ಈಗಿನ ಕಾಲದಲ್ಲಿ ಎಷ್ಟೋ ಹೆಣ್ಣು ಮಕ್ಕಳು ಆಫೀಸಿಗೆ ಹೋಗುವಾಗ, ಕಾಲೇಜಿಗೆ ಹೋಗುವಾಗ ಲಿಪ್‌ಸ್ಟಿಕ್ ಹಚ್ಚಿಕೊಂಡೇ ಹೋಗೋದು. ಹಾಗೆ ಲಿಪ್‌ಸ್ಟಿಕ್ ಹಚ್ಚಿ ಹಚ್ಚಿ, ನಿಮ್ಮ ತುಟಿಯ ನ್ಯಾಚುರಲ್ ರಂಗು ಅಳಿಸಿ ಹೋಗಿರುತ್ತದೆ. ಹಾಗಾಗಿ ನೀವು ನಿಮ್ಮ ತುಟಿಯನ್ನು ನ್ಯಾಚುರಲ್ ಆಗಿ ಇಡಬೇಕಂದ್ರೆ ಕೆಲ ಟಿಪ್ಸ್ ಅನುಸರಿಸಬೇಕು. ಹಾಗಾದ್ರೆ ಆ ಟಿಪ್ಸ್ ಏನು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಟಿಪ್ಸ್. ನೀವು ರಾತ್ರಿ ಮಲಗುವ ಮುನ್ನ ನಿಮ್ಮ ತುಟಿಯನ್ನು ಬ್ರಶ್‌ನಿಂದ ಕ್ಲೀನ್ ಮಾಡಬೇಕು. ನಂತರ ಸಣ್ಣ ನಿಂಬೆ ಹಣ್ಣಿಗೆ ಸಕ್ಕರೆ ಅದ್ದಿ, ಅದರಿಂದ ಲಿಪ್ ಸ್ಕ್ರಬರ್ ತಯಾರಿಸಬೇಕು. ಇದರಿಂದ ತುಟಿಗೆ ಮಸಾಜ್ ಮಾಡಬೇಕು. 5 ನಿಮಿಷವಾದ್ರೂ ಮಸಾಜ್ ಮಾಡಿ. ಹೀಗೆ ಸ್ಕ್ರಬ್ ಮಾಡುವಾಗ, ಯಾವುದೇ ಕಾರಣಕ್ಕೂ ಫೋರ್ಸ್ ಹಾಕಬೇಡಿ. ಯಾಕಂದ್ರೆ ತುಟಿ ಸೆನ್ಸಿಟಿವ್ ಆಗಿರುತ್ತದೆ. ಹೀಗೆ ಮಸಾಜ್ ಮಾಡಿ, ಮುಂಜಾನೆ ವರೆಗೂ ಹಾಗೇ ಬಿಟ್ಟು, ಮುಂಜಾನೆ ಬ್ರಶ್ ಮಾಡಿ.
ಹಳದಿಗಟ್ಟಿದ ಹಲ್ಲನ್ನು ಸ್ವಚ್ಛಗೊಳಿಸಲು ಈ ರೆಮಿಡಿ ಬಳಸಿ..
ಎರಡನೇಯ ಟಿಪ್ಸ್. ಒಂದೂವರೆ ಸ್ಪೂನ್ ನಿಂಬೆರಸ, 1 ಚಮಚ ಗ್ಲಿಸರಿನ್, 1 ಚಮಚ ಹನಿ ಬೆರೆಸಿ ಮಿಕ್ಸ್ ಮಾಡಿ. ಈಗ ಲಿಪ್ ಮಾಸ್ಕ್ ರೆಡಿ. ರಾತ್ರಿ ಮಲಗುವಾಗ ಇದನ್ನು ತುಟಿಗೆ ಹಚ್ಚಿ ಮಲಗಿ. ಮುಂಜಾನೆ ಕ್ಲೀನ್ ಮಾಡಿದರೆ ಸಾಕು.
ಮೂರನೇಯ ಟಿಪ್ಸ್. ಒಂದು ಸ್ಪೂನ್ ಹಾಲಿಗೆ, ಚಿಟಿಕೆ ಅರಶಿನ ಹಾಕಿ ಮಿಕ್ಸ್ ಮಾಡಿ, ಇದರಿಂದ ಲಿಪ್ ಮಸಾಜ್ ಮಾಡಿ. ಇದು ಒಣಗಿದ ಬಳಿಕ ವಾಶ್ ಮಾಡಿ.
ಆ್ಯಲೋವೆರಾವನ್ನು ಹೀಗೆ ಬಳಸಿ ನೋಡಿ, ರಿಸಲ್ಟ್ ಸೂಪರ್ ಆಗಿರತ್ತೆ..
ನಾಲ್ಕನೇಯ ಟಿಪ್ಸ್. 1 ಸ್ಪೂನ್ ಹನಿ ಮತ್ತು 2 ಸ್ಪೂನ್ ಸಕ್ಕರೆ ತೆಗೆದುಕೊಂಡು, ಎರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಇದರಿಂದ ಲಿಪ್ ಮಸಾಜ್ ಮಾಡಿ, 10 ನಿಮಿಷ ಬಿಟ್ಟು ಲಿಪ್ ವಾಶ್ ಮಾಡಿ. ಇನ್ನು ನಾವು ನಿಮಗೆ ಇಲ್ಲಿ ತಿಳಿಸಿರುವ ಸಾಮಗ್ರಿ ಬಳಸಿದ್ರೆ ಅಲರ್ಜಿಯಾಗುತ್ತದೆ ಎಂದಾದಲ್ಲಿ, ವೈದ್ಯರ ಬಳಿ ಈ ಬಗ್ಗೆ ವಿಚಾರಿಸಿ, ನಂತರ ಬಳಸುವುದು ಉತ್ತಮ.