Sunday, April 13, 2025

Latest Posts

ಹರಿವೆ ಸೊಪ್ಪನ್ನು ತಿನ್ನುವುದರಿಂದ ಆರೋಗ್ಯಕ್ಕಾಗಲಿದೆ ಅತ್ಯುತ್ತಮ ಲಾಭ..

- Advertisement -

ಮನುಷ್ಯನ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳನ್ನು ಒದಗಿಸುವ ಆಹಾರಗಳಲ್ಲಿ ಸೊಪ್ಪು ಕೂಡಾ ಒಂದು. ಬಸಳೆ, ಪಾಲಕ್, ಮೆಂತ್ಯೆ, ಹರಿವೆ ಹೀಗೆ ಎಲ್ಲ ಸೊಪ್ಪುಗಳಲ್ಲೂ ಕೂಡ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳಿದೆ. ಹಾಗಾದ್ರೆ ಹರಿವೆ ಸೊಪ್ಪನ್ನ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..

ಹರಿವೆ ಸೊಪ್ಪನ್ನ ಸೂಪರ್ ಫುಡ್ ಎನ್ನಲಾಗುತ್ತದೆ. ತ್ವಚೆ, ಕೂದಲು, ಮೂಳೆ, ಹೃದಯ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳೆಲ್ಲವನ್ನೂ ಹೋಗಲಾಡಿಸಿ, ಆರೋಗ್ಯವಾಗಿಡುವ ಶಕ್ತಿ ಇದರಲ್ಲಿದೆ. ಹಾಗಾಗಿ ಇದನ್ನ ಅತ್ಯುತ್ತಮ ಆಹಾರ ಅಂತಾ ಪರಿಗಣಿಸಲಾಗಿದೆ.  ಹರಿವೆ ಸೊಪ್ಪಿನಿಂದ ಸಾರು, ಸಾಂಬಾರ್, ಪಲ್ಯ, ಮೊಸರು ಬಜ್ಜಿ, ಸೂಪ್ ಮಾಡಲಾಗುತ್ತದೆ.

ಪೈಲ್ಸ್ ಬರಬಾರದೆಂದರೆ ನಾವು ಎಂಥ ಆಹಾರವನ್ನು ಸೇವಿಸಬೇಕು ಗೊತ್ತಾ..?

ನೀವು ವಾರದಲ್ಲಿ ಎರಡು ಬಾರಿಯಾದ್ರೂ ಹರಿವೆ ಸೊಪ್ಪನ್ನು ಬಳಸುವುದರಿಂದ, ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಹೃದಯ ಸಮಸ್ಯೆ ಬರದಂತೆ ಇದು ತಡೆಯುತ್ತದೆ. ಹೃದಯ ಸಮಸ್ಯೆ ಇದ್ದವರು ಕೂಡ, ನಿಯಮಿತವಾಗಿ ಹರಿವೆ ಸೊಪ್ಪನ್ನು ತಿಂದ್ರೆ, ಸಮಸ್ಯೆ ಕಡಿಮೆಯಾಗುತ್ತದೆ. ಆದ್ರೆ ಹರಿವೆ ಸೊಪ್ಪಿನ ಪದಾರ್ಥ ತಾರಿಸುವಾಗ, ಎಣ್ಣೆ, ಉಪ್ಪು, ಹುಳಿ, ಖಾರ ಕಡಿಮೆ ಹಾಕಿ.

ಪುಟ್ಟ ಮಗುವಿಗೆ ತುಪ್ಪದಿಂದ ಮಸಾಜ್ ಮಾಡಬಹುದಾ..? ಇದು ಒಳ್ಳೆಯದಾ..? ಕೆಟ್ಟದ್ದಾ..?

ಜೀರ್ಣಕ್ರಿಯೆ ಸಮಸ್ಯೆ ಬರಬಾರದು ಅಂದ್ರೆ ಹರಿವೆ ಸೊಪ್ಪನ್ನ ತಿನ್ನಬೇಕು. ನೀವು ಗಟ್ಟಿಮುಟ್ಟಾಗಿರಬೇಕು, ನಿಮ್ಮ ಮೂಳೆ ಗಟ್ಟಿಯಾಗಿರಬೇಕು ಅಂದ್ರೆ ವಾರದಲ್ಲಿ ಎರಡು ಬಾರಿಯಾದ್ರೂ ಹರಿವೆ ಸೊಪ್ಪು ತಿನ್ನಬೇಕು. ಗರ್ಭಿಣಿಯರು, ಪುಟ್ಟ ಮಕ್ಕಳು ಹಸಿ ಸೊಪ್ಪನ್ನು ಸರಿಯಾಗಿ ಅಗಿದು ತಿನ್ನಬೇಕು. ಇದರಿಂದ ಮಕ್ಕಳ ದೇಹ ಬೆಳವಣಿಗೆ, ಬುದ್ಧಿ ಬೆಳವಣಿಗೆ ಸರಿಯಾಗಿ ಆಗುತ್ತದೆ. ಅಲ್ಲದೇ ದೇಹದಲ್ಲಿ ಶಕ್ತಿ ಬರುತ್ತದೆ.

- Advertisement -

Latest Posts

Don't Miss