Sunday, December 22, 2024

Latest Posts

ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಆಗುವ ಆರೋಗ್ಯ ಲಾಭ ಕೇಳಿದ್ರೆ ನೀವೂ ಇದನ್ನ ತಿಂತೀರಾ..

- Advertisement -

ಹಲವರಿಗೆ ಹುಳಿ ವಸ್ತು ಅಂದ್ರೆ ತುಂಬಾ ಇಷ್ಟವಾಗತ್ತೆ. ನೆಲ್ಲಿಕಾಯಿ, ಮಾವಿನ ಕಾಯಿ ಹೀಗೆ. ಅದರೊಂದಿಗೆ ಉಪ್ಪು, ಖಾರವಿದ್ದರೆ ಇನ್ನೂ ರುಚಿ. ಆದ್ರೆ ಉಪ್ಪು, ಖಾರ ಹಾಕದೇ, ಬೆಟ್ಟದ ನೆಲ್ಲಿಕಾಯಿಯನ್ನ ಸೇವಿಸಿದ್ರೆ, ಆರೋಗ್ಯಕ್ಕೂ, ಸೌಂದರ್ಯಕ್ಕೂ ಉತ್ತಮ. ಹಾಗಾಗಿ ಇಂದು ನಾವು ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..

ಈ ಹಣ್ಣುಗಳನ್ನು ರಾತ್ರಿ ಹೊತ್ತು ಸೇವಿಸಲೇಬೇಡಿ.. ಇಲ್ಲದಿದ್ದಲ್ಲಿ ಅನಾರೋಗ್ಯ ಬರುವುದು ಖಂಡಿತ..

ಅಪಘಾತವಾಗಿ ಪೆಟ್ಟಾದವರು, ಗರ್ಭಿಣಿಯರು ನೆಲ್ಲಿಕಾಯಿಯನ್ನ ತಿನ್ನಬೇಕು. ಇದರಿಂದ ಮೂಳೆ ಗಟ್ಟಿಯಾಗುವುದಲ್ಲದೇ, ಶಕ್ತಿ ಬರುತ್ತದೆ. ಗರ್ಭಿಣಿಯರು ವಾರದಲ್ಲಿ ಮೂರು ದಿನವಾದ್ರೂ ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ, ನಾರ್ಮಲ್ ಡಿಲೆವರಿಯಾಗಲು ಸಹಾಯವಾಗುತ್ತದೆ. ಅಪಘಾತವಾದಾಗ, ಪೆಟ್ಟಾಗಿ ಕಾಲಿಗೆ ಅಥವಾ ಕೈ ಮೂಳೆ ಮುರಿದಿರುತ್ತದೆ. ಆ ವೇಳೆ ಬೇಗ ಮೂಳೆ ಗಟ್ಟಿಯಾಗಲು ಬೆಟ್ಟದ ನೆಲ್ಲಿಕಾಯಿ ತಿನ್ನಬೇಕು.

ಇನ್ನು ಬೆಟ್ಟದ ನೆಲ್ಲಿಕಾಯಿ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಜ್ವರ ಬಂದಾಗ, ಕೆಲವರು ಬೆಟ್ಟದ ನೆಲ್ಲಿಕಾಯಿ ಕಶಾಯ ಮಾಡಿ ಸೇವಿಸುತ್ತಾರೆ. ಸಕ್ಕರೆ ಖಾಯಿಲೆ ಇದ್ದವರು ಬೆಟ್ಟದ ನೆಲ್ಲಿಕಾಯಿ ತಿಂದರೆ, ರಕ್ತದಲ್ಲಿ ಸಕ್ಕರೆಯ ಪ್ರಮಾಣ ಏರುವುದನ್ನು ತಡೆಯಬಹುದು. ನೀವು ವಾರದಲ್ಲಿ ಮೂರು ಬಾರಿ ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಕರುಳಿನ ಸಮಸ್ಯೆ ಬರದಂತೆ ತಡೆಯಬಹುದು.

ಸೀಬೆಹಣ್ಣನ್ನು ತಿನ್ನುವುದಿದ್ದರೆ ಸಿಪ್ಪಸಮೇತ ತಿನ್ನಿ.. ಯಾಕೆ ಗೊತ್ತಾ..?

ನಿಮಗೆ ಸಿಕ್ಕಾಪಟ್ಟೆ ಕೂದಲು ಉದುರುತ್ತಿದ್ದರೆ, ಬೆಟ್ಟದ ನೆಲ್ಲಿಕಾಯಿ ಸೇವಿಸಿ. ಅಥವಾ ಜ್ಯೂಸ್ ಸೇವಿಸಬಹುದು. ಇದರಿಂದ ಕೂದಲ ಬುಡ ಗಟ್ಟಿಯಾಗಿ, ಕೂದಲು ಉದುರುವುದು ನಿಲ್ಲುತ್ತದೆ. ಅಲ್ಲದೇ, ನಿಮ್ಮ ತ್ವಚೆ ಕೂಡ ಉತ್ತಮವಾಗಿರುತ್ತದೆ.

- Advertisement -

Latest Posts

Don't Miss