ನುಗ್ಗೆಕಾಯಿ ಪುರುಷತ್ವ ಹೆಚ್ಚಿಸಲು ಸಹಾಯ ಮಾಡತ್ತೆ ಅಂತಾ ಎಲ್ಲರಿಗೂ ಗೊತ್ತು. ಅಲ್ಲದೇ, ನುಗ್ಗೆಕಾಯಿ ಸೇವನೆಯಿಂದ ಇನ್ನೂ ಹಲವು ಆರೋಗ್ಯ ಲಾಭಗಳಾಗತ್ತೆ. ಅದರ ಜೊತೆಗೆ ನುಗ್ಗೆಸೊಪ್ಪಿನ ಸೇವನೆಯಿಂದಲೂ, ಆರೋಗ್ಯಕ್ಕೆ ಹಲವು ಉಪಯೋಗಗಳಿದೆ. ಹಾಗಾದ್ರೆ ನುಗ್ಗೆಸೊಪ್ಪಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ನೀವು ನುಗ್ಗೆಸೊಪ್ಪಿನ ಪಲ್ಯ, ಸಾರು, ತಂಬಳಿ ಮಾಡಿ ಸೇವಿಸಬಹುದು. ನುಗ್ಗೆಸೊಪ್ಪಿನ ಆಹಾರವನ್ನು ನೀವು 2 ಸ್ಪೂನ್ ಸೇವಿಸಿದರೂ, ವಿಟಾಮಿನ್ ಸಿ, ಕ್ಯಾಲ್ಸಿಯಂ, ವಿಟಾಮಿನ್ ಎ, ಪ್ರೋಟಿನ್, ಪೊಟ್ಯಾಷಿಯಂ ಸಿಗುತ್ತದೆ. ಇನ್ನು ಥೈರಾಯ್ಡ್ ಸಮಸ್ಯೆ ಇದ್ದಲ್ಲಿ, ನೀವು ನುಗ್ಗೆಸೊಪ್ಪನ್ನ ತಿಂದಲ್ಲಿ, ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಥೈರಾಯ್ಡ್ ಸಮಸ್ಯೆಗೆ ಇದು ಪಥ್ಯವಿದ್ದಂತೆ. ಇದರ ಸೇವನೆಯಿಂದ, ಥೈರಾಯ್ಡ್ ಸಮಸ್ಯೆ ಕಂಟ್ರೋಲಿನಲ್ಲಿರುತ್ತದೆ.
ಸಂಧಿವಾತ, ಕೈ ಕಾಲು ನೋವು, ಮಂಡಿ ನೋವು ಇದ್ದಲ್ಲಿ, ನೀವು ನುಗ್ಗೆಸೊಪ್ಪಿನ ಸೇವನೆ ಮಾಡಬೇಕು. ಆಯುರ್ವೇದದ ಪ್ರಕಾರ 80 ತರಹದ ಮೂಳೆ ನೋವಿನ ಸಮಸ್ಯೆಯನ್ನ ಪರಿಹರಿಸುವ ಗುಣ ನುಗ್ಗೆಸೊಪ್ಪಿಗೆ ಇದೆ ಎಂದು ಹೇಳಲಾಗಿದೆ. ಅಲ್ಲದೇ, 72 ವಾತರೋಗಗಳಿಂದ ಮುಕ್ತಿ ಕೊಡಿಸುತ್ತದೆ ಎಂದು ಹೇಳಲಾಗಿದೆ. ನೀವು ವಾರಕ್ಕೆ ಮೂರು ಬಾರಿ ನುಗ್ಗೆಸೊಪ್ಪಿನ ಪದಾರ್ಥ ತಿಂದ್ರೆ, ನಿಮ್ಮ ತೂಕ ಕಂಟ್ರೋಲಿನಲ್ಲಿರುತ್ತದೆ. ವೇಟ್ ಲಾಸ್ ಮಾಡಬೇಕು ಎಂದು ಬಯಸುವವರು ಇದರ ಸೇವನೆ ಮಾಡಿ.
ಬಿಪಿ, ಶುಗರ್ ಇದ್ದವರು ಕೂಡ ವಾರಕ್ಕೆ ಮೂರು ಬಾರಿ, ನುಗ್ಗೆಸೊಪ್ಪಿನ ಪದಾರ್ಥ ಮಾಡಿ ಸೇವಿಸಬೇಕು. ಅಸ್ತಮಾ, ಶ್ವಾಸಕೋಶದ ಸಮಸ್ಯೆ ಇದ್ದಲ್ಲಿ, ನೀವು ನುಗ್ಗೆಸೊಪ್ಪಿನ ಪದಾರ್ಥ ತಿನ್ನಬೇಕು. ಇನ್ನು ಧೂಮಪಾನ ಮಾಡುವವರಿಗೆ ನೀವು ನುಗ್ಗೆಸೊಪ್ಪಿನ ಪದಾರ್ಥ ತಿನ್ನಿಸಿದ್ರೆ, ಅವರ ಶ್ವಾಸಕೋಶ ಸರಿಯಾಗಿ ಇರತ್ತೆ. ಇದು ಲಂಗ್ಸ್ ಕ್ಲೀಯರ್ ಮಾಡೋಕ್ಕೆ ಸಹಾಯ ಮಾಡತ್ತೆ.
ಒಂದೇ ವಾರದಲ್ಲಿ ನಿಮ್ಮ ಕೂದಲು ಉದುರುವ ಸಮಸ್ಯೆಯನ್ನ ಹೀಗೆ ಕಡಿಮೆ ಮಾಡಿ..
ನಪುಂಸಕತೆ, ಡಯಾಬಿಟೀಸ್, ಕೂದಲು, ಸೌಂದರ್ಯ ಸಮಸ್ಯೆ ಎಲ್ಲದಕ್ಕೂ ಈ ವಸ್ತುವನ್ನು ಬಳಸಿ.. ಭಾಗ 2