾಗಿ ಇಂದು ನಾವು ಐಸ್‌ ಕ್ಯೂಬ್ಸ್ ತಯಾರಿಸೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ.

ಪುಟ್ಟ ಮಕ್ಕಳು ಆರೋಗ್ಯವಾಗಿ, ಚುರುಕಾಗಿರಬೇಕು ಅಂದ್ರೆ ಈ ಲಾಡು ಕೊಡಿ..

ಟೊಮೆಟೋ ಐಸ್‌ ಕ್ಯೂಬ್ಸ್: ಈ ಐಸ್‌ ಕ್ಯೂಬ್ಸ್ ಬಳಸುವುದರಿಂದ ನಿಮ್ಮ ತ್ವಚೆಯ ಬಣ್ಣ ತಿಳಿಯಾಗುತ್ತದೆ. ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ. ಮುಖ ನೈಸ್ ಆಗಿರುತ್ತದೆ. ಒಂದು ದೊಡ್ಡ ಟೊಮೆಟೋ ಹಣ್ಣು ಮತ್ತು ನೀರು ಹಾಕಿ, ಗ್ರೈಂಡ್ ಮಾಡಿ. ಇದಕ್ಕೆ 2 ಸ್ಪೂನ್ ಜೇನುತುಪ್ಪ ಹಾಕಿ. ಈ ಪೇಸ್ಟ್‌ನ್ನು ಐಸ್ ಟ್ರೇಗೆ ಹಾಕಿ, ಐಸ್‌ ಕ್ಯೂಬ್ಸ್ ತಯಾರಿಸಿ. ಒಂದು ವಾರ ಪ್ರತಿದಿನ ಈ ಐಸ್‌ ಕ್ಯೂಬ್ಸ್ ಬಳಸಿ ನೋಡಿ.

ಈ ಸಾತ್ವಿಕ ಜ್ಯೂಸ್ಗಳನ್ನು ನೀವೂ ಒಮ್ಮೆ ತಯಾರಿಸಿ ನೋಡಿ..

ಆ್ಯಲೋವೆರಾ ಬ್ಯೂಟಿ ಕ್ಯೂಬ್ಸ್: ನಮ್ಮ ಮುಖದ ಎಲ್ಲಾ ಸಮಸ್ಯೆಗೂ ರಾಮಬಾಣ, ಆ್ಯಲೋವೆರಾ ಜೆಲ್. ಈ ಕ್ಯೂಬ್ಸನ್ನ ಬಳಸುವುದರಿಂದ, ನಿಮ್ಮ ಮುಖ ಸದಾ ತೇವದಿಂದ ಕೂಡಿರುತ್ತದೆ. ಆರೋಗ್ಯವಾಗಿರುತ್ತದೆ. ಅಲ್ಲದೇ, ಸುಂದರವಾಗಿ, ಶುದ್ಧವಾಗಿರುತ್ತದೆ. ಒಂದು ಕಪ್ ನೀರು, 5 ಸ್ಪೂನ್ ಆ್ಯಲೋವೆರಾ ಜೆಲ್, ಕೆಲ ಡ್ರಾಪ್ಸ್ ಎಸೆನ್ಶಿಯಲ್ ಎಣ್ಣೆ, ಇವಿಷ್ಟನ್ನು ಸೇರಿಸಿ, ಮಿಕ್ಸ್ ಮಾಡಿ. ಇದನ್ನು ಐಸ್‌ ಟ್ರೇಗೆ ಹಾಕಿ, ಐಸ್ ಕ್ಯೂಬ್ಸ್ ರೆಡಿ ಮಾಡಿ. ಈ ಐಸ್ ಕ್ಯೂಬ್ಸನ್ನು ಮುಖಕ್ಕೆ ಮಸಾಜ್ ಮಾಡಿ, ಅರ್ಧ ಗಂಟೆ ಬಳಿಕ, ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಜ್ವರ ಬಂದಾಗ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ..

ಅರಿಶಿನ ಕ್ಯೂಬ್ಸ್: ಇದನ್ನು ಬಳಸುವುದರಿಂದ ನಿಮ್ಮ ಮುಖ ಸುಂದರವಾಗುತ್ತದೆ. ಆದ್ರೆ ವಾರಕ್ಕೆ 3 ಬಾರಿ ಅ ಕ್ಯೂಬ್ಸ್ ಬಳಸಿದ್ರೆ ಸಾಕು. ಒಂದು ಸ್ಪೂನ್ ಅರಿಶಿನ, ಒಂದು ಕಪ್ ಹಾಲು, ಇವೆರಡನ್ನು ಮಿಕ್ಸ್ ಮಾಡಿ, ಐಸ್ ಕ್ಯೂಬ್ಸ್ ತಯಾರಿಸಿ, ಬಳಸಿ. ಇನ್ನು ನಿಮಗೆ ಈ ಐಸ್‌ ಕ್ಯೂಬ್ಸ್‌ ಬಳಸುವುದರಿಂದ ಅಲರ್ಜಿಯಾಗುತ್ತದೆ ಎಂದಾದಲ್ಲಿ, ವೈದ್ಯರ ಬಳಿ ವಿಚಾರಿಸಿ, ಇದಕ್ಕೆ ಪರಿಹಾರ ಕಂಡುಕೊಳ್ಳಿ.

- Advertisement -

Latest Posts

Don't Miss