ಈಗ ಬೇಸಿಗೆಗಾಲ ಶುರುವಾಗಿದೆ. ಬೇಸಿಗೆಯಲ್ಲಿ ಸಿಗುವ ಹಣ್ಣು ಅಂದ್ರೆ ಮಾವಿನ ಹಣ್ಣು. ಜೊತೆಗೆ ಮಾವಿನ ಕಾಯಿಯೂ ಭರಪೂರವಾಗಿ ಸಿಗುತ್ತದೆ. ಹಾಗೆ ಸಿಗುವ ಮಾವಿನ ಕಾಯಿಯಿಂದ ಉಪ್ಪಿನಕಾಯಿ ಮಾಡಿ ಸೇವಿಸುವವರೇ ಹೆಚ್ಚು. ಆದರೆ ಹೆಚ್ಚು ಮಸಾಲೆ ಹಾಕದೇ, ಮಾವಿನ ಕಾಯಿಯನ್ನು ಲಿಮಿಟಿನಲ್ಲಿ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಉತ್ತಮ ಲಾಭವಿದೆ. ಹಾಗಾದ್ರೆ ಮಾವಿನ ಕಾಯಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಬೇಸಿಗೆಯಲ್ಲಿ ಮಾವಿನ ಕಾಯಿಯ ಚಟ್ನಿ, ತಂಬುಳಿ ಮಾಡಿ ತಿನ್ನುವುದರಿಂದ ಆರೋಗ್ಯಕ್ಕೆ ಉತ್ತಮ ಲಾಭವಿದೆ. ಮಾವಿನ ತಂಬುಳಿಯಲ್ಲಿ ಮಾವಿನಕಾಯಿ, ತೆಂಗಿನಕಾಯಿ, ಮೊಸರು ಅಥವಾ ಮಜ್ಜಿಗೆ ಬಳಸುವುದರಿಂದ ನಮ್ಮ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಮಲಬದ್ಧತೆ, ಗ್ಯಾಸ್‌ಸ್ಟಿಕ್ ಸಮಸ್ಯೆಯಿಂದಲೂ ಮುಕ್ತಿ ಸಿಗುತ್ತದೆ. ಬೇಸಿಗೆಯಲ್ಲಿ ವಾರದಲ್ಲಿ ಎರಡರಿಂದ ಮೂರು ಬಾರಿ ನೀವು ಮಾವಿನಕಾಯಿ ತಂಬುಳಿ ಮಾಡಿ, ಸೇವಿಸಬಹುದು.
ಮಾವಿನಕಾಯಿಯಲ್ಲಿ ವಿಟಾಮಿನ್ ಎ,ಸಿ,ಇ ಇದ್ದು ಇದು ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಲು ಸಹ ಮಾವಿನಕಾಯಿ, ಸಹಾಯಕವಾಗಿದೆ. ಇದರಿಂದ ನಮ್ಮ ದೇಹ ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಾಯಕವಾಗಿದೆ. ಹೃದಯ ಸಮಸ್ಯೆ ಇದ್ದರೆ, ಅದನ್ನ ಕೂಡ ಕಂಟ್ರೋಲ್ ಮಾಡುವ ಶಕ್ತಿ ಮಾವಿನಕಾಯಿಯಲ್ಲಿದೆ. ಅಥವಾ ಹೃದಯ ಸಮಸ್ಯೆ ಬರದಂತೆ ತಡೆಯುವ ಶಕ್ತಿ ಮಾವಿನಕಾಯಿಯಲ್ಲಿದೆ. ಇದರಲ್ಲಿರುವ ಮ್ಯಾಗ್ನಿಶಿಯಂ, ಪೊಟ್ಯಾಶಿಯಂ ಅಂಶ ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯಕವಾಗಿದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಸೇವಿಸುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

