Sunday, September 8, 2024

Latest Posts

ಇಸಬಗೋಲನ್ನು ಹೇಗೆ ಸೇವಿಸಬೇಕು..? ಇದನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳೇನು..?

- Advertisement -

ತುಂಬಾ ಜನರಿಗೆ ಇಸಬಗೋಲ ಅಂದ್ರೇನು..? ಇದನ್ನ ತಿಂತಾರಾ..? ಹಾಗಾದ್ರೆ ಹೇಗೆ ತಿನ್ನೋದು.. ಇದನ್ನ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಅಂತಾ ಗೊತ್ತಿರುವುದಿಲ್ಲ. ಹಾಗಾಗಿ ಇಂದು ನಾವು ಇಸಬಗೋಲ ಅಂದ್ರೇನು..? ಇದನ್ಯಾಕೆ ಸೇವಿಸಬೇಕು ಅಂತಾ ಹೇಳಲಿದ್ದೇವೆ..

ಇವು ಕಿಡ್ನಿಯಲ್ಲಿ ಕಲ್ಲುಗಳನ್ನು ಉಂಟುಮಾಡುವ ಆಹಾರಗಳು ಇವುಗಳಿಂದ ದೂರವಿರುವುದು ಉತ್ತಮ..!

ಸರಿಯಾಗಿ ಮಲ ವಿಸರ್ಜನೆಯಾಗದಿದ್ದಾಗ, ಬಿಸಿ ನೀರನ್ನು ಕುಡಿಯಬೇಕು. ಬಾಳೆಹಣ್ಣನ್ನು ತಿನ್ನಬೇಕು ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಏನು ತಿಂದ್ರೂ ಮಲವಿಸರ್ಜನೆ ಸರಿಯಾಗಿ ಆಗದಿದ್ದಲ್ಲಿ, ಇಸಬಗೋಲನ್ನ ಸೇವಿಸಲಾಗತ್ತೆ. ಒಂದು ಚಮಚ ಇಸಬಗೋಲನ್ನ ಒಂದು ಗ್ಲಾಸ್ ನೀರಿನಲ್ಲಿ ಸೇರಿಸಿ, ತಕ್ಷಣ ಕುಡಿದರೆ, ಮಲವಿಸರ್ಜನೆ ತೊಂದರೆ ನಿವಾರಣೆಯಾಗುತ್ತದೆ.

ಇಲ್ಲಿ ನಾವು ಬಳಸುವ ನೀರು ರೂಮ್ ಟೆಂಪ್ರೆಚರ್‌ನಲ್ಲಿರಬೇಕು. ಜಾಸ್ತಿ ಬಿಸಿಯೂ ಇರಬಾರದು, ಜಾಸ್ತಿ ತಣ್ಣಗೆ ಇರಬಾರದು. ಇದು ದೇಹಕ್ಕೆ ತಂಪು ನೀಡುವ ಆಹಾರವಾಗಿದ್ದು, ಮಲವಿಸರ್ಜನೆ ಸರಿಯಾಗಿ ಆಗದಿದ್ದಲ್ಲಷ್ಟೇ, ಇದನ್ನ ಸೇವಿಸಬೇಕು. ಇಸಬಗೋಲನ್ನ ನೀರಿನಲ್ಲಿ ಹಾಕಿ, ತುಂಬಾ ಹೊತ್ತು ಇರಿಸಿ ಕುಡಿದರೆ ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ಇಸಬಗೋಲನ್ನ ನೀರಿಗೆ ಹಾಕಿದ ತಕ್ಷಣ, ಕದಡಿ ಕುಡಿಯಬೇಕು.

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿದರೆ ಎಷ್ಟು ಲಾಭ ಉಂಟು ಗೊತ್ತಾ..?

ಇಸಬಗೋಲೆಂದರೆ, ಇದು ಕೂಡ ಒಂದು ಬೆಳೆಯಾಗಿದೆ. ಇದು ಪ್ರಕೃತಿಯಿಂದ ಸಿಗುವ ವಸ್ತುವಾಗಿದೆ. ಹಾಗಾಗಿ ಇದನ್ನ ಸರಿಯಾದ ರೀತಿಯಲ್ಲಿ ತೆಗೆದುಕೊಂಡರೆ, ಆರೋಗ್ಯಕ್ಕೆ ಉತ್ತಮವಾಗಿದೆ. ನೀವು ಇಸಬಗೋಲ ತೆಗೆದುಕೊಳ್ಳುವಾಗ, ಊಟ ಮಾಡಿ ಒಂದು ಗಂಟೆಯಾಗಿರಬೇಕು. ಊಟ ಮಾಡಿ, ಅಥವಾ ತಿಂಡಿ ತಿಂದು ಒಂದು ಗಂಟೆಯಾದ ಬಳಿಕ, ನೀರಿನಲ್ಲಿ ಸೇರಿಸಿ ಕುಡಿಯಿರಿ.

ತೂಕ ಇಳಿಸುವುದಕ್ಕೂ ಇದು ಸಹಕಾರಿಯಾಗಿದೆ. ಹಾಗಂತ ಪ್ರತಿದಿನ ನೀವು ಇಸಬಗೋಲನ್ನ ಬಳಸಬಾರದು. ವಾರಕ್ಕೊಮ್ಮೆ ಬಳಸಿದ್ರೆ ಸಾಕು. ಇನ್ನು ನಿಮಗೆ ಇಸಬಗೋಲ ಬಳಸಿದ್ರೆ ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರಲ್ಲಿ ಕೇಳಿ ನಂತರ ಬಳಸುವುದು ಉತ್ತಮ.

- Advertisement -

Latest Posts

Don't Miss