Monday, November 17, 2025

Latest Posts

ತುಟಿಯ ಬಣ್ಣವನ್ನು ತಿಳಿ ಗುಲಾಬಿ ಮಾಡುವುದು ಹೇಗೆ..?

- Advertisement -

ಯಾವುದೇ ವ್ಯಕ್ತಿಯಾಗಲಿ, ಅವನು ಚೆಂದವಿರಲಿ ಇಲ್ಲದಿರಲಿ. ಅವನ ನಗು ಚೆಂದವಿದ್ರೆ ಅವನು ಚೆನ್ನಾಗಿ ಕಾಣ್ತಾನೆ. ಆದ್ರೆ ಹೆಣ್ಣು ಮಕ್ಕಳ ನಗು ಯಾವಾಗ ಚೆನ್ನಾಗಿ ಕಾಣುತ್ತೆ ಅಂದ್ರೆ ಆಕೆಯ ತುಟಿ ಚೆಂದವಿದ್ದಾಗ. ತುಟಿಯ ಅಂದ ಹೆಚ್ಚಿಸಲು ಈಗಿನ ಹೆಣ್ಣು ಮಕ್ಕಳು ರಾಶಿ ರಾಶಿ ಲಿಪ್‌ಸ್ಟಿಕ್ ಹಚ್ಚುತ್ತಾರೆ. ಆದ್ರೆ ನಿಮ್ಮ ತುಟಿ ನ್ಯಾಚುರಲ್ ಆಗಿ ಅಂದವಾಗಿರಬೇಕು ಅಂದ್ರೆ, ಇಂದು ನಾವು ಹೇಳುವ ಟಿಪ್ಸ್ ಅನುಸರಿಸಬೇಕು.

ಬೆಲ್ಲವನ್ನು ಹೀಗೆ ಉಪಯೋಗಿಸಿದರೆ ಆರೋಗ್ಯ ಲಾಭವನ್ನು ಪಡೆಯುವುದು ಗ್ಯಾರಂಟಿ..

ಕೊಂಚ ಹಾಲಿನ ಕೆನೆ ಮತ್ತು ಕೊಂಚ ಅರಿಶಿನ ಮಿಕ್ಸ್ ಮಾಡಿ, ತುಟಿಗೆ ಹಚ್ಚಿ, ನಯವಾಗಿ ಮಸಾಜ್‌ ಮಾಡಿ. 5 ನಿಮಿಷ ಮಸಾಜ್ ಮಾಡಿದ ಬಳಿಕ ಇನ್ನೈದು ನಿಮಿಷ ಹಾಗೇ ಇರಿಸಿ, ನಂತರ ಕ್ಲೀನ್ ಮಾಡಿ. ಇದರಿಂದ ನಿಮ್ಮ ತುಟಿ ಪಿಂಕ್ ಆಗುತ್ತದೆ.

ಗುಲಾಬಿ ಹೂವನ್ನು ಪೇಸ್ಟ್ ಮಾಡಿ, ಅದಕ್ಕೆ ಕೊಂಚ ಗ್ಲಿಸರಿನ್ ಸೇರಿಸಿ. ಇದನ್ನು ತುಟಿಗೆ ಹಚ್ಚಿ ಮಸಾಜ್ ಮಾಡಬೇಕು. ನಮ್ಮ ದೇಹದಲ್ಲಿರುವ ಸೂಕ್ಷ್ಮ ಭಾಗಗಲ್ಲಿ ತುಟಿ ಕೂಡ ಒಂದು. ಹಾಗಾಗಿ ತುಟಿಯ ಮಸಾಜ್ ಮಾಡುವಾಗ ನಯವಾಗಿ ಮಾಡಬೇಕು. ಗುಲಾಬಿ ಪೇಸ್ಟ್ ಮತ್ತು ಗ್ಲಿಸರಿನ್ ಸೇರಿಸಿ, ಬಳಸುವುದರಿಂದ ತುಟಿ ಗುಲಾಬಿಯಾಗುತ್ತದೆ. ಸಾಫ್ಟ್ ಆಗುತ್ತದೆ.

ಗಟ್ಟಿಮುಟ್ಟಾದ ಸಧೃಡ ಕೂದಲಿಗಾಗಿ ಈ ಟಿಪ್ಸ್ ಅನುಸರಿಸಿ..

ಕೇಸರಿ ಮತ್ತು ದನದ ಹಸಿ ಹಾಲನ್ನು ಸೇರಿಸಿ, ಮಿಕ್ಸ್ ಮಾಡಿ, ಪೇಸ್ಟ್ ರೀತಿ ತಯಾರಿಸಿ. ಇದನ್ನು ನಿಮ್ಮ ತುಟಿಗೆ ಹಚ್ಚಿದರೆ, ತುಟಿಯ ಅಂದ ಹೆಚ್ಚುತ್ತದೆ. ನೀವು ಬ್ರಶ್ ಮಾಡಿ ಮುಗಿದ ಮೇಲೆ, ಬ್ರಶ್ ತೊಳೆದು ಒಮ್ಮೆ ನಿಮ್ಮ ತುಟಿಗೂ ಬ್ರಶ್ ಮಾಡಿ. ಆದ್ರೆ ರಫ್ ಆಗಿ ಬಳಸಬೇಡಿ. ಇದರಿಂದ ನಿಮ್ಮ ತುಟಿಯ ಮೇಲಿನ ಸಿಪ್ಪೆ ಹೋಗುತ್ತದೆ. ನಂತರ ಇದಕ್ಕೆ ಕೊಂಚ ತುಪ್ಪ ಸವರಿ. ರಾತ್ರಿ ಮಲಗುವಾಗ ಹೀಗೆ ಮಾಡಿದ್ರೆ, ಒಳ್ಳೆಯದು. ನೀವು ಲಿಪ್ ಬಾಮ್, ಲಿಪ್‌ಸ್ಟಿಕ್ ಬಳಸುವ ಬದಲು, ಪ್ರತಿರಾತ್ರಿ ಮಲಗುವಾಗ ತುಟಿಗೆ ಬೆಣ್ಣೆ, ತುಪ್ಪ ಅಥವಾ ಹಾಲಿನ ಕೆನೆ ಹಚ್ಚಿದರೆ ಉತ್ತಮ.

- Advertisement -

Latest Posts

Don't Miss