Recipe: ಬೀಟ್ರೂಟ್ ಕಟ್ಲೆಟ್ ಮಾಡಲು, ಒಂದು ಕಪ್ ಬೀಟ್ರೂಟ್ ತುರಿ, ಒಂದು ಕಪ್ ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ, ಅರ್ಧ ಕಪ್ ಕ್ಯಾರೆಟ್ ತುರಿ, ಅರ್ಧ ಕಪ್ ಬೇಯಿಸಿದ ಬಟಾಣಿ, ಕೊಂಚ ಹುರಿದ ಶೇಂಗಾ, ಎಣ್ಣೆ, ಜೀರಿಗೆ, ಕರಿಬೇವು, ಉದ್ದಿನಬೇಳೆ, ಕಡಲೆಬೇಳೆ, ಅರ್ಧ ಕಪ್ ರವೆ, ಕೊಂಚ ಅರಿಶಿನ, ಗರಂ ಮಸಾಲೆ, ಧನಿಯಾ ಪುಡಿ, ಖಾರದ ಪುಡಿ, ಜೀರಿಗೆ ಪುಡಿ, ಉಪ್ಪು ಇವಿಷ್ಟು ಬೇಕು..
ಮೊದಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಜೀರಿಗೆ, ಕರಿಬೇವು, ಉದ್ದಿನ ಬೇಳೆ, ಕಡಲೆಬೇಳೆ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಬೀಟ್ರೂಟ್ ತುರಿ, ಕ್ಯಾರೆಟ್ ತುರಿ ಹಾಕಿ ಹುರಿಯಿರಿ. ನಂತರ ಬೇಯಿಸಿದ ಆಲೂಗಡ್ಡೆ, ಬಟಾಣಿ , ಹುರಿದ ಶೇಂಗಾ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಉಪ್ಪು, ಅರಿಶಿನ, ಗರಂ ಮಸಾಲೆ, ಜೀರಿಗೆ ಪುಡಿ, ಧನಿಯಾ ಪುಡಿ, ಖಾರದ ಪುಡಿ,ಕೊತ್ತೊಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.
ಇದಕ್ಕೆ ಕಟ್ಲೇಟ್ ಶೇಪ್ ಕೊಟ್ಟು, ರವಾದಲ್ಲಿ ಅದ್ದಿ, ಎಣ್ಣೆ ಹಾಕಿ, ತವ್ವಾ ಫ್ರೈ ಮಾಡಿದ್ರೆ, ಬೀಟ್ರೂಟ್ ಕಟ್ಲೇಟ್ ರೆಡಿ..