ಒಂದೊಂದು ಹಣ್ಣುಗಳಲ್ಲಿಯೂ ಒಂದೊಂದು ಆರೋಗ್ಯಕಾರಿ ಗುಣಗಳಿದೆ. ಸೇಬುಹಣ್ಮು ತಿಂದ್ರೆ ಆರೋಗ್ಯವಾಗಿರ್ತೀವಿ. ಬಾಳೆಹಣ್ಣು ತಿಂದ್ರೆ ಹೊಟ್ಟೆ ನೋವು ಶಮನವಾಗತ್ತೆ. ಕಿತ್ತಳೆ ಹಣ್ಣಿನಿಂದ ಸೌಂದರ್ಯ ಹೆಚ್ಚತ್ತೆ. ಹೀಗೆ ಒಂದೊಂದು ಹಣ್ಣಿನಲ್ಲೂ ಉತ್ತಮ ಗುಣಗಳಿದೆ. ಅದೇ ರೀತಿ ಸೀಬೆ ಹಣ್ಣಿನಲ್ಲೂ ಕೆಲವು ಆರೋಗ್ಯಕರ ಗುಣಗಳಿದೆ. ಹಾಗಾದ್ರೆ ಆ ಗುಣಗಳಾದ್ರೂ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ನೀವು ವಾರಕ್ಕೆ ಮೂರರಿಂದ ನಾಲ್ಕು ಬಾರಿ ಪೇರಲೆ ಹಣ್ಣನ್ನ ತಿಂದರೂ ಸಾಕು. ಇದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ. ನಿಮಗೆ ಸರಿಯಾಗಿ ಮಲ ವಿಸರ್ಜನೆಯಾಗುತ್ತಿಲ್ಲವೆಂದಲ್ಲಿ, ನೀವು ಒಂದು ಪೇರಲೆ ಹಣ್ಣಿನ ಸೇವನೆ ಮಾಡಿದ್ರೆ ಸಾಕು. ನಿಮ್ಮ ಮಲಬದ್ಧತೆ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಈ ಸಮಸ್ಯೆಗೆ ಪರ್ಮನೆಂಟ್ ಪರಿಹಾರ ಬೇಕಂದ್ರೆ, ನೀವು ವಾರಕ್ಕೆ ಮೂರು ಬಾರಿ, ಅಂದ್ರೆ ಒಂದು ದಿನ ಬಿಟ್ಟು ಒಂದು ದಿನ ಪೇರಲೆ ಹಣ್ಣು ತಿನ್ನಿ..
ಮೊಸರಿನೊಂದಿಗೆ ಈ 4 ಆಹಾರಗಳನ್ನು ಅಪ್ಪಿತಪ್ಪಿಯು ಸೇವಿಸಬೇಡಿ…!
ಕೆಲವರಿಗೆ ಸೇಬು ಹಣ್ಣನ್ನು ಖರೀದಿಸಲು ಕಷ್ಟವಾಗುತ್ತದೆ. ಯಾಕಂದ್ರೆ ಅದರ ರೇಟ್ ಹೆಚ್ಚೆಂದು. ಅಂಥವರು ಪೇರಲೆ ಹಣ್ಣಿನ ಸೇವನೆ ಮಾಡಬಹುದು. ಗರ್ಭಿಣಿ ಮಹಿಳೆಯರು ಸೇಬು ಹಣ್ಣನ್ನು ಸೇವಿಸಲಾಗದಿದ್ದಲ್ಲಿ, ಒಂದು ಪೇರಲೆ ಹಣ್ಣನ್ನು ತಿನ್ನಿ. ಇದು ಸೇಬಿಗಿಂತ ಉತ್ತಮ ಆರೋಗ್ಯ ಪರಿಣಾಮ ಬೀರುತ್ತದೆ. ಈ ಹಣ್ಣಿನ ಸೇವನೆಯಿಂದ ತಾಯಿ ಮಗು ಇಬ್ಬರ ಆರೋಗ್ಯವೂ ಉತ್ತಮವಾಗಿರುತ್ತದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚು ಮಾಡುವಲ್ಲಿ ಸಹಕಾರಿಯಾಗಿದೆ.
ಪೇರಲೆ ಕಾಯಿ ಸೇವನೆಯಿಂದ ನಿಮ್ಮ ಹಲ್ಲು ಗಟ್ಟಿಮುಟ್ಟಾಗುತ್ತದೆ. ವಸಡು ಗಟ್ಟಿಯಾಗುತ್ತದೆ. ಅಲ್ಲದೇ, ಸೌಂದರ್ಯ ಕೂದ ಹೆಚ್ಚುತ್ತದೆ. ನಿಮ್ಮ ಕೂದಲು ಆರೋಗ್ಯಕರವಾಗಿರುತ್ತದೆ. ಪೇರಲೆಯಲ್ಲಿ ವಿಟಾಮಿನ್ ಸಿ ಇದ್ದು, ಇದು ಆರೋಗ್ಯ ಮತ್ತು ಸೌಂದರ್ಯ ಎರಡನ್ನೂ ವೃದ್ಧಿಸುವಲ್ಲಿ ಸಹಕಾರಿಯಾಗಿದೆ.
ಲವಂಗ ಸೇವನೆಯಿಂದ ಆಗುವ ಲಾಭದ ಬಗ್ಗೆ ಕೇಳಿದರೆ ಆಶ್ಚರ್ಯ ಪಡ್ತೀರಾ..
ಮುಖ್ಯವಾದ ವಿಷಯ ಅಂದ್ರೆ ಪೇರಲೆ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಆದ್ರೆ ಅದಕ್ಕೆ ನೀವು ಉಪ್ಪು ಖಾರ ಸರಿಯಾಗಿ ಹಾಕಿಕೊಂಡು ಟೇಸ್ಟಿ ಮಾಡಿಕೊಂಡು ತಿಂದ್ರೆ, ಅಥವಾ ಅದರ ಜ್ಯೂಸ್ ಮಾಡುವಾಗ ಸಕ್ಕರೆ ಹಾಕಿದರೆ ಏನೂ ಉಪಯೋಗವಿಲ್ಲ. ಹಾಗಾಗಿ ಪೇರಲೆ ಹಣ್ಣು ತಿನ್ನುವಾಗ ಕೊಂಚ ಸೇಂಧವ ಲವಣವನ್ನ ಸೇರಿಸಿ ತಿನ್ನಿ. ಯಾಕಂದ್ರೆ ಇದು ರುಚಿಕರವೂ ಹೌದು, ಆರೋಗ್ಯಕರವೂ ಹೌದು. ಸೇಂಧವ ಲವಣವನ್ನು ಸೇರಿಸಿ ಪೇರಲೆ ಹಣ್ಣನ್ನು ತಿನ್ನುವುದರಿಂದ, ನೆಗಡಿಯಾಗುವುದಿಲ್ಲ. ಸಾಧಾರಣ ಉಪ್ಪಿಗಿಂತ, ಸೇಂಧವ ಲವಣ ಆರೋಗ್ಯಕ್ಕೆ ಅತೀ ಉತ್ತಮ.