Friday, August 8, 2025

Latest Posts

ಬೆಂಡೇಕಾಯಿ ತಿನ್ನುವ ಮುನ್ನ ಈ ವಿಷಯಗಳನ್ನು ಖಂಡಿತ ನೆನಪಿನಲ್ಲಿಡಿ..

- Advertisement -

ಬೆಂಡೇಕಾಯಿ ಅಂದ್ರೆ ಕೆಲವರಿಗೆ ಅಲರ್ಜಿ ಮತ್ತು ಹಲವರಿಗೆ ಎನರ್ಜಿ. ರುಚಿಕರವೂ, ಆರೋಗ್ಯಕರವೂ ಆಗಿರುವಂಥ ಬೇಂಡೆಕಾಯಿ ತಿಂದ್ರೆ, ನಮ್ಮ ಆರೋಗ್ಯಕ್ಕೆ ಉತ್ತಮ ಲಾಭಗಳಿದೆ. ಆದ್ರೆ ಇದನ್ನು ಸರಿಯಾದ ಸಮಯಕ್ಕೆ, ಸರಿಯಾದ ರೀತಿಯಲ್ಲಿ ತಿನ್ನಬೇಕಷ್ಟೇ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ನಿಮ್ಮ ಕಾನ್ಫಿಡೆನ್ಸ್ ಕಡಿಮೆಯಾಗುವುದು ಈ ಕಾರಣದಿಂದಲೇ..- ಭಾಗ 1

ರಾತ್ರಿ ಸಮಯದಲ್ಲಿ ಬೆಂಡೇಕಾಯಿಯಿಂದ ಮಾಡಿದ ಖಾದ್ಯವನ್ನು ತಿನ್ನಬಾರದು. ಇದರಲ್ಲಿ ವಾತ ಸಮಸ್ಯೆ ಉಂಟಾಗುತ್ತದೆ. ಇದನ್ನು ರಾತ್ರಿ ಹೊತ್ತು ಸೇವಿಸಿದರೆ, ಜೀರ್ಣಕ್ರಿಯೆ ಸಮಸ್ಯೆಯೂ ಬರುತ್ತದೆ. ಹಾಗಾಗಿ ದಿನದಲ್ಲಿ ಬೆಂಡೇಕಾಯಿ ತಿನ್ನಿ ಹೊರತು ರಾತ್ರಿಯಲ್ಲ.

ನಿಮ್ಮ ಕಾನ್ಫಿಡೆನ್ಸ್ ಕಡಿಮೆಯಾಗುವುದು ಈ ಕಾರಣದಿಂದಲೇ..- ಭಾಗ 2

ಇನ್ನು ಬೆಂಡೇಕಾಯಿ ಪಲ್ಯ ಅಥವಾ ಸಾರು ಇತ್ಯಾದಿ ಸೇವಿಸುವಾಗ ಅದರ ಜೊತೆ ಮೊಸರು, ಹಾಲು ಸೇರಿಸಬೇಡಿ. ಉದಾಹರಣೆಗೆ ಮೊಸರನ್ನದ ಜೊತೆ ಅಥವಾ ಮೊಸರವಲಕ್ಕಿ ಜೊತೆ, ಮಿಲ್ಕ್ ಶೇಕ್‌,  ಬೆಂಡೇಕಾಯಿ ಸೇರಿಸಬೇಡಿ. ಒಂದೆರಡು ಬಾರಿ ಮೊಸರಿನ ಜೊತೆ ಬೇಂಡೆಕಾಯಿ ತಿಂದ್ರೆ ಏನೂ ಆಗಲ್ಲ. ಯಾಕಂದ್ರೆ ಕಲವರಿಗೆ ಮೊಸರನ್ನದ ಜೊತೆ ಬೆಂಡೇಕಾಯಿ ಪಲ್ಯ ತಿನ್ನೋದಂದ್ರೆ ಇಷ್ಟ. ಹಾಗಂತ ಅದನ್ನೇ ಅಭ್ಯಾಸ ಮಾಡಿಕೊಳ್ಳಬೇಡಿ. ಯಾಕಂದ್ರೆ ಇದು ವಿರುದ್ಧ ಪದಾರ್ಥಗಳು. ಹೀಗೆ ವಿರುದ್ಧ ಆಹಾರ ತಿನ್ನುವುದು ನಮ್ಮ ಆರೋಗ್ಯಕ್ಕೆ ಉತ್ತಮವಲ್ಲ.

ಈ 7 ಲಕ್ಷಣಗಳಿಂದಲೇ ನೀವು ಯಶಸ್ವಿಯಾಗುತ್ತೀರೋ, ಇಲ್ಲವೋ ಎಂದು ತಿಳಿಯಬಹುದು- ಭಾಗ 1

ಇನ್ನು ನೀವು ಮಾರುಕಟ್ಟೆಯಿಂದ ಬೆಂಡೇಕಾಯಿ ತರುವಾಗ ಸರಿಯಾಗಿ ನೋಡಿ ತನ್ನಿ. ಹೈಬ್ರೀಡ್ ಬೇಂಡೆಕಾಯಿ ತರಬೇಡಿ. ಮತ್ತು ಹೆಚ್ಚು ಬೀಜವಿಲ್ಲದ ಬೆಂಡೇಕಾಯಿ ತನ್ನಿ. ಇದನ್ನ ಸಾಮಾನ್ಯ ಭಾಷೆಯಲ್ಲಿ ಎಳೆಯ ಬೆಂಡೇಕಾಯಿ ಅಂತಾರೆ. ಇದರ ಸೇವನೆಯಿಂದಷ್ಟೇ ನೀವು ಆರೋಗ್ಯ ಲಾಭ ಪಡೆಯಬಹುದು ವಿನಃ, ಹೈಬ್ರೀಡ್ ತರಕಾರಿಯಿಂದಲ್ಲ.

ಈ 7 ಲಕ್ಷಣಗಳಿಂದಲೇ ನೀವು ಯಶಸ್ವಿಯಾಗುತ್ತೀರೋ, ಇಲ್ಲವೋ ಎಂದು ತಿಳಿಯಬಹುದು- ಭಾಗ 2

- Advertisement -

Latest Posts

Don't Miss