ರಾಗಿ ತಿನ್ನುವವರಿಗೆ ರೋಗವಿಲ್ಲ ಅನ್ನೋ ಮಾತನ್ನ ನಾವೆಲ್ಲ ಕೇಳೇ ಕೇಳಿರುತ್ತೇವೆ. ಅದರಲ್ಲೂ ಶುಗರ್ ಇದ್ದವರಿಗೆ ರಾಗಿ ತುಂಬಾನೇ ಒಳ್ಳೆ ಆಹಾರ. ಹಾಗಾದ್ರೆ ರಾಗಿ ತಿಂದರೆ, ಏನು ಪ್ರಯೋಜನ ಅಂತಾ ತಿಳಿಯೋಣ ಬನ್ನಿ..
ಮನೆಯಲ್ಲೇ ಸಿಂಪಲ್ ಮತ್ತು ರುಚಿಯಾಗಿ ತಯಾರಿಸಬಹುದು ಮೊಸರೊಡೆ (ದಹಿ ವಡಾ)..
ರಾಗಿ ತಿನ್ನುವುದರಿಂದ ಶಕ್ತಿ ಬರುತ್ತದೆ. ಹಲವು ಆಟಗಾಗರರು ಪ್ರತಿದಿನ ರಾಗಿಯ ಆಹಾರವನ್ನೇ ಸೇವಿಸುತ್ತಾರೆ. ಹಾಗಾಗಿ ಅವರಿಗೆ ಆಟವಾಡಲು ಶಕ್ತಿ ಸಿಗುತ್ತದೆ. ಹಳ್ಳಿ ಕಡೆ ಜನ ರಾಗಿಯ ಆಹಾರವನ್ನೇ ಹೆಚ್ಚು ಸೇವಿಸೋದು. ಇದೇ ಅವರ ಚೈತನ್ಯದಾಯಕ ಜೀವನದ ಗುಟ್ಟು. ಫಿಟ್‌ನೆಸ್ ಮೆಂಟೇನ್ ಮಾಡುವವರು. ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರೆಲ್ಲ ರಾಗಿಯಿಂದ ಮಾಡಿದ ಆಹಾರವನ್ನ ಸೇವನೆ ಮಾಡ್ತಾರೆ.
ನೆನೆಸಿಟ್ಟ ವಾಲ್ನಟ್ ತಿನ್ನುವುದರಿಂದ ನಿಮಗಾಗಲಿದೆ ಭರಪೂರ ಲಾಭ..
ಇನ್ನು ಮಧುಮೇಹ ಇರುವವರು ರಾಗಿ ಸೇವನೆ ಮಾಡಬೇಕು. ಇದರಲ್ಲಿ ನಾರಿನಂಶ ಇರುವುದರಿಂದ ಇದು ರಕ್ತದಲ್ಲಿರುವ ಸಕ್ಕರೆ ಪ್ರಮಾಣ ಹೆಚ್ಚಾಗಲು ಬಿಡೋದಿಲ್ಲ. ಇದರಿಂದ ಸಕ್ಕರೆ ಖಾಯಿಲೆಯನ್ನ ಲಿಮಿಟ್‌ನಲ್ಲಿರಿಸಬಹುದು. ರಾಗಿ ಅಂಬಲಿ, ರಾಗಿ ಮುದ್ದೆ, ರಾಗಿ ದೋಸೆ ಮಾಡಿ ಸೇವಿಸಬಹುದು. ಹಲವು ಮಧುಮೇಹಿಗಳು ರಾತ್ರಿ ಹೊತ್ತು, ರಾಗಿಯಿಂದ ಮಾಡಿದ ಆಹಾರವನ್ನೇ ಸೇವಿಸುತ್ತಾರೆ.

