- Advertisement -
Recipe: ಬೇಲದ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಲ್ಲದೇ, ಇದರ ಸೇವನೆಯಿಂದ ಹೊಟ್ಟೆಯ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಹಾಗಾಗಿ ಇಂದು ನಾವು ಬೇಲದ ಹಣ್ಣಿನ ಜ್ಯೂಸ್ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ.
ಬೇಲದ ಹಣ್ಣನ್ನು ಒಡೆದು, ಅದರೊಳಗಿನ ತಿರುಳನ್ನು ತೆಗೆದು ಒಂದು ಬೌಲ್‌ಗೆ ಹಾಕಿ. ಇದಕ್ಕೆ ಅರ್ಧ ಲೀಟರ್ ನೀರು ಸೇರಿಸಿ. 1 ಗಂಟೆ ಹೀಗೆ ನೆನೆಯಲು ಬಿಡಿ. ಬಳಿಕ ಇದನ್ನು ಚೆನ್ನಾಗಿ ಹಿಂಡಿ, ಇದರ ರಸವನ್ನು ಸೋಸಿ. ನಿಮಗೆ ಇದು ಹುಳ್ಳಿ ಎನ್ನಿಸಿದರೆ, ಮತ್ತಷ್ಟು ನೀರು ಸೇರಿಸಬಹುದು. ಇದಕ್ಕೆ ಎರಡು ಸ್ಪೂನ್ ರೋಸ್ ವಾಟರ್ ಹಾಕಿ. ಇದಕ್ಕೆ ಸಕ್ಕರೆ ಸೇರಿಸಬಹುದು. ಆದರೆ ಬೆಲ್ಲ ಸೇರಿಸಿದರೆ ಇನ್ನೂ ಆರೋಗ್ಯಕರವಾಗಿರುತ್ತದೆ.
ನಿಮ್ಮ ತೂಕವನ್ನು ಆರೋಗ್ಯಕರವಾಗಿ ಹೆಚ್ಚಿಸಲು ಈ ನಿಯಮವನ್ನು ಅನುಸರಿಸಿ..
- Advertisement -