ದಾಳಿಂಬೆ, ಮೋಸಂಬಿ, ಕಿತ್ತಳೆ, ಬಾಳೆಹಣ್ಣು, ಸೇರಿ ಇತರೇ ಹಣ್ಣುಗಳನ್ನು ಸಿಪ್ಪೆ ತೆಗೆದೇ ತಿನ್ನಬೇಕು. ಅದಕ್ಕೆ ಬೇರೆ ದಾರಿ ಇಲ್ಲ. ಆದ್ರೆ ಸೇಬುಹಣ್ಣು, ಚಿಕ್ಕು ಹಣ್ಣು ಮತ್ತು ಸೀಬೆಹಣ್ಣನ್ನು ಸಿಪ್ಪೆ ಸಮೇತವಾಗಿಯೇ ತಿನ್ನಬೇಕು. ಯಾಕಂದ್ರೆ ಸಿಪ್ಪೆಯ ಹಿಂದಿನ ಭಾಗದಲ್ಲೇ ಸಕಲ ಪೋಷಕಾಂಶಗಳು ತುಂಬಿರುವುದು. ಹಾಗಾಗಿಯೇ ಕೆಲ ಹಣ್ಣುಗಳನ್ನ ಸಿಪ್ಪೆ ಸಮೇತ ತಿನ್ನಬೇಕು. ಇನ್ನು ಸೀಬೆಹಣ್ಣನ್ನ ಯಾಕೆ ಸಿಪ್ಪೆ ಸಮೇತ ತಿನ್ನಬೇಕು ಅಂತಾ ತಿಳಿಯೋಣ ಬನ್ನಿ..
ರಾತ್ರಿ ಪಾದಕ್ಕೆ ತೆಂಗಿನೆಣ್ಣೆ ಮಸಾಜ್ ಮಾಡಿ.. ಆರೋಗ್ಯದಲ್ಲಾಗುವ ಬದಲಾವಣೆ ನೀವೇ ನೋಡಿ..
ಕೆಲವರು ಇದನ್ನ ಸೀಬೆಹಣ್ಣು ಅಂತಾರೆ, ಕೆಲವರು ಪೇರಲೆ ಹಣ್ಣು, ಇನ್ನು ಕೆಲವರು ಪೇರು ಹಣ್ಣು, ಪೇರಂಗಾಯಿ, ಚೇಪೆ ಹಣ್ಣೆಂದು ಕರೆಯುತ್ತಾರೆ. ಈ ಹಣ್ಣು ಸೇಬುಹಣ್ಣಿಗೆ ಸಮನಾಗಿದೆ. ಸೇಬು ಹಣ್ಣನ್ನ ಖರೀದಿಸಲಾಗದವರು, ಪೇರಲೆ ಹಣ್ಣನ್ನ ಪರ್ಚೇಸ್ ಮಾಡಿ ತಿನ್ನಬೇಕು ಅಂತಾರೆ. ಆದ್ರೆ ಈಗ ಎಲ್ಲರಿಗೂ ಈ ಅಮೃತ ಫಲದ ಮಹತ್ವ ಗೊತ್ತಾಗಿದ್ದು, ಇದು ಕೂಡ ಹೆಚ್ಚಿಗೆ ರೇಟಿಗೆ ಮಾರಲ್ಪಡುತ್ತಿದೆ.
ಇನ್ನು ಸೀಬೆಹಣ್ಣು ತಿನ್ನುವಾಗ, ಸಿಪ್ಪೆ ತೆಗೆದು, ಖಾರ, ಉಪ್ಪು ಹಾಕಿ ತಿಂದರೆ, ಅದನ್ನು ತಿಂದು ಏನೂ ಪ್ರಯೋಜನವಾಗುವುದಿಲ್ಲ. ಅದು ಬರೀ ರುಚಿಗಷ್ಟೇ ತಿನ್ನುವುದು. ಆದ್ರೆ ಉಪ್ಪು ಖಾರ ಹಾಕದೇ, ಸಿಪ್ಪೆ ತೆಗಿಯದೇ, ಸೀಬೆಹಣ್ಣು ತಿಂದರೆ, ಅದು ಆರೋಗ್ಯಕ್ಕೆ ಉತ್ತಮ. ಬೇಕಾದ್ರೆ ಕೊಂಚ ಸೇಧವ ಲವಣ ಸೇರಿಸಬಹುದು.
ಕಿತ್ತಳೆ ಹಣ್ಣಷ್ಟೇ ಅಲ್ಲ, ಅದರ ಸಿಪ್ಪೆ ಕೂಡ ಆರೋಗ್ಯಕರ..
ಯಾಕೆ ಸೀಬೆಹಣ್ಣನ್ನ ಸಿಪ್ಪೆಯೊಂದಿಗೆ ತಿನ್ನಬೇಕು ಅಂದ್ರೆ, ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗದಂತೆ ಇದು ತಡೆಯುತ್ತದೆ. ನಿಮಗೆ ಈಗಾಗಲೇ ಸಕ್ಕರೆ ಖಾಯಿಲೆ ಇದ್ದಲ್ಲಿ, ನೀವು ಸೀಬೆಹಣ್ಣನ್ನು ಸಿಪ್ಪೆ ಸಮೇತ ತಿಂದಲ್ಲಿ, ನಿಮ್ಮ ಶುಗರ್ ಕಂಟ್ರೋಲಿನಲ್ಲಿರುತ್ತದೆ. ಅಲ್ಲದೇ, ಜೀರ್ಣಶಕ್ತಿ ಉತ್ತಮವಾಗಿರುತ್ತದೆ. ಗರ್ಭಿಣಿಯರು ಸೀಬೆಹಣ್ಣಿನ ಸೇವನೆ ಮಾಡುವುದು ತುಂಬಾ ಉತ್ತಮ. ಆದರೆ ಅದು ಲಿಮಿಟಿನಲ್ಲಿರಬೇಕು.