Friday, April 18, 2025

Latest Posts

ಮುಲ್ತಾನಿ ಮಿಟ್ಟಿಯನ್ನ ಹೇಗೆಲ್ಲಾ ಬಳಸಬಹುದು..? ಇದರಿಂದಾಗುವ ಲಾಭವೇನು..?

- Advertisement -

ಮುಲ್ತಾನಿ ಮಿಟ್ಟಿಯ ಫೇಸ್‌ಪ್ಯಾಕ್ ಮಾಡಬಹುದು ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಇದರೊಂದಿಗೆ ಇನ್ನೂ ಕೆಲವು ಸಾಮಗ್ರಿಗಳನ್ನ ಸೇರಿಸಿ, ಪ್ಯಾಕ್ ತಯಾರಿಸಬಹುದು. ಹಾಗಾದ್ರೆ ಮುಲ್ತಾನಿ ಮಿಟ್ಟಿಯನ್ನ ಹೇಗೆಲ್ಲಾ ಬಳಸಬಹುದು..? ಇದರಿಂದಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..

ಫೇಶಿಯಲ್ ಗ್ಲೋ ಬರಲು ಮುಲ್ತಾನಿಮಿಟ್ಟಿಯನ್ನ ಬಳಸಬೇಕು. ಒಂದು ಸ್ಪೂನ್ ಮುಲ್ತಾನಿ ಮಿಟ್ಟಿ ಮತ್ತು ಒಂದು ಸ್ಪೂನ್ ಶ್ರೀಗಂಧದ ಪುಡಿ ಮತ್ತು ಒಂದುವರೆ ಸ್ಪೂನ್ ಹಾಲು ಮತ್ತು ರೋಸ್ವಾಟರ್ ಮತ್ತು ಬೇಕಾದಷ್ಟು ನೀರು ಬೆರೆಸಿ, ಥಿಕ್ ಪೇಸ್ಟ್ ಮಾಡಿ. ಇದನ್ನ ಮುಖಕ್ಕೆ ಹಚ್ಚಿ. 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದು ಹಚ್ಚಿದ ಬಳಿಕ, ಎರಡು ಡ್ರಾಪ್ಸ್ ತೆಂಗಿನ ಎಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡಿ.

ಈಗ ಆಯ್ಲಿ ಸ್ಕಿನ್‌ಗೆ ಫೇಸ್‌ಪ್ಯಾಕ್ ಹೀಗೆ ತಯಾರಿಸಬೇಕು. ಒಂದು ಸ್ಪೂನ್ ಮುಲ್ತಾನಿ ಮಿಟ್ಟಿ, ಜೊತೆಗೆ ಮೊಸರು, ಒಂದು ಸ್ಪೂನ್ ಜೇನುತುಪ್ಪ ಮತ್ತು ಅರಿಶಿನ, ಇವಿಷ್ಟನ್ನು ಬಳಸಿ, ಫೇಸ್‌ಪ್ಯಾಕ್ ತಯಾರಿಸಿ. ಇದನ್ನ ಹಚ್ಚಿಕೊಂಡು, 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ವಾರಕ್ಕೆರಡು ಬಾರಿ ಈ ಫೇಸ್‌ಪ್ಯಾಕ್ ಹಾಕಿ.

ಮೂರನೇಯದ್ದು ಡ್ರೈ ಫೇಸ್ ಇರುವವರಿಗೆ. ಅರ್ಧ ಕಪ್ ಹಣ್ಣಾದ ಪಪ್ಪಾಯಿ ಪೇಸ್ಟ್. ಒಂದು ಸ್ಪೂನ್ ಮುಲ್ತಾನಿ ಮಿಟ್ಟಿ, ಒಂದು ಸ್ಪೂನ್ ಹನಿ ಇವೆಲ್ಲವನ್ನೂ ಮಿಕ್ಸ್ ಮಾಡಿ, ಮುಖಕ್ಕೆ ಅಪ್ಲೈ ಮಾಡಿ, ಡ್ರೈ ಆದ್ಮೇಲೆ ಫೇಸ್‌ವಾಶ್ ಮಾಡಿ.

Women’s day special ವಿದ್ಯಾಭ್ಯಾಸವಿಲ್ಲದವರು ಕೂಡ ಈ ಕೆಲಸ ಮಾಡಬಹುದು.. ಭಾಗ 2

ಗಾಢವಾಗಿ ನಿದ್ದೆ ಮಾಡಲು ರಾತ್ರಿ ಮಲಗುವಾಗ ಇದನ್ನು ಕುಡಿಯಿರಿ..

ಬಿಸ್ಕೇಟ್ ಬಳಸಿ ಹಲ್ವಾನೂ ತಯಾರಿಸಬಹುದು ನೋಡಿ..

- Advertisement -

Latest Posts

Don't Miss