ಬದನೇಕಾಯಿ ತಿನ್ನುವ ಮೊದಲು ಈ ವಿಷಯವನ್ನ ತಿಳಿದುಕೊಳ್ಳಿ..

ಬದನೇಕಾಯಿ ಹಲವರ ಫೇವರಿಟ್ ತರಕಾರಿ. ಇದರಿಂದ ಮಾಡುವ ಪಲ್ಯ, ಸಾಂಬಾರ್, ಕರಿ, ಇತ್ಯಾದಿ ಪದಾರ್ಥ ಸಖತ್ ಟೇಸ್ಟಿಯಾಗಿರತ್ತೆ. ಹಾಗಾಗಿ ಇದನ್ನು ತುಂಬಾ ಜನ ಇಷ್ಟ ಪಡ್ತಾರೆ. ಆದ್ರೆ ನೀವು ಬದನೇಕಾಯಿ ಪ್ರಿಯರಾಗಿದ್ರೆ, ನಿಮಗೆ ವಾರಕ್ಕೆರಡು ಬಾರಿಯಾದ್ರೂ ಬದನೆ ತಿನ್ನಲೇಬೇಕು ಅಂತಿದ್ರೆ, ನೀವು ಕೆಲವು ವಿಷಯಗಳನ್ನ ತಿಳಿದುಕೊಳ್ಳಲೇಬೇಕು.

ನಿಮಗೆ ಗಾಢವಾದ ನಿದ್ದೆ ಬರಬೇಕಂದ್ರೆ, ಈ ನಿಯಮವನ್ನ ಅನುಸರಿಸಿ..

ತಿಂಗಳಿಗೆ ಎರಡು ಬಾರಿಯಷ್ಟೇ ಬದನೆ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ. ಯಾಕಂದ್ರೆ ಹೆಚ್ಚು ಬದನೆಕಾಯಿ ಬಳಸುವುದರಿಂದ ದೇಹದಲ್ಲಿ ನಂಜು ಹೆಚ್ಚಾಗುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾಗಿ ಕೆಲವರು ಅಪಘಾತವಾದವರಿಗೆ, ಅಥವಾ ದೊಡ್ಡ ದೊಡ್ಡ ಗಾಯ ಮಾಡಿಕೊಂಡವರಿಗೆ ಬದನೆಕಾಯಿ ತಿನ್ನಲು ಕೊಡುವುದಿಲ್ಲ.

ಇನ್ನು ಬದನೆಕಾಯಿಯನ್ನು ರಾತ್ರಿ ಬಳಸಬೇಡಿ. ಬೆಳಿಗ್ಗೆ ಅಥವಾ ಮಧ್ಯಾಹ್ನ ಹೊತ್ತು ಬದನೇಕಾಯಿ ಪದಾರ್ಥ ಮಾಡಿ ತಿನ್ನಿ. ಯಾಕಂದ್ರೆ ಇದು ವಾತ ಪ್ರಕೃತಿಯಾಗಿದ್ದು, ರಾತ್ರಿ ಬದನೆ ತಿನ್ನುವುದರಿಂದ ಈ ಸಮಸ್ಯೆ ಹೆಚ್ಚಾಗುತ್ತದೆ.

ನವರಾತ್ರಿಯ ಆರನೇಯ ದಿನದ ಪ್ರಸಾದ ರೆಸಿಪಿ..

ಗರ್ಭಿಣಿಯರು ಬದನೆಕಾಯಿಯನ್ನ ತಿನ್ನಬಾರದು. ಯಾಕಂದ್ರೆ ಬದನೆಕಾಯಿ ಉಷ್ಣತೆಯಿಂದ ಕೂಡಿದ್ದು, ಗರ್ಭಿಣಿಯರು ಇದನ್ನ ತಿನ್ನುವುದರಿಂದ ಅವರ ಆರೋಗ್ಯಕ್ಕೂ ತೊಂದರೆಯಾಗುತ್ತದೆ. ಅಲ್ಲದೇ, ಗರ್ಭಪಾತವಾಗುವ ಸಾಧ್ಯತೆ ಇದೆ. ಹಾಗಾಗಿ ಗರ್ಭಿಣಿಯರರು ಬದನೆಕಾಯಿಯನ್ನ ತಿನ್ನದಿದ್ದರೆ ಒಳ್ಳೆಯದು.

About The Author