ರಾಜ್ಮಾ ಅಂದ್ರೆ ಕಿಡ್ನಿ ಬೀನ್ಸ್. ಉತ್ತರ ಭಾರತೀಯರು ಈ ಕಾಳನ್ನ ಹೆಚ್ಚಾಗಿ ಬಳಕೆ ಮಾಡುತ್ತಾರೆ. ರಾಜ್ಮಾ ಚಾವಲ್ ಅನ್ನೋದು ಅವರ ಫೇವರಿಟ್ ಊಟ. ಅನ್ನದೊಂದಿಗೆ ರಾಜ್ಮಾ ಕಾಳು ಹಾಕಿ, ಮಸಾಲೆಭರಿತವಾದ ಸಾರು ತಯಾರಿಸಲಾಗುತ್ತದೆ. ಇದನ್ನೇ ರಾಜ್ಮಾ ಚಾವಲ್ ಅಂತಾ ಕರಿಯುತ್ತಾರೆ. ಇಂದು ನಾವು ರಾಜ್ಮಾ ತಿನ್ನುವುದರಿಂದ ನಮ್ಮ ಆರೋಗ್ಯಕ್ಕಾಗುವ ಲಾಭವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮನೆಯಲ್ಲೇ ತಯಾರಿಸಿ ಹೊಟೇಲ್ ಸ್ಟೈಲ್ ಪನೀರ್ ಪಲಾವ್..
ಪ್ರೋಟಿನ್‌ನಿಂದ ಕೂಡಿರುವ ರಾಜ್ಮಾ ಆರೋಗ್ಯಕ್ಕೆ ತುಂಬಾ ಉತ್ತಮ. ಇದರ ಸಾರು, ಸಾಂಬಾರ್, ಪಲ್ಯ ಮಾಡಿ ತಿನ್ನುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆದ್ರೆ ಇದಕ್ಕೆ ಹೆಚ್ಚು ಮಸಾಲೆ, ಉಪ್ಪು, ಖಾರವೆಲ್ಲ ಬಳಸಿದರೆ, ಆರೋಗ್ಯಕ್ಕೆ ಲಾಭವಾಗುವ ಬದಲು, ನಷ್ಟವಾಗುತ್ತದೆ. ಹಾಗಾಗಿ ರಾಜ್ಮಾದ ಪದಾರ್ಥ ಸೇವಿಸುವಾಗ, ಅದಕ್ಕೆ ಹೆಚ್ಚು ಉಪ್ಪು. ಮಸಾಲೆ ಬಳಸಬೇಡಿ.
ಜಿಮ್‌ಗೆ ಹೋಗಿ, ಬಾಡಿ ಬೆಳೆಸುವವರಿಗೆ ಪ್ರೋಟೀನ್ ಅವಶ್ಯಕತೆ ತುಂಬಾ ಇರುತ್ತದೆ. ಹಾಗಾಗಿ ಇಂಥವರು ವಾರಕ್ಕೆ ಎರಡು ಬಾರಿಯಾದರೂ ರಾಜ್ಮಾ ಬಳಸಿದರೆ ಉತ್ತಮ. ಇದು ಬರೀ ಬಾಡಿ ಬೆಳೆಸುವುದಷ್ಟೇ ಅಲ್ಲ. ಬದಲಾಗಿ ಇದನ್ನು ತಿಂದರೆ, ನಿಮ್ಮ ದೇಹದಲ್ಲಿ ಶಕ್ತಿಯೂ ಹೆಚ್ಚುತ್ತದೆ. ಆದ್ರೆ ರಾಜ್ಮಾವನ್ನು ರಾತ್ರಿ ಹೊತ್ತು ತಿನ್ನಬಾರದಂತೆ. ಬರೀ ಬೆಳಿಗ್ಗೆ ಮತ್ತು ಮಧ್ಯಾಹ್ನ, ಹೆಚ್ಚಂದ್ರೆ, ಸಂಜೆಯೊಳಗೆ ನೀವು ರಾಜ್ಮಾ ಪದಾರ್ಥವನ್ನು ತಿನ್ನಬಹುದು.
ಟೊಮೆಟೋ ಬಳಸದೆನೇ ಟೇಸ್ಟಿ ರೆಡ್ ಕೆಚಪ್ ಮಾಡಬಹುದು ಗೊತ್ತಾ..?
ಅಲ್ಲದೇ ಹುಳಿ ವಸ್ತುವಿನೊಂದಿಗೆ ರಾಜ್ಮಾವನ್ನು ಸೇವಿಸಬಾರದು ಎನ್ನಲಾಗತ್ತೆ. ರಾಯ್ತಾ, ಮೊಸರು, ಹುಳಿ ಚಟ್ನಿಯೊಂದಿಗೆ ರಾಜ್ಮಾವನ್ನು ಸೇವಿಸಬಾರದು. ಯಾಕಂದ್ರೆ ಇದು ಸರಿಯಾಗಿ ಜೀರ್ಣವಾಗುವುದಿಲ್ಲ. ಹೀಗಾಗಿ ನೀವು ಈ ಆರೋಗ್ಯಕರ ತಿಂಡಿಯನ್ನು ಒಟ್ಟಿಗೆ ತಿಂದರೆ, ಅದು ಅಜೀರ್ಣಕ್ಕೆ ಕಾರಣವಾಗಿ, ಅನಾರೋಗ್ಯ ಉಂಟಾಗಬಹುದು. ಅಲ್ಲದೇ ಕೆಲವರಿಗೆ ಚರ್ಮದ ಮೇಲೆ ಇದು ದುಷ್ಪರಿಣಾಮ ಉಂಟು ಮಾಡಬಹುದು. ಹಾಗಾಗಿ ರಾಜ್ಮಾದೊಂದಿಗೆ ಮೊಸರು, ಹುಳಿ ತಿಂಡಿ ತಿನ್ನಬೇಡಿ.