ರಾತ್ರಿ ಪಾದಕ್ಕೆ ತೆಂಗಿನೆಣ್ಣೆ ಮಸಾಜ್ ಮಾಡಿ.. ಆರೋಗ್ಯದಲ್ಲಾಗುವ ಬದಲಾವಣೆ ನೀವೇ ನೋಡಿ..

ತೆಂಗಿನ ಎಣ್ಣೆಯನ್ನ ಅಡುಗೆಗೆ ಬಳಸುತ್ತೇವೆ. ಹೇರ್ ಮಸಾಜ್, ಬಾಡಿ ಮಸಾಜ್‌ಗೂ ಬಳಸುತ್ತೇವೆ. ಗಾಯವಾದಾಗ, ತುರಿಕೆ, ಕಜ್ಜಿಯಾದ ಜಾಗದಲ್ಲೂ ತೆಂಗಿನ ಎಣ್ಣೆ ಹಚ್ಚಿದ್ರೆ ಉತ್ತಮ. ಅಷ್ಟೇ ಅಲ್ಲದೇ, ಪ್ರತಿದಿನ ರಾತ್ರಿ ಮಲಗುವ ವೇಳೆ ಪಾದಕ್ಕೆ ತಂಗಿನ ಎಣ್ಣೆಯಿಂದ ಮಸಾಜ್ ಮಾಡಿದ್ರೆ, ಹಲವು ಆರೋಗ್ಯಕರ ಲಾಭಗಳಾಗುತ್ತದೆ. ಹಾಗಾದ್ರೆ ಆ ಆರೋಗ್ಯಕರ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..

ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೀಗೆ ಮಾಡಿ..

ಪಾದಕ್ಕೆ ತೆಂಗಿನ ಎಣ್ಣೆಯ ಮಸಾಜ್ ಮಾಡುವುದರಿಂದ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ರಕ್ತ ಪರಿಚಲನೆ ಉತ್ತಮವಾಗುತ್ತದೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಪಾದದ ನೋವಿದ್ದಲ್ಲಿ, ಅದಕ್ಕೂ ಮುಕ್ತಿ ಸಿಗುತ್ತದೆ. ನರಗಳು ಸಡಿಲವಾಗಿ, ರಕ್‌ತ ಸಂಚಾರ ಉತ್ತಮವಾಗುತ್ತದೆ. ಪಾದ ರಫ್ ಆಗಿದ್ದರೆ, ಸ್‌ಮೂತ್ ಆಗುತ್ತದೆ.

ಹಿಂದಿನ ಕಾಲದ ಸುಂದರಿಯರು ಇದೇ ಸೌಂದರ್ಯ ಸಲಹೆಗಳನ್ನು ಪಾಲಿಸುತ್ತಿದ್ದರು..

ಹಿಮ್ಮಡಿ ಒಡೆದಿದ್ದರೆ, ಪ್ರತಿದಿನ ಎಣ್ಣೆ ಮಸಾಜ್ ಮಾಡುವುದರಿಂದ ಒಡೆದ ಹಿಮ್ಮಡಿ ಸರಿಯಾಗುತ್ತದೆ. ಸಾಫ್ಟ್ ಆಗುತ್ತದೆ. ದಪ್ಪಗಿದ್ದವರು, ಗರ್ಭಿಣಿಯರು ಪಾದಕ್ಕೆ ತೆಂಗಿನ ಎಣ್ಣೆಯ ಮಸಾಜ್ ಮಾಡಿಕೊಳ್ಳುವುದು ಉತ್ತಮ. ಆದ್ರೆ ಹೀಗೆ ಪಾದಕ್ಕೆ ಎಣ್ಣೆ ಮಸಾಜ್ ಮಾಡಿ, ನೀರಿಗೆ ಹೋಗಬೇಡಿ. ಇಲ್ಲವಾದಲ್ಲಿ ಜಾರಿ ಬೀಳುವ ಸಾಧ್ಯತೆ ಇರುತ್ತದೆ.

About The Author