Friday, April 19, 2024

Latest Posts

ಎಳನೀರನ್ನು ಸೇವಿಸುವುದರಿಂದ ಏನು ಪ್ರಯೋಜನ..?

- Advertisement -

ಕೆಲ ಆಹಾರಗಳನ್ನ ಯಾವಾಗ ಬೇಕಾದ್ರೂ ಸೇವಿಸುವಂತಿಲ್ಲ. ಅದಕ್ಕೇ ಆದಂಥ ಸಮಯವಿರುತ್ತದೆ. ಅಂಥ ವೇಳೆಯಲ್ಲೇ ಅದನ್ನ ಸೇವಿಸಬೇಕು. ಅಂಥ ಆಹಾರಗಳಲ್ಲಿ ಎಳನೀರು ಕೂಡಾ ಒಂದು. ಎಳನೀರನ್ನ ನಮಗೆ ಬೇಕಾದ ಸಮಯದಲ್ಲಿ ಕುಡಿಯಬಾರದು. ಹಾಗಾದ್ರೆ ಯಾವ ಸಮಯದಲ್ಲಿ ಎಳನೀರನ್ನು ಕುಡಿಯಬೇಕು..? ಮತ್ತು ಎಳನೀರು ಕುಡಿಯುವುದರ ಪ್ರಯೋಜನವೇನು ಅನ್ನೋದನ್ನ ನೋಡೋಣ ಬನ್ನಿ..

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

ಎಳನೀರನ್ನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಅಥವಾ ತಿಂಡಿ ಆದ 2 ಗಂಟೆ ಬಳಿಕ, ಊಟಕ್ಕೂ ಎರಡು ಗಂಟೆ ಮುಂಚೆ ಸೇವಿಸಬಹುದು. ಮಧ್ಯಾಹ್ನ 3 ಗಂಟೆಯ ತನಕ ಹಸಿವಾದಾಗ ಸೇವಿಸಿದರೆ ತೊಂದರೆ ಇಲ್ಲ. ಆದ್ರೆ 5 ಗಂಟೆಯ ಬಳಿಕ ಎಳನೀರು ಸೇವಿಸುವುದು ಉತ್ತಮವಲ್ಲ.ಸಂಜೆ ಬಳಿಕ ಅಥವಾ ರಾತ್ರಿ ಎಳನೀರು ಸೇವಿಸುವುದರಿಂದ ಶೀತದ ಪ್ರಮಾಣ ಜಾಸ್ತಿಯಾಗಿ, ಆರೋಗಯದಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹಸಿದ ಹೊಟ್ಟೆಯಲ್ಲಿ ಮಧ್ಯಾಹ್ನ 3 ಗಂಟೆಯೊಳಗೇ ಎಳನೀರು ಕುಡಿಯಿರಿ.

ಮೊದಲನೇಯದಾಗಿ ನಿಮ್ಮ ಸೌಂದರ್ಯ ಇಮ್ಮಡಿಯಾಗಬೇಕು. ನಿಮ್ಮ ತ್ವಚೆ ಹೊಳೆಯಬೇಕು. ನೀವು ಸುಂದರವಾಗಿ ಕಾಣಬೇಕು. ನಿಮ್ಮ ದೇಹದ ತೂಕ ಇಳಿದು, ಫಿಟ್ ಆ್ಯಂಡ್ ಫೈನ್ ಆಗಿ ಕಾಣಬೇಕು ಅಂತಂದ್ರೆ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಎಳನೀರು ಕುಡಿಯಬೇಕು. ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದರಿಂದ, ಮೂತ್ರದ ಮೂಲಕ ಕಲ್ಮಶ ತೊಲಗಿ, ನಿಮ್ಮ ಚರ್ಮ ಕಾಂತಿಯುತವಾಗುವುದರ ಜೊತೆಗೆ, ಕ್ರಮೇಣ ತೂಕ ಕೂಡ ಇಳಿಯುತ್ತದೆ.
ಅಲ್ಲದೇ, ಊಟ ಮಾಡುವುದಕ್ಕೂ ಅರ್ಧ ಗಂಟೆ ಮುನ್ನ ಎಳನೀರು ಕುಡಿಯುವುದರಿಂದ, ಹೊಟ್ಟೆ ತುಂಬಿರುತ್ತದೆ. ಇದರಿಂದ ಊಟದ ವೇಳೆ ಮಿತವಾಗಿ ಆಹಾರ ಸೇವಿಸುವುದರಿಂದ ನಿಮ್ಮ ದೇಹದ ತೂಕವನ್ನ ಆರಾಮವಾಗಿ ಕಳೆದುಕೊಳ್ಳಬಹುದು.

ಎರಡನೇಯದಾಗಿ, ಬೆಳಿಗ್ಗೆ ಟೀ ಕಾಫಿ ಸೇವನೆಗಿಂತ, ಎಳನೀರನ್ನ ಸೇವಿಸುವುದರಿಂದ, ನಿಮ್ಮ ದಿನ ಉಲ್ಲಸಿತವಾಗಿರುತ್ತದೆ. ಇಡೀ ದಿನ ಶಕ್ತಿಯುತರಾಗಿ ಕೆಲಸ ಮಾಡುವ ಉಲ್ಲಾಸ ಬರುತ್ತದೆ. ಮೂರನೇಯದಾಗಿ ವರ್ಕೌಟ್ ಮುಗಿದ ಬಳಿಕ ಒಂದು ಎಳನೀರು ಕುಡಿಯಬೇಕು. ಇದರಿಂದ ಶಕ್ತಿ ಬರುತ್ತದೆ. ಇದು ನಿಮ್ಮ ದೇಹದ ತೂಕ ಇಳಿಸಲು, ನಿಮ್ಮನ್ನ ಫಿಟ್ ಆಗಿರಲು ಸಹಕರಿಸುತ್ತದೆ.

ನಾಲ್ಕನೇಯದಾಗಿ, ಗರ್ಭಿಣಿಯರು ಪ್ರತಿದಿನ ಒಂದು ಎಳನೀರನ್ನಾದ್ರೂ ಕುಡಿಯಬೇಕು. ಇದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಅತ್ಯುತ್ತಮ ಎನ್ನಲಾಗಿದೆ. ಇದರಿಂದ ಡಿಹೈಡ್ರೇಶನ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಅಲ್ಲದೇ ಮಗುವಿನ ತ್ವಚೆ ಮತ್ತು ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಆದ್ರೆ ಪ್ರತಿದಿನ ಒಂದು ಎಳನೀರನ್ನ ಮಾತ್ರ ಗರ್ಭಿಣಿಯರು ಸೇವಿಸಬಹುದು. ಐದನೇಯದಾಗಿ ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಉರಿಮೂತ್ರವಾಗುವುದು, ಬಾಯಿಯಲ್ಲಿ ಗುಳ್ಳೆಗಳಾಗುವುದು, ಉಷ್ಣತೆಯಿಂದ ನೆಗಡಿ ಕೆಮ್ಮು ಶುರುವಾಗುವುದು ಇತ್ಯಾದಿ ಸಮಸ್ಯೆಗಳು ಎದುರಾದಾಗ, ಒಂದು ಎಳನೀರು ಕುಡಿದು ನೋಡಿ.

ಇಷ್ಟೇ ಅಲ್ಲದೇ, ನೀವು ಒಂದು ತಿಂಗಳು ಟೀ ಕಾಫಿ ಸೇವನೆ ಬಿಟ್ಟು, ನಿಯಮಿತವಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದರೆ, ಆರೋಗ್ಯ ಸುಧಾರಿಸುತ್ತದೆ. ಆದರೆ ದಿನಕ್ಕೆ ಒಂದಕ್ಕಿಂತ ಹೆಚ್ಚು ಎಳನೀರು ಸೇವನೆ ದೇಹಕ್ಕೆ ಉತ್ತಮವಲ್ಲ. ಇನ್ನು ನಿಮಗೆ ಎಳನೀರು ಸೇವಿಸಿದರೆ ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ಸಲಹೆ ಪಡೆದು ನಂತರ ಎಳನೀರು ಸೇವಿಸುವುದು ಉತ್ತಮ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

- Advertisement -

Latest Posts

Don't Miss