Sunday, September 8, 2024

Latest Posts

ಬೂದುಗುಂಬಳಕಾಯಿಯ ಸಿಪ್ಪೆಯಲ್ಲೂ ಇದೆ ಆರೋಗ್ಯಕರ ಲಾಭ..

- Advertisement -

ಆಯುರ್ವೇದದಲ್ಲಿ ಅತೀ ಹೆಚ್ಚು ಮನ್ನಣೆ ಪಡೆದ ತರಕಾರಿ ಅಂದ್ರೆ ಬೂದುಗುಂಬಳಕಾಯಿ. ಯಾಕಂದ್ರೆ ಬೂದುಗುಂಬಳಕಾಯಿ ಸೇವನೆಯಿಂದ ಸಾವಿರಾರು ರೋಗಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇದೇ ರೀತಿ ಇದರ ಸಿಪ್ಪೆಯ ಸೇವನೆಯಿಂದಲೂ ಕೂಡ ಆರೋಗ್ಯ ಲಾಭ ಪಡೆಯಬಹುದು. ಹಾಗಾದ್ರೆ ಬೂದುಗುಂಬಳಕಾಯಿಯ ಸಿಪ್ಪೆಯಲ್ಲಿರುವ ಆರೋಗ್ಯಕರ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ..

ಕರಿಬೇವಿನ ಎಣ್ಣೆಯಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ ಲಾಭ..

ಬೂದುಗುಂಬಳಕಾಯಿಯ ಪಲ್ಯ, ಸಾರು, ಸಾಂಬಾರ್ ಮಾಡಿ ನಾವು ತಿಂದಿರುತ್ತೇವೆ. ಆದ್ರೆ ಹಾಗೆ ತಿನ್ನುವಾಗ ಕೆಲವರು ಬೂದುಗುಂಬಳಕಾಯಿಯ ಸಿಪ್ಪೆಯನ್ನ ಬಿಸಾಕುತ್ತಾರೆ. ಅದರ ಬದಲು ಬೂದುಗುಂಬಳಕಾಯಿಯ ಸಿಪ್ಪೆಯನ್ನು ಕೂಡ ಬಳಸಿ, ಕೆಲವು ಪದಾರ್ಥಗಳನ್ನು ಮಾಡಿ, ತಿನ್ನಬಹುದು. ಇದು ಆರೋಗ್ಯಕ್ಕೆ ತುಂಬಾ ಉತ್ತಮ.

ಬೂದುಗುಂಬಳಕಾಯಿ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ, ಅದರ ಪೌಡರ ತಯಾರಿಸಿಕೊಂಡು, ಬೆಳಿಗ್ಗೆ ಮತ್ತು ಸಂಜೆ ಹಾಲಿನೊಂದಿಗೆ ತೆಗೆದುಕೊಳ್ಳಬೇಕು. ಉಗುರು ಬೆಚ್ಚಗಿನ ನೀರಿನೊಂದಿಗೂ ಇದನ್ನು ಸೇವಿಸಬಹುದು. ಒಂದು ಚಮಚ ಪುಡಿ ಬಳಸಿದರೂ ಸಾಕು. ಇದರಿಂದ ಮಲಬದ್ಧತೆ ಸಮಸ್ಯೆಗೆ ಮುಕ್ತಿ ಸಿಗುತ್ತದೆ.

ಸ್ನಾನ ಮಾಡಿ ಊಟ ಮಾಡಬೇಕು ಅಂತಾ ಹೇಳೋದ್ಯಾಕೆ..? ಇದರ ಹಿಂದಿನ ವೈಜ್ಞಾನಿಕ ಸತ್ಯವೇನು..?

ನಿಮಗೆ ಪಾದ ಉರಿಯುವ ಸಮಸ್ಯೆ ಇದ್ದಲ್ಲಿ, ಅದಕ್ಕೂ ಬೂದುಗುಂಬಳ ಸಿಪ್ಪೆ ಬಳಸಬಹುದು. ಬೂದುಗುಂಬಳಕಾಯಿ ಸಿಪ್ಪೆಯನ್ನು ಮಿಕ್ಸರ್‌ಗೆ ಹಾಕಿ ರುಬ್ಬಿ ಅದರಿಂದ ಬರುವ ಪೇಸ್ಟನ್ನು ಉರಿಯುವ ಪಾದಕ್ಕೆ ಹಚ್ಚಿದರೆ, ಅದರಿಂದಲೂ ಉಪಶಮನ ಪಡಿಯಬಹುದು.

ಇನ್ನು ನೀವು ಬೂದುಗುಂಬಳಕಾಯಿಯ ಪಲ್ಯ ಅಥವಾ ಸಾಂಬಾರ್ ಮಾಡುವಾಗ, ಅದರ ಸಿಪ್ಪೆ ತೆಗಿಯದೇ ಬಳಸಿದರೆ ಉತ್ತಮ. ಯಾಕಂದ್ರೆ ಇದರ ಸಿಪ್ಪೆಯಲ್ಲೇ ಆರೋಗ್ಯಕರ ಅಂಶವಿರುವ ಕಾರಣ, ಇದನ್ನು ನೀವು ಸಿಪ್ಪೆ ಸಮೇತ ತಿನ್ನಬಹುದು.

- Advertisement -

Latest Posts

Don't Miss