ಕೆಲವರಿಗೆ ತಲೆ ಕೂದಲು ಉದುರುವ ಸಮಸ್ಯೆ. ಇನ್ನು ಕೆಲವರಿಗೆ ಮೊಡವೆಗಳ ಸಮಸ್ಯೆ, ಮತ್ತೆ ಕೆಲವರಿಗೆ ಸುಟ್ಟ ಗಾಯದ ಕಲೆಯ ಸಮಸ್ಯೆ. ಹೀಗೆ ಹಲವರಿಗೆ ಹಲವು ಸಮಸ್ಯೆಗಳಿರತ್ತೆ. ಆದ್ರೆ ಆ ಸಮಸ್ಯೆಗಳಿಗೆ ಸಲ್ಯೂಷನ್ನೂ ಇರತ್ತೆ. ಹಾಗಂತ ನೀವು ಬೇರೆ ಬೇರೆ ಕ್ರೀಮ್ ಬಳಸಿ ಇದಕ್ಕೆ ಪರಿಹಾರ ಹುಡುಬೇಕಿಲ್ಲ. ಬದಲಾಗಿ ನಿಮ್ಮ ಗಾರ್ಡ್‌ನ್‌ನಲ್ಲೇ ಇರುವ ಒಂದು ವಸ್ತುವಿನಿಂದ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹುಡುಕಬಹುದು. ಯಾವುದು ಅದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ನಾವು ಇವತ್ತು ಹೇಳಹೊರಟಿರುವ ವಸ್ತು ಅಂದ್ರೆ ಆ್ಯಲೋವೆರಾ. ಹೌದು, ಪೇಟೆಯಲ್ಲಿ ಸಿಗುವ ಆ್ಯಲೋವೆರಾ ಜೆಲ್‌ಗಿಂತ, ಗಿಡದಲ್ಲಿ ಬೆಳೆದ ಆ್ಯಲೋವೆರಾ ಉತ್ತಮ. ಹಾಗಾಗಿ ಅದರ ಜೆಲ್ ತೆಗೆದು ನೀವು ಬಳಸಬಹುದು. ನಿಮಗೆ ಮೊಡವೆಯಾಗಿದ್ದಲ್ಲಿ ನೀವು ಆ್ಯಲೋವೆರಾ ಜೆಲ್ ತೆಗೆದು ಪ್ರತಿದಿನ ಹಚ್ಚಿ. ಒಂದು ವಾರದೊಳಗೆ ನೀವು ಡಿಫ್ರೆನ್ಸ್ ಕಾಣ್ತೀರಾ.
ಇನ್ನು ಕೂದಲು ಉದುರುವ ಸಮಸ್ಯೆ ಇದ್ರೆ, ತಲೆ ಸ್ನಾನ ಮಾಡುವ ಒಂದು ತಾಸು ಮೊದಲು ಆ್ಯಲೋವೆರಾ ಜೆಲ್‌ನ್ನು ತಲೆ ಬುಡಕ್ಕೆ ಹಚ್ಚಿ, ಚೆನ್ನಾಗಿ ಮಸಾಜ್ ಮಾಡಿ. ನಂತರ ಆಯುರ್ವೇದಿಕ್ ಶ್ಯಾಂಪೂ ಅಥವಾ ಸೀಗೆಕಾಯಿ ಪುಡಿ ಹಾಕಿ, ಹೇರ್ ವಾಶ್ ಮಾಡಿ. ನಿಮಗೆ ಆ್ಯಲೋವೆರಾ ಎಣ್ಣೆ ಮಾಡಲು ಬಂದ್ರೆ, ಅದನ್ನ ತಯಾರು ಮಾಡಿ, ಬಳಸಿ. ಇದರಿಂದ ಉತ್ತಮ ರಿಸಲ್ಟ್ ಪಡಿಯಬಹುದು.
ಇನ್ನು ಸುಟ್ಟ ಗಾಯವಿದ್ರೆ, ಅದಕ್ಕೂ ಆ್ಯಲೋವೆರಾ ಜೆಲ್ ಬಳಸಿ. ಆ ಜಾಗಕ್ಕೆ ಪ್ರತಿದಿನ ಜೆಲ್‌ನಿಂದ ಮಸಾಜ್ ಮಾಡಿ. ಕೆಲ ದಿನಗಳಲ್ಲೇ ಕಲೆ ವಾಸಿಯಾಗುತ್ತದೆ. ಇನ್ನು ಆ್ಯಲೋವೆರಾ ಜ್ಯೂಸ್ ಮಾಡಿ ಕುಡಿದರೆ, ಹಲವು ಆರೋಗ್ಯ ಸಮಸ್ಯೆಗಳು ವಾಸಿಯಾಗುತ್ತದೆ. ಆದ್ರೆ ಗರ್ಭಿಣಿಯರು ಆ್ಯಲೋವೆರಾ ಜ್ಯೂಸ್ ಬಳಸಲೇಬಾರದು.