ಬೇಸಿಗೆಗಾಲ ಅಂದ್ರೇನೆ, ಮಾವಿನ ಹಣ್ಣು ಮತ್ತು ಹಲಸಿನ ಹಣ್ಣಿನ ಸೀಸನ್ ಅಂತಾ ಅರ್ಥ. ಈ ಕಾಲದಲ್ಲಿ ಇವೆರಡು ಹಣ್ಣನ್ನು ಖಂಡಿತವಾಗಿ ತಿನ್ನಲೇಬೇಕು. ಯಾಕಂದ್ರೆ ಇದು ಬರೀ ಬೇಸಿಗೆಯಲ್ಲಷ್ಟೇ ಸಿಗುವ ಹಣ್ಣು. ಈ ಸಮಯದಲ್ಲೇ ಇದನ್ನ ತಿನ್ನಲೇಬೇಕು. ದಿನಕ್ಕೆ ಒಂದು ಮಾವಿನ ಹಣ್ಣು, 5ರಿಂದ 8 ಸೊಳೆ ಹಲಸಿನ ಹಣ್ಣನ್ನಾದ್ರೂವ ಸೇವಿಸಿ. ಅಥವಾ ವಾರಕ್ಕೆ ಮೂರು ಬಾರಿಯಾದ್ರೂ ಸೇವಿಸಬೇಕು. ಹಾಗಾದ್ರೆ ಯಾಕೆ ಹಲಸಿನ ಹಣ್ಣಿನ ಸೇವನೆ ಅಷ್ಟು ಮುಖ್ಯ ಅಂತಾ ತಿಳಿಯೋಣ ಬನ್ನಿ..
ಮಲಬದ್ಧತೆ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ ಇದ್ದರೆ, ಅದರಿಂದ ಮುಕ್ತಿ ಹೊಂದಲು, ಹಲಸಿನ ಹಣ್ಣು ಬಹುಉಪಯೋಗಿ. ಊಟಕ್ಕೂ ಮುನ್ನವೇ ಅಥವಾ ಖಾಲಿ ಹೊಟ್ಟೆಯಲ್ಲಿ ಹಲಸಿನ ಹಣ್ಣನ್ನ ತಿನ್ನಬಹುದು. ಹಾಗಂತ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದಲ್ಲ. ದಿನದ ಮಧ್ಯೆ ಹಸಿವಾದಾಗ ಹಲಸಿನ ಹಣ್ಣು ತಿನ್ನುವುದು ಉತ್ತಮ. ಇದರಿಂದ ನೀವು ತಿಂದ ಆಹಾರ, ಸರಿಯಾಗಿ ಜೀರ್ಣವಾಗುತ್ತದೆ. ಮಲವಿಸರ್ಜನೆ ಸರಿಯಾಗಿ ಆಗುತ್ತದೆ.
ಎರಡನೇಯದಾಗಿ ಹೃದಯದ ಆರೋಗ್ಯಕ್ಕೆ ಹಲಸಿನಹಣ್ಣು ಉತ್ತಮ. ಇದರಲ್ಲಿ ವಿಟಾಮಿನ್ ಬಿ6 ಇದ್ದು. ಇದು ಹೃದಯದ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿದೆ. ಯಾಕಂದ್ರೆ ಇದು ಹೃದಯ ನಾಳಗಳಿಗೆ ಸುಲಭವಾಗಿ ರಕ್ತ ಸಂಚಾರವಾಗಲು ಅನುವು ಮಾಡಿಕೊಡುತ್ತದೆ. ಹಾಗಾಗಿ ಹಲಸಿನ ಹಣ್ಣು ಹೃದಯದ ಆರೋಗ್ಯಕ್ಕೂ ಅತೀ ಉತ್ತಮವಾದ ಹಣ್ಣಾಗಿದೆ.
ನಿಮಗೆ ಸ್ವಲ್ಪ ನಡೆದರೂ ತುಂಬಾ ಸುಸ್ತಾಗುತ್ತದೆ, ಕಡಿಮೆ ಕೆಲಸ ಮಾಡಿದರೂ ತಕ್ಷಣ ಸುಸ್ತಾಗುತ್ತದೆ ಎಂದಲ್ಲಿ, ನೀವು ಹಲಸಿನಹಣ್ಣಿನ ಸೇವನೆ ಮಾಡಲೇಬೇಕು. ಯಾಕಂದ್ರೆ ನಿಮ್ಮ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ರಕ್ತವಿಲ್ಲದ ಕಾರಣ, ಹೀಗಾಗುತ್ತದೆ. ನಿಮ್ಮ ದೇಹದಲ್ಲಿ ರಕ್ತದ ಪ್ರಮಾಣ ಸರಿಯಾಗಿ ಇರಬೇಕು ಅಂದ್ರೆ, ನೀವು ಹಲಸಿನ ಹಣ್ಣು ತಿನ್ನಿ. ಇದರಿಂದ ರಕ್ತ ಹೆಚ್ಚುವುದಲ್ಲದೇ, ದೇಹದಲ್ಲಿ ಕಬ್ಬಿಣಾಂಶ ಕೂಡ ಹೆಚ್ಚುತ್ತದೆ. ಅಲ್ಲದೇ ಕ್ಯಾನ್ಸರ್ ಬರುವುದನ್ನ ಕೂಡ ತಡೆಗಟ್ಟುವ ಶಕ್ತಿ ಹಲಸಿನ ಹಣ್ಣಿಗಿದೆ.